ವೀರಾಜಪೇಟೆ, ನ. ೧೫: ಮನೆಯ ಕೈತೋಟದಲ್ಲಿ ಬೆಳೆದ ಬಾಳೆಗೊನೆಗಳನ್ನು ವ್ಯಾಪಾರ ಮಾಡಿ ಗಳಿಸಿದ ಹಣ ಹಂಚಿಕೊಳ್ಳುವ ಸಂಬAಧ ಏರ್ಪಟ್ಟ ಕಲಹ ಕೊಲೆಯಲ್ಲಿ ಅಂತ್ಯವಾದ ಪ್ರಕರಣಕ್ಕೆ ಸಂಬAಧಿಸಿದAತೆ ಅಪರಾಧಿಗೆ ವೀರಾಜಪೇಟೆ ೨ನೇ ಅಪರ ಜಿಲ್ಲಾ ಮತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.

ಚೆನ್ನಯ್ಯನಕೋಟೆ ಗ್ರಾಮದ ಗ್ರೋವ್ ಎಸ್ಟೇಟ್ (ಬಿ) ಲೈನ್ ಮನೆಯಲ್ಲಿ ವಾಸವಿದ್ದ ಪಂಜರಿ ಎರವರ ಚಾಮು (೫೨) ಎಂಬಾತನೇ ಜೀವಾವದಿ ಶಿಕ್ಷೆಗೆ ಒಳಗಾದ ವ್ಯಕ್ತಿ. ಜೇನುಕುರುಬರ ರಘು (೪೫) ಕೊಲೆಯಾದ ವ್ಯಕ್ತಿ. ಮೃತ ರಘು ಮತ್ತು ಪತ್ನಿ ಮುತ್ತಿ ಹಾಗೂ ಮಗ ಸತ್ಯು ಕೂಲಿ ಕೆಲಸ ಮಾಡಿಕೊಂಡು ತೋಟದ ಲೈನ್ ಮನೆಯಲ್ಲಿ ವಾಸವಿದ್ದರು. ಕೆಲ ಕಾಲದ ನಂತರ ಮೃತ ರಘು ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು.

ಈ ನಡುವೆ ಚಾಮು ಮತ್ತು ತಣ್ಣೀರುಹಳ್ಳ ಗ್ರಾಮದ ಟಾಟಾ ಕಾಫಿ ತೋಟದ ಕಾರ್ಮಿಕ ಚಂದ್ರ ಹಾಗೂ ಮೃತ ರಘು ಮೂವರು ಮನೆಯ ಕೈತೋಟದಲ್ಲಿ ಬೆಳೆದಿದ್ದ ಎರಡು ಬಾಳೆಗೊನೆಗಳನ್ನು ಮಾರಾಟ ಮಾಡಲು ಆಟೋವೊಂದರಲ್ಲಿ ಪಾಲಿಬೆಟ್ಟ ಪಟ್ಟಣಕ್ಕೆ ತೆರಳಿ ಬಾಳೆಗೊನೆಗಳನ್ನು ಮಾರಾಟ ಮಾಡಿ ಗಳಿಕೆಯ ಹಣದಿಂದ ಮದ್ಯದ ಅಂಗಡಿಯಲ್ಲಿ ಮದ್ಯ ಸೇವನೆ ಮಾಡಿ ಆಟೋವೊಂದರಲ್ಲಿ ಚೆನ್ನಯ್ಯನಕೋಟೆ ಗ್ರೋವ್ ಎಸ್ಟೇಟ್‌ನ ಲೈನ್‌ಮನೆಗೆ ತೆರಳುವ ಮುಖ್ಯದ್ವಾರದ ಬಳಿ ಬಂದು ಇಳಿಯುತ್ತಾರೆ.

ಈ ವೇಳೆ ಗಳಿಕೆಯ ಹಣದ ವಿಚಾರವಾಗಿ ಚಾಮು ಮತ್ತು ಮೃತ ರಘು ಮಧ್ಯೆ ಕಲಹ ನಡೆಯುತ್ತದೆ. ಕಲಹದಿಂದ ಬೇಸತ್ತ ಚಂದ್ರ ಅಲ್ಲಿಂದ ಮೃತ ರಘು ಮನೆಯ ಜಗುಲಿ ಮೇಲೆ ಮಲಗುತ್ತಾನೆ. ಬಳಿಕ ಚಾಮು ಕಾಡು ಮರದ ಕಟ್ಟಿಗೆಯಿಂದ ರಘುವಿನ ಮೇಲೆ ಹಲ್ಲೆ ಮಾಡಿ ಹತ್ಯೆಗೈದಿದ್ದ ಪ್ರಕರಣ ದಾಖಲಿಸಿಕೊಂಡಿದ್ದ ಸಿಐ ರಾಜು ಪಿ.ಕೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಇಲ್ಲಿನ ೨ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲಿಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿ ಚಾಮು ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಎಸ್. ನಟರಾಜ್ ಅವರು ಪಂಜರಿ ಎರವರ ಚಾಮುಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ೧೦ ಸಾವಿರ ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದಲ್ಲಿ ೩ ತಿಂಗಳ ಸಾದಾ ಜೈಲುವಾಸ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಯಾಸೀನ್ ಅಹ್ಮದ್ ವಾದ ಮಂಡಿಸಿದರು.