ವೀರಾಜಪೇಟೆ, ನ. ೧೩: ದೀಪಾವಳಿ ಹಬ್ಬದ ಪ್ರಯುಕ್ತ ವೀರಾಜಪೇಟೆಯ ಹಿಂದೂ ಅಗ್ನಿದಳದ ವತಿಯಿಂದ ವೀರಾಜಪೇಟೆ ಪಟ್ಟಣದ ಮೂರ್ನಾಡು ರಸ್ತೆ ಹಾಗೂ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಮತ್ತು ವರ್ತಕರಿಗೆ ಸಿಹಿ ಹಾಗೂ ಮಜ್ಜಿಗೆಯನ್ನು ವಿತರಿಸಲಾಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ ಹಿಂದೂ ಅಗ್ನಿದಳದ ಪ್ರಮುಖರು ಹಾಗೂ ವಕೀಲರಾದ ಟಿ.ಪಿ. ಕೃಷ್ಣ ಅವರು, ಧಾರ್ಮಿಕ ಮತ್ತು ಸಾಂಸ್ಕöÈತಿಕ ಪರಂಪರೆಗಳನ್ನು ಉಳಿಸಿ ಬೆಳೆಸುವುದರೊಂದಿಗೆ ಸಾರ್ವಜನಿಕರೊಂದಿಗೆ ಬೆರೆಯುವುದು ನಮ್ಮ ಉದ್ದೇಶ ಎಂದರು.
ಹಿAದೂ ಅಗ್ನಿದಳದ ಪ್ರಮುಖರಾದ ದಿನೇಶ್ ನಾಯರ್ ಮಾತನಾಡಿ, "ನಾವು ಹಬ್ಬಗಳನ್ನು ಆಚರಿಸಿ ಸುಮ್ಮನಾಗದೆ, ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಹಬ್ಬದ ಖುಷಿಯನ್ನು ಹಂಚಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಿಂದೂ ಅಗ್ನಿದಳದ ಪದಾಧಿಕಾರಿಗಳು, ಹಿರಿಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.