ವೀರಾಜಪೇಟೆ, ನ. ೧೮: ಪೋಷಕರು ಯಾವುದೇ ಕಾರಣಕ್ಕೂ ತಮ್ಮ ವಾಹನಗಳನ್ನು ಅಪ್ರಾಪ್ತ ಬಾಲಕರಿಗೆ ಚಾಲನೆ ಮಾಡಲು ನೀಡಬಾರದು. ಒಂದು ವೇಳೆ ನೀಡಿದಲ್ಲಿ ಕಾನೂನಿನ ಪ್ರಕಾರ ಪೋಷಕರಿಗೆ ಭಾರೀ ದಂಡ ವಿಧಿಸಲಾಗುತ್ತದೆ ಎಂಬುದಕ್ಕೆ ವೀರಾಜಪೇಟೆಯಲ್ಲಿ ಮತ್ತೊಂದು ಪ್ರಕರಣ ಸಾಕ್ಷಿಯಾಗಿದೆ. ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ನ್ಯಾಯಾಲಯವು ಬಾಲಕನ ತಂದೆಗೆ ರೂ ೨೫,೦೦೦ ದಂಡ ವಿಧಿಸಿ ಆದೇಶಿಸಿದೆ.

ವೀರಾಜಪೇಟೆ ಸಮೀಪದ ಅರಮೇರಿ-ದೇವಣಗೇರಿ ಗ್ರಾಮದ ಜಂಕ್ಷನ್‌ನಲ್ಲಿ ೧೭ ವರ್ಷ ಪ್ರಾಯದ ಅಪ್ರಾಪ್ತ ಬಾಲಕನೊಬ್ಬ ಬುಲೆಟ್ ಬೈಕ್ ಚಾಲನೆ ಮಾಡುತ್ತಿದ್ದಾಗ ಪ್ರಕರಣ ದಾಖಲಿಸಿಕೊಂಡ ವೀರಾಜಪೇಟೆ ಗ್ರಾಮಾಂತರ ಪೊಲೀಸರು, ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆ ಮಾಡಲು ನೀಡಿದ ವಾಹನದ ಮಾಲೀಕ ಹಾಗೂ ಬಾಲಕನ ತಂದೆ ಅಭ್ಯತ್‌ಮಂಗಲದ ನಿವಾಸಿ ಎಂ.ಕೆ. ಧನಂಜಯ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ವೀರಾಜಪೇಟೆಯ ಪ್ರಧಾನ ಸಿವಿಲ್ ನ್ಯಾಯಾಧೀಶರು, ಅಪ್ರಾಪ್ತ ಬಾಲಕನಿಗೆ ವಾಹನ ಚಾಲನೆಗೆ ಅವಕಾಶ ನೀಡಿದ ತಪ್ಪಿಗಾಗಿ ತಂದೆ ಧನಂಜಯ ಅವರಿಗೆ ರೂ ೨೫,೦೦೦ ದಂಡ ವಿಧಿಸಿದ್ದಾರೆ. ಅಲ್ಲದೆ, ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿದ ಅಪ್ರಾಪ್ತ ಬಾಲಕನಿಗೂ ಕಾನೂನಿನ ಪ್ರಕಾರ ದಂಡ ವಿಧಿಸುವ ಸಾಧ್ಯತೆಯಿದೆ ಎಂದು ವೀರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.