ಸೋಮವಾರಪೇಟೆ, ನ. ೧೪: ಜಿಲ್ಲೆಯ ಕೊಡವ ಸಮುದಾಯದವರನ್ನು ಒಳಗೊಂಡAತೆ ಕಾರ್ಯಾಚರಿಸುತ್ತಿರುವ ಮೈಸೂರು ಕೊಡವ ಸಮಾಜ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ ಐಗೂರಿನ ಮಚ್ಚಂಡ ಪ್ರಕಾಶ್ ಬೆಳ್ಳಿಯಪ್ಪ ನೇಮಕಗೊಂಡಿದ್ದಾರೆ.

ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಸಂಘದ ೨೨ನೇ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ೨ ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮಚ್ಚಂಡ ಪ್ರಕಾಶ್ ಬೆಳ್ಳಿಯಪ್ಪ, ಉಪಾಧ್ಯಕ್ಷರಾಗಿ ನಾಗಚೆಟ್ಟಿರ ನಿರನ್ ಉತ್ತಪ್ಪ, ಗೌರವ ಕಾರ್ಯದರ್ಶಿಯಾಗಿ ಅರಮಣಮಾಡ ಎಂ. ಪೊನ್ನಣ್ಣ, ಖಜಾಂಚಿಯಾಗಿ ಐಚಂಡ ಜಯ ಮೊಣ್ಣಪ್ಪ, ಜಂಟಿ ಕಾರ್ಯದರ್ಶಿಯಾಗಿ ಬಾಚಿರ ಲವ ಪೂವಯ್ಯ, ನಿರ್ದೇಶಕರುಗಳಾಗಿ ಆಟ್ರಂಗಡ ಪ್ರವೀಣ್ ಪೂವಣ್ಣ, ಮಲ್ಚೀರ ರುಶಿಲ್ ಬೋಜಣ್ಣ, ಚೆರಿಯಪಂಡ ವಿಶ್ವನಾಥ, ಕೊಟ್ರಂಗಡ ಪೆಮ್ಮಯ್ಯ, ಪಾಡೆಯಂಡ ಸುಗುಣ ಮುದ್ದಯ್ಯ ಅವರುಗಳು ಆಯ್ಕೆಯಾದರು.