ಪಳೆಯAಡ ಪಾರ್ಥ ಚಿಣ್ಣಪ್ಪ
ವೀರಾಜಪೇಟೆ, ನ. ೧೬: ವೀರಾಜಪೇಟೆಯಲ್ಲಿ ಸುಮಾರು ೬೦ ವರ್ಷಗಳ ಹಿಂದೆ ಆರಂಭಗೊAಡಿದ್ದ ಉಪಬಂದೀಖಾನೆ ಕಳೆದ ಹಲವಾರು ವರ್ಷದಿಂದ ಮುಚ್ಚಲ್ಪಟ್ಟಿದ್ದು ಹಲವು ರೀತಿಯಲ್ಲಿ ಸಮಸ್ಯೆಗೆ ಕಾರಣವಾಗುತ್ತಿದೆ.
ವೀರಾಜಪೇಟೆ ತಾಲೂಕು ಹಾಗೂ ಪೊನ್ನಂಪೇಟೆ ತಾಲೂಕಿನ ೬ ನ್ಯಾಯಾಲಯಗಳು ಹಾಗೂ ವೀರಾಜಪೇಟೆ ಉಪವಿಭಾಗದ ೬ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಬರುವ ವಿಚಾರಣಾಧೀನ ಖೈದಿಗಳನ್ನು ಮಡಿಕೇರಿಯ ಕೇಂದ್ರ ಕಾರಾಗೃಹಕ್ಕೆ ರವಾನಿಸುವುದು ಅನಿವಾರ್ಯವಾಗಿದೆ. ಇದರಿಂದ ವಿಚಾರಣಾಧೀನ ಖೈದಿಗಳಿಗೂ ಹಾಗೂ ಅವರ ಸಂಬAಧಿಕರಿಗೆ ಕಷ್ಟವಾಗುತ್ತಿದೆ.
ಈ ಹಿಂದೆ ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಬ್ಜೈಲಿನಲ್ಲಿ ೨೨ ಮಂದಿ ವಿಚಾರಣಾಧೀನ ಖೈದಿಗಳನ್ನು ಇಡುವ ಸಾಮರ್ಥ್ಯವಿತ್ತು. ೨ ತಾಲೂಕುಗಳ ೬ ಪೊಲೀಸ್ ಠಾಣಾ ವ್ಯಾಪ್ತಿಗಳ ಆರೋಪಿಗಳನ್ನು ಇಡಲು ಅನುಕೂಲವಾಗುತ್ತಿತ್ತು. ಇದೀಗ ಪ್ರತಿನಿತ್ಯ ಮಡಿಕೇರಿಯಿಂದ ವೀರಾಜಪೇಟೆ ಹಾಗೂ ಪೊನ್ನಂಪೇಟೆ ನ್ಯಾಯಲಯಗಳಿಗೆ ಈ ಖೈದಿಗಳನ್ನು ಕರೆತರಲು ಪೊಲೀಸ್ ಇಲಾಖೆಗೆ ಸಾವಿರಾರು ರೂಗಳು ವ್ಯಯವಾಗುತ್ತಿದೆ. ಸರ್ಕಾರಕ್ಕೆ ಕೋಟ್ಯಂತರ ರೂಗಳ ನಷ್ಟ ಉಂಟಾಗುತ್ತಿದೆ.
ವೀರಾಜಪೇಟೆಯಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕಾಗಿ ಜಾಗವನ್ನು ಸಮತಟ್ಟು ಮಾಡುವ ಸಂದರ್ಭ ಗುತ್ತಿಗೆದಾರರ ನಿರ್ಲಕ್ಷö್ಯದಿಂದ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಉಪಬಂದೀಖಾನೆ ಒಂದು ಭಾಗದ ರಕ್ಷಣಾ ಗೋಡೆ ಕುಸಿದು ಬಿದ್ದಿತು. ಇದರಿಂದ ವಿಚಾರಣಾಧೀನ ಖೈದಿಗಳಿಗೆ ರಕ್ಷಣೆ ಇಲ್ಲದ ಕಾರಣ ೨೨ ಖೈದಿಗಳನ್ನು ಮಡಿಕೇರಿಯ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಿ ವೀರಾಜಪೇಟೆ ಸಬ್ಜೈಲಿಗೆ ಬೀಗ ಜಡಿಯಲಾಯಿತು.
ಬಹಳ ವರ್ಷಗಳ ಕಾಲ ಸಬ್ಜೈಲು ದುರಸ್ತಿ ಕಾಣದೆ ಬೀಗ ಹಾಕಿದ ರೀತಿಯಲ್ಲಿ ಮುಂದುವರೆದ ಹಿನ್ನಲೆಯಲ್ಲಿ ಕಳೆದ ೧೦ ವರ್ಷಗಳ ಹಿಂದೆ ಬಂದೀಖಾನೆ ಇಲಾಖೆಯ ಸಿಬ್ಬಂದಿಗಳು ವಾಸಕ್ಕೆ ಇದ್ದ ವಸತಿಗೃಹವನ್ನು ಕೆಡವಿ ೧೦೦ ವಿಚಾರಣಾಧೀನ ಖೈದಿಗಳನ್ನು ಇರಿಸುವಂತಹ ಸುಸಜ್ಜಿತ ಹಾಗು ವೈಜ್ಞಾನಿಕವಾದ ಕಟ್ಟಡವನ್ನು ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿತು. ರೂ.೪.೫ ಕೋಟಿ ವೆಚ್ಚದಲ್ಲಿ ಇದಕ್ಕಾಗಿ ಗಾಂಧಿನಗರದಲ್ಲಿ ಬೃಹತ್ ಕಲ್ಲುಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು ತಾಂತ್ರಿಕ ಕಾರಣಗಳಿಂದ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತು ಉಪಬಂದಿಖಾನೆ ಪಳೆಯುಳಿಕೆಯಾಗಿ ಉಳಿದುಕೊಂಡಿದೆ.