ಕುಶಾಲನಗರ, ನ. ೧೬: ಪ್ಯಾಡಿಂಗ್ ಟನ್ ಸಮೂಹ ಸಂಸ್ಥೆಯ ಮೂಲಕ ಗ್ರಾಹಕರಿಗೆ ನೀಡುತ್ತಿರುವ ಗುಣಮಟ್ಟದ ಸೇವೆ, ವಿಶ್ವಾಸಾರ್ಹತೆ, ಉದ್ಯೋಗ ಸೃಷ್ಟಿ ಹಾಗೂ ಉದ್ಯಮ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ, ಕುಶಾಲನಗರ ಮೂಲದ ಉದ್ಯಮಿ ಹಾಗೂ ಪ್ಯಾಡಿಂಗ್ಟನ್ ಸಂಸ್ಥಾಪಕ ಟಿ.ಎಲ್. ಪ್ರವೀಣ್ ಅವರಿಗೆ ಎಕ್ಸಲೆನ್ಸ್ ಆಫ್ ಬಿಸಿನೆಸ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಪ್ರಸ್ತುತ ಮಣಿಪಾಲದಲ್ಲಿ ನೆಲೆಸಿರುವ ಪ್ರವೀಣ್ ಅವರಿಗೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿçÃಸ್ ವತಿಯಿಂದ ಸಂಸ್ಥೆಯ ನಿವೇಶನದಲ್ಲಿ ನಡೆದ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭ ಚೇಂಬರ್ ಆಫ್ ಕಾಮರ್ಸ್ನ ಕುಶಾಲನಗರ ಸ್ಥಳೀಯ ಸಮಿತಿಗೆ ಚಿಕ್ಕಣ್ಣ ಬಡಾವಣೆಯಲ್ಲಿ ನಿವೇಶನ ದಾನ ಮಾಡಿದ ಆವರ್ತಿಯ ಯೋಗೇಶ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಬಿ. ಲಿಂಗರಾಜು ಹಾಗೂ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟಿçÃಸ್ನ ಸ್ಥಾಪಕ ಕಾರ್ಯದರ್ಶಿ ಬಿ.ಆರ್. ನಾರಾಯಣ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.