ಮಡಿಕೇರಿ, ನ. ೧೬: ಹಿರಿಯ ಸಹಕಾರಿಗಳು ಕಟ್ಟಿ ಬೆಳೆಸಿದ ಸಹಕಾರ ಸಂಸ್ಥೆಗಳು ಯಾವುದೇ ಕಾರಣಕ್ಕೂ ನಿಷ್ಕಿçಯವಾಗಬಾರದು. ಮಹಿಳಾ ಸಹಕಾರ ಸಂಘಗಳ ಹಿರಿಯ ಮಹಿಳಾ ಸಹಕಾರಿಗಳು ಯುವತಿಯರ ಸಹಭಾಗಿತ್ವದಲ್ಲಿ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಉನ್ನತಿಗೆ ಕೊಂಡೊಯ್ಯಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು ರಾಬಿನ್ ದೇವಯ್ಯ ಕರೆ ನೀಡಿದರು.

೭೩ನೇ ಸಹಕಾರ ಸಪ್ತಾಹದ ಅಂಗವಾಗಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್, ಮಹದೇವಪೇಟೆ ಮಹಿಳಾ ಸಹಕಾರ ಸಂಘ, ಕೋಟೆ ಮಹಿಳಾ ಸಹಕಾರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಬಸಪ್ಪ ಶಿಶು ವಿಹಾರ ಸಭಾಂಗಣದಲ್ಲಿ ‘ಗಣಕೀಕರಣ, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲೈಜೇಷನ್ ಪ್ರಕ್ರಿಯೆಗಳು ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಪೋಷಕ’ ಎಂಬ ವಿಷಯಾಧಾರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಬಿನ್ ದೇವಯ್ಯ ಮಾತನಾಡಿದರು.

ಮಹಿಳೆ ಅಡುಗೆ ಮನೆಗೆ ಸೀಮಿತ ಎಂಬ ದಿನಮಾನಗಳಲ್ಲಿಯೇ ೧೯೩೮ರಲ್ಲಿ ವೀರಾಜಪೇಟೆಯಲ್ಲಿ ಮಹಿಳಾ ಸಹಕಾರಿಗಳು ಮಹಿಳಾ ಸಂಘ ಹುಟ್ಟುಹಾಕಿ ಸಮಾಜ ಸೇವೆಗೆ ಮುಂದಾಗಿದ್ದರು. ಅದರಂತೆ ೧೯೪೩ರಲ್ಲಿ ಸೋಮವಾರಪೇಟೆ ಹಾಗೂ ೧೯೪೪ರಲ್ಲಿ ಮಡಿಕೇರಿ ಮಹಿಳಾ ಸಮಾಜದ ಮೂಲಕ ಮಹಿಳೆಯರನ್ನು ಸ್ವಾವಲಂಬಿ ಮತ್ತು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಕೆಲಸವಾಗಿದೆ.

ಇಚ್ಚಾಶಕ್ತಿ, ಸಮಾಜ ಸೇವೆಯ ಹುಮ್ಮಸ್ಸು ಮತ್ತು ನಿರಂತರ ಕಾರ್ಯಚಟುವಟಿಕೆಗಳಿಂದಲೇ ಇಂದು ಮಹಿಳಾ ಸಹಕಾರ ಸಂಘಗಳು ಜಿಲ್ಲೆಯಲ್ಲಿ ನಿಷ್ಕಿçಯವಾಗದೇ ಮುಂದುವರೆದುಕೊAಡು ಬಂದಿವೆ ಎಂದು ರಾಬಿನ್ ದೇವಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಪಿ.ಎಸ್. ಅರವಿಂದ ಅಣ್ಣಪ್ಪ ಮಾತನಾಡಿ, ಹಿರಿಯ ಮಹಿಳಾ ಸಹಕಾರಿಗಳು ಮನೆ ಮನೆಗೆ ತೆರಳಿ ಸಂಗ್ರಹಿಸಿದ ಕೇವಲ ೫ ಸಾವಿರ ರೂ. ಮೂಲ ಬಂಡವಾಳದೊAದಿಗೆ ಆರ್‌ಬಿಐ ಅನುಮೋದನೆ ಯೊಂದಿಗೆ ಜಿಲ್ಲೆಯಲ್ಲಿ ಮೊಟ್ಟ ಮೊದಲ ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ಆರಂಭ ಕಂಡಿತ್ತು. ಪ್ರಸ್ತುತ ಬ್ಯಾಂಕ್ ೧೦.೪೨ ಲಕ್ಷ ರೂ.ಗಳ ನಿವ್ವಳ ಲಾಭದಲ್ಲಿ ಭದ್ರ ಬುನಾದಿಯೊಂದಿಗೆ ಪ್ರಗತಿಯೆಡೆಗೆ ಸಾಗುತ್ತಿದೆ. ಈ ಮಹಿಳಾ ಬ್ಯಾಂಕಿನಿAದ ಸ್ವಾವಲಂಬಿ ಬದುಕಿಗಾಗಿ ಹತ್ತಾರು ಸಾಲ ಯೋಜನೆಗಳಿದ್ದು, ಅರ್ಹರು ಸದಸ್ಯತ್ವ ಪಡೆಯುವ ಮೂಲಕ ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಮಹದೇವಪೇಟೆ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸವಿತಾ ಭಟ್ ಮಾತನಾಡಿ, ೧೯೫೫ ಸ್ಥಾಪನೆಯಾದ ಸಹಕಾರ ಸಂಘದ ಕಟ್ಟಡ ೨೦ ಸಾವಿರ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಬಸಪ್ಪ ಶಿಶು ವಿಹಾರ ಹೆಸರಲ್ಲಿ ಪ್ರಖ್ಯಾತಿ ಪಡೆದಿದೆ. ಸಮಾಜದ ಕಟ್ಟಡಲ್ಲಿ ಟೈಲರಿಂಗ್, ನೃತ್ಯ, ಸಂಗೀತ ತರಬೇತಿ ಸಹಿತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಆತ್ಮ ವಿಶ್ವಾಸವೇ ಸಮಾಜ ಸೇವೆಗೆ ಪ್ರೇರಣೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಆ ದಿಸೆಯಲ್ಲಿ ಸಮಾಜದ ಕಾರ್ಯಚಟುವಟಿಕೆಗಳು ಸಾಗಿವೆ. ೧೯೫೫ರಿಂದ ೨೦೨೪ರವರೆಗೆ ನಿರಂತರವಾಗಿ ನಡೆಯುತ್ತಿದ್ದ ಶಿಶು ವಿಹಾರವನ್ನು ಇದೀಗ ಮಕ್ಕಳ ಅಲಭ್ಯತೆಯಿಂದ ಅನಿವಾರ್ಯವಾಗಿ ಸ್ಥಗಿತ ಮಾಡಲಾಗಿದೆ ಎಂದು ಅವರು ಇದೇ ಸಂದರ್ಭ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕೋಡಿರ ಪ್ರಸನ್ನ ತಮ್ಮಯ್ಯ ಮಾತನಾಡಿ, ಪೂರ್ವಿಕರು ಅತ್ಯಂತ ಮುತುವರ್ಜಿಯಿಂದ ಮಹಿಳಾ ಸಹಕಾರ ಸಂಘಗಳನ್ನು ಸ್ಥಾಪಿಸಿದ್ದಾರೆ. ಪರಿಣಾಮ ಇಂದು ಸಹಕಾರ ಕ್ಷೇತ್ರ ಉನ್ನತ ಬೆಳವಣಿಕೆ ಕಂಡಿದೆ ಎಂದು ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಎಂ.ಎA. ಶ್ಯಾಮಲ ದಿನದ ಮಹತ್ವ ಕುರಿತು ಮಾತನಾಡಿ, ದೇಶದಲ್ಲಿ ೩೨ ಕೋಟಿ ಮಂದಿ ಸದಸ್ಯರು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನು ಮನಗಂಡು ಕೇಂದ್ರ ಸರಕಾರ ೨೦೨೧ರಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ತೆರೆದಿದ್ದು ೨೦೨೪ರಲ್ಲಿ ರಾಷ್ಟಿçÃಯ ಸಹಕಾರ ನೀತಿಯನ್ನು ಜಾರಿಗೆ ತಂದಿದೆ. ೨೦೪೭ರ ವಿಕಸಿತ ಭಾರತ ಪರಿಕಲ್ಪನೆಗೆ ಸಹಕಾರ ಕ್ಷೇತ್ರವೂ ಬಹುದೊಡ್ಡ ಕೊಡುಗೆ ನೀಡಲಿದೆ. ನೆಮ್ಮದಿಯ ಮತ್ತು ಶಾಂತಿಯ ಸಮಾಜಕ್ಕೆ ಸಹಕಾರ ಕ್ಷೇತ್ರಗಳೇ ಭದ್ರ ಬುನಾದಿಯಾಗಿವೆ ಎಂದು ಸಮರ್ಥಿಸಿಕೊಂಡರು. ಯುವ ಪೀಳಿಗೆಯ ಮಾನಸಿಕತೆಗೆ ತಕ್ಕಂತೆ ಆಧುನೀಕರಣ, ಡಿಜಿಟಲೀಕರಣದಂತಹ ನವ ಆಯಾಮದ ಕಡೆಗೆ ಸಹಕಾರ ಕ್ಷೇತ್ರವೂ ಹೊರಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸಹಕಾರಿಗಳು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಮಾತನಾಡಿ, ಪ್ರತಿ ದೇಶಕ್ಕೂ ಅದರದ್ದೇ ಆದ ರಾಷ್ಟç ಧ್ವಜವಿದೆ. ಆದರೆ ಸಹಕಾರ ಕ್ಷೇತ್ರಕ್ಕೆ ಇಡೀ ವಿಶ್ವದಲ್ಲಿಯೇ ೭ ಬಣ್ಣಗಳನ್ನು ಹೊಂದಿರುವ ಏಕೈಕ ಧ್ವಜವಿದೆ. ಇದು ಸಹಕಾರ ಕ್ಷೇತ್ರದ ಹೆಮ್ಮೆ ಎಂದು ಹೇಳಿದರು.

ಇದೇ ಸಂದರ್ಭ ಹಿರಿಯ ಮಹಿಳಾ ಸಹಕಾರಿಗಳಾದ ವಸುಂಧರ ಪ್ರಸನ್ನ ಹಾಗೂ ಪಳಂಗAಡ ಕಮಲಾ ಸುಬ್ಬಯ್ಯ ಅವರನ್ನು ಮಹಿಳಾ ಸಹಕಾರ ಸಂಘಗಳ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್, ಮಹದೇವಪೇಟೆ ಮಹಿಳಾ ಸಹಕಾರ ಸಂಘ, ಕೋಟೆ ಮಹಿಳಾ ಸಹಕಾರ ಸಂಘಗಳ ವತಿಯಿಂದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ರಾಬಿನ್ ದೇವಯ್ಯ ಅವರನ್ನು ಸನ್ಮಾನಿಸಿ ಗೌರವಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಸುಂಧರ ಪ್ರಸನ್ನ ಕಾರ್ಯಚಟುವಟಿಕೆ ಇಲ್ಲದೇ ಕಳೆಗುಂದಿದ್ದ ಮಹಿಳಾ ಸಮಾಜವನ್ನು ಸಮಾನ ಮನಸ್ಕ ಮಹಿಳೆಯರ ಸಹಕಾರದಿಂದ ಮತ್ತೆ ಮುಂಚೂಣಿಗೆ ತರಲಾಗಿದೆ ಎಂದು ನುಡಿದರು. ಕಮಲಾ ಸುಬ್ಬಯ್ಯ ಮಾತನಾಡಿ, ೮ ದಶಕಗಳ ಹಿಂದೆ ಮಹಿಳಾ ಸಹಕಾರ ಸಂಘ ಹುಟ್ಟು ಹಾಕಿದ ಮಹನೀಯರೇ ನಮಗೆ ಆದರ್ಶವಾಗಿದ್ದಾರೆ. ಅವರ ಮಾರ್ಗದರ್ಶನದಿಂದಲೇ ಸಹಕಾರ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಮಹದೇವಪೇಟೆ ಮಹಿಳಾ ಸಹಕಾರ ಸಂಘದ ಸದಸ್ಯರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಅವರಿಂದ ಮೂಡಿ ಬಂದ ಭಕ್ತಿ ಗೀತೆ ಗಾಯನ ಕಾರ್ಯಕ್ರಮಕ್ಕೆ ಮೆರುಗು ತುಂಬಿತು. ಸಹಕಾರಿಗಳಾದ ಎಂ.ಎA. ಶ್ಯಾಮಲ ಮತ್ತು ಕಡ್ಲೇರ ಆಶಾ ಪ್ರಭು ಅವರುಗಳು ಸಹಕಾರ ಗೀತೆ ಹಾಡುವ ಮೂಲಕ ೭೩ನೇ ಸಹಕಾರ ಸಪ್ತಾಹಕ್ಕೆ ಗೌರವ ಸಮರ್ಪಿಸಿದರು.

ಸಭಾ ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಮೂಕಚಂಡ ಟಿ.ಸುಬ್ಬಯ್ಯ, ಎಸ್.ಆರ್. ಸುನಿಲ್ ರಾವ್, ಸಹಕಾರ ಸಂಘಗಳ ಪ್ರಬಾರ ಉಪನಿಬಂಧಕರಾದ ಶೈಲಜಾ ಉಪಸ್ಥಿತರಿದ್ದರು. ಶೈಲಾ ಮಂಜುನಾಥ್ ಮತ್ತು ನಿರ್ಮಲಾ ದಿವಾಕರ್ ಸ್ವಾಗತಿಸಿದರೆ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ವಂದಿಸಿದರು. ಆಯಿಷಾ ಹಮೀದ್ ಮತ್ತು ಪದ್ಮಿನಿ ಪೂವಣ್ಣ ಅವರು ಸನ್ಮಾನಿತರನ್ನು ಪರಿಚಯಿಸಿದರು.