ಮಡಿಕೇರಿ, ನ. ೧೭: ತಲಕಾವೇರಿಯಲ್ಲಿ ತೀರ್ಥೋದ್ಭವದ ಪವಿತ್ರ ಸಂದರ್ಭದಿAದ ಕೊಡಗು ಏಕೀಕರಣ ರಂಗದ ಮೂಲಕ ವರ್ಷಂಪ್ರತಿ ಒಂದು ತಿಂಗಳ ಕಾಲ ಹಮ್ಮಿಕೊಂಡು ಬರಲಾಗುತ್ತಿರುವ ಅನ್ನಸಂತರ್ಪಣೆ ಕಾರ್ಯ ಕಿರುಸಂಕ್ರಮಣ ದಿನವಾದ ಸೋಮವಾರದಂದು ಮುಕ್ತಾಯಗೊಂಡಿತು.
ಅಕ್ಟೋಬರ್ ೧೬ ರಿಂದ ಕೊ.ಏ.ರ. ಮುಂದಾಳತ್ವದಲ್ಲಿ ನಾಡಿನ ಭಕ್ತಾದಿಗಳ ಸಹಕಾರದೊಂದಿಗೆ ಈ ವರ್ಷದ ಅನ್ನಸಂತರ್ಪಣಾ ಕಾರ್ಯ ಯಶಸ್ವಿಯಾಗಿ ನಡೆಯಿತು. ಈ ವರ್ಷ ಸರಿಸುಮಾರು ೨ ಲಕ್ಷ ಮಂದಿ ಈ ಕ್ಷೇತ್ರದಲ್ಲಿ ದಾಸೋಹವನ್ನು ಸ್ವೀಕರಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ ೮.೩೦ ರಿಂದ ಉಪಾಹಾರ ವ್ಯವಸ್ಥೆ. ೧೧.೩೦ ರಿಂದ ಸಂಜೆಯ ತನಕವೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಕಾರ್ಯಕ್ಕೆ ಕೊಡಗು ಏಕೀಕರಣ ರಂಗದ ತಂಡದವರೊAದಿಗೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು, ಕುಟುಂಬದವರು, ಸಮಾಜಗಳು, ಸ್ತಿçÃಶಕ್ತಿ ಗುಂಪು, ಪೊಮ್ಮಕ್ಕಡ ಕೂಟ ಸೇರಿದಂತೆ ಹಲವಷ್ಟು ಮಂದಿ ವೈಯಕ್ತಿಕವಾಗಿಯೂ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಂದ ಜನರು ವಸ್ತುರೂಪದಲ್ಲಿ, ಹಣದ ರೂಪದಲ್ಲಿ ಅನ್ನಸಂತರ್ಪಣೆಯAತಹ ಒಂದು ತಿಂಗಳ ಕಾಲದ ಮಹಾಯಜ್ಞಕ್ಕೆ ತಮ್ಮಿಂದಾದ ಸಹಕಾರವನ್ನು ನೀಡಿದ್ದಾರೆ. ಪ್ರಸಕ್ತ ವರ್ಷ ಅಂದಾಜು ರೂ. ೨೫ ಲಕ್ಷಕ್ಕೂ ಹೆಚ್ಚಿನ ಹಣ ಖರ್ಚಾಗಿದೆ.
ಇಷ್ಟು ಮೊತ್ತವೂ ದಾನಿಗಳಿಂದ ಸಂಗ್ರಹವಾಗಿದೆ. ಪೂರ್ಣ ಲೆಕ್ಕಾಚಾರ ಇನ್ನಷ್ಟೆ ನಡೆಯಬೇಕಿದೆ. ಖರ್ಚು ಕಳೆದು ಒಂದಷ್ಟು ಮೊತ್ತವೂ ಬಾಕಿಯಾಗುವ ಸಾಧ್ಯತೆಯಿದೆ. ನಾಡಿನ ಭಕ್ತಾದಿಗಳು ಭಾರೀ ಉತ್ಸುಕತೆ-ಭಕ್ತಿಭಾವದಿಂದ ಸಹಕಾರ ನೀಡಿರುವುದು ಮಾತ್ರವಲ್ಲದೆ ಕಳೆದ ಬಾರಿಗಿಂತಲೂ ಈ ವರ್ಷ ಇನ್ನಷ್ಟು ಸಂಘ-ಸAಸ್ಥೆಗಳು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸಂತಸ ಮೂಡಿಸಿದೆ ಎಂದು ಕೊ.ಏ.ರ. ಪ್ರಮುಖರಾದ ಮಂದಪAಡ ಸತೀಶ್ ಅವರು ತಿಳಿಸಿದ್ದಾರೆ.
ಆರಂಭದ ವರ್ಷಗಳಲ್ಲಿ ಮಾತ್ರ ರಂಗದ ಪ್ರಯತ್ನಕ್ಕೆ ಒಂದಷ್ಟು ತೊಂದರೆಯಾಗುತ್ತಿತ್ತು. ನಂತರದ ವರ್ಷಗಳಲ್ಲಿ ಭಕ್ತರು ತೊಡಗಿಸಿಕೊಳ್ಳುವಿಕೆ ಸ್ಮರಣೀಯವಾಗಿದೆ. ಆಗಮಿಸಿದ ಯಾರೊಬ್ಬ ಭಕ್ತಾದಿಗಳೂ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸದಂತೆ ನಿಗಾವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬೆಳಿಗ್ಗಿನ ಉಪಾಹಾರಕ್ಕೆ ಉಪ್ಪಿಟ್ಟು, ಕೇಸರಿಬಾತ್, ಪೊಂಗಲ್, ಟೊಮೆಟೊರೈಸ್, ಇಡ್ಲಿ, ವಡೆ, ಕಾಫಿ, ಅಪರಾಹ್ನ ಊಟಕ್ಕೆ, ಅನ್ನ, ಸಾಂಬಾರ್, ಪಲ್ಯ, ಉಪ್ಪಿನಕಾಯಿ, ಮೊಸರು, ಪಲಾವ್, ಪಾಯಸ ಈ ರೀತಿಯಾಗಿ ಪ್ರತಿದಿನ ವ್ಯವಸ್ಥೆ ಮಾಡಲಾಗುತ್ತಿತ್ತು.
ಕಿರುಸಂಕ್ರಮಣದ ದಿನವಾದ ನಿನ್ನೆ ಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜೆಯೊಂದಿಗೆ ಈ ಬಾರಿಯ ಸೇವಾ ಕಾರ್ಯ ಮುಕ್ತಾಯಗೊಂಡಿದೆ. ನಾಪೋಕ್ಲುವಿನ ರಾಮ ಟ್ರಸ್ಟ್ನ ರವಿ ಉಡುಪ ಹಾಗೂ ತಂಡದವರು ಅಡುಗೆಯ ವ್ಯವಸ್ಥೆಯನ್ನು ನಿಭಾಯಿಸಿರುವುದಾಗಿ ಸತೀಶ್, ಅಜ್ಜೀನಂಡ ತಮ್ಮು ಪೂವಯ್ಯ ಅವರುಗಳು ಮಾಹಿತಿ ನೀಡಿದರು.