ಸೋಮವಾರಪೇಟೆ, ನ. ೧೩: ಲೋಕಾಯುಕ್ತ ಕಾಯಿದೆಯಡಿ ಇಲಾಖೆಗೆ ದೂರು ನೀಡುವಾಗ ಕ್ರಮಬದ್ದವಾಗಿ ನೀಡಬೇಕು ಹಾಗೂ ಸಮರ್ಪಕ ದಾಖಲಾತಿಗಳನ್ನು ಲಗತ್ತಿಸಬೇಕು ಎಂದು ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕ ದಿನಕರ್‌ಶೆಟ್ಟಿ ಹೇಳಿದರು.

ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ಸಾರ್ವಜನಿಕರಿಂದ ಪುಕಾರು ಅರ್ಜಿ ಸ್ವೀಕರಿಸಿ ಅವರು ಮಾತನಾಡಿದರು.

ಸರಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳಿಗೆ ಆಗುತ್ತಿರುವ ತೊಂದರೆ ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿAದ ಕೆಲಸದಲ್ಲಿ ಉಂಟಾಗುತ್ತಿರುವ ವಿಳಂಬ ಧೋರಣೆಯ ಕುರಿತು ಪುಕಾರು ನೀಡುವಾಗ ಎಲ್ಲಾ ದಾಖಲಾತಿಗಳನ್ನು ಕ್ರಮಬದ್ದವಾಗಿ ಸಲ್ಲಿಸಬೇಕು ಎಂದರು.

ಮಾಹಿತಿ ಹಕ್ಕುಗಳಲ್ಲಿ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಪರಿಹಾರ ದೊರಕದಿದ್ದಲ್ಲಿ ಇದಕ್ಕೆ ಸಂಬAಧಿಸಿದ ದಾಖಲಾತಿಯ ಒಂದು ಪ್ರತಿಯನ್ನು ನೀಡಬೇಕು. ಇಲ್ಲದಿದ್ದಲ್ಲಿ ವಿಚಾರಣೆಗೆ ಅಡಚಣೆಯಾಗುತ್ತದೆ ಎಂದರು.

ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು, ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಗೋಡು - ಕಣಿವೆ ಗ್ರಾಮದ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯು ಕಳೆದ ೧೦ ವರ್ಷಗಳಿಂದ ದುರಸ್ತಿಯಾಗಿಲ್ಲ. ಇದರಿಂದ ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ. ಹಲವಾರು ಬಾರಿ ಮನವಿ ನೀಡಿ ಸಾಕಾಗಿದೆ. ಅಧಿಕಾರಿಗಳನ್ನು ಕರೆಸಿ ಕೆಲಸ ಮಾಡಿಕೊಡಿ ಎಂದು ಮಸಗೋಡು - ಕಣಿವೆ ರಸ್ತೆ ಅಭಿವೃದ್ಧಿ ಸಮಿತಿಯವರು ಉಪಅಧೀಕ್ಷಕರಿಗೆ ಮನವಿ ಮಾಡಿದರು.

ತಾಲೂಕಿನ ಹಲವೆಡೆ ಕಾಫಿ ಕುಯ್ಲು ಸಮಯವಾಗಿದ್ದು ಪಲ್ಪರ್ ನೀರನ್ನು ಸಾರ್ವಜನಿಕ ಹೊಳೆಗೆ ಬಿಡುತ್ತಿದ್ದಾರೆ. ಈ ಕುರಿತು ಸಾರ್ವಜನಿಕ ಪ್ರಕಟಣೆ ನೀಡಬೇಕು. ಇಲ್ಲದಿದ್ದರೆ ನೀರು ಕಲುಷಿತವಾಗುವುದು; ಮಾತ್ರವಲ್ಲದೆ ಜಲಚರಗಳು ಸಾಯುತ್ತವೆ ಎಂದು ಐಗೂರು ಗ್ರಾಮಸ್ಥರೋರ್ವರು ದೂರು ನೀಡಿದರು.

ತಾಲೂಕಿನ ಗೌಡಳ್ಳಿ ವ್ಯಾಪ್ತಿಯ ಅನುದಾನಿತ ಶಾಲೆಯೊಂದರ ಅಧೀನದಲ್ಲಿರುವ ಸಿಲ್ವರ್ ಮರಗಳನ್ನು ಕಡಿದು ಸಾಗಿಸುವ ಹುನ್ನಾರ ನಡೆಯುತ್ತಿದೆ. ದಾನಿಗಳು ಕಷ್ಟಪಟ್ಟು ನೀಡಿದ ಜಾಗದಲ್ಲಿ ಆಡಳಿತ ಮಂಡಳಿಯ ಗಮನಕ್ಕೆ ಬಾರದೆ ಮರಗಳನ್ನು ಸಾಗಿಸುವ ಕ್ರಮ ಸರಿಯಿಲ್ಲ ಎಂದು ಅದೇ ಶಾಲೆಯ ಹಳೆಯ ವಿದ್ಯಾರ್ಥಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದರು. ಇದರ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಉಪ ಅಧೀಕ್ಷಕರು ಸೂಚನೆ ನೀಡಿದರು.

ಕೊಡ್ಲಿಪೇಟೆ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ಕುಡಿಯುವ ನೀರಿಗೆ ಶೌಚಾಲಂiÀiದ ನೀರು ಸೇರ್ಪಡೆಯಾಗುತ್ತಿದ್ದು, ಇದನ್ನು ಖುದ್ದಾಗಿ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಬೇಕು. ಫೋಟೋ ಮತ್ತು ವೀಡಿಯೋ ಮಾಡಬೇಕೆಂದು ಸಂಬAಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡುವಂತೆ ತಾಲೂಕು ಪಂಚಾಯಿತಿ ಪ್ರಬಾರ ಕಾರ್ಯನಿರ್ವಹಣಾಧಿಕಾರಿಗೆ ತಿಳಿಸಲಾಯಿತು.

ವಿವಿಧ ಇಲಾಖೆಗಳಿಗೆ ಸಂಬAಧಿಸಿದAತೆ ಒಟ್ಟು ೧೧ ಪುಕಾರು ಅರ್ಜಿಗಳು ಸಲ್ಲಿಕೆಯಾದವು. ಈ ಸಂದರ್ಭ ಲೋಕಾಯುಕ್ತ ಇನ್ಸ್ಪೆಕ್ಟರ್ ವೀಣಾ ನಾಯಕ್, ತಹಶೀಲ್ದಾರ್ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.