ವೀರಾಜಪೇಟೆ, ನ. ೧೩: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡAಗಾಲ ಗ್ರಾಮದ ಮರೋಡಿ ಯುವಕ ಸಂಘದ ವತಿಯಿಂದ ೩ನೇ ವರ್ಷದ ಬೊಡಿನಮ್ಮೆಯನ್ನು ಕುಟ್ಟಂದಿ ಪ್ರೌಢಶಾಲಾ ಮೈದಾನದಲ್ಲಿ ತಾ. ೧೫ ರಂದು ಪೂರ್ವಾಹ್ನ ೯ ಗಂಟೆಯಿAದ ನಡೆಸಲಾಗುವುದು ಎಂದು ಮರೋಡಿ ಯುವಕ ಸಂಘದ ಅಧ್ಯಕ್ಷ ಅಪ್ಪಂಡೇರAಡ ದಿನು ದಿನೇಶ್ ತಿಳಿಸಿದರು.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಡಿನಮ್ಮೆ ಪೈಪೋಟಿ ೧೨ ಬೋರ್, ೦.೨೨ ಹಾಗೂ ಏರ್ಗನ್ ಎಂಬ ೩ ವಿಭಾಗದಲ್ಲಿ ನಡೆಯಲಿದೆ. ಮೂರು ವಿಭಾಗಗಳಿಗೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು.
ಬೊಡಿನಮ್ಮೆಯ ಪ್ರಯುಕ್ತ ಲಕ್ಕಿಡಿಪ್ ಕೂಪನ್ ಆಯ್ಕೆ ಪ್ರಕ್ರಿಯೆಯನ್ನು ತಾ. ೧೫ ರ ಸಂಜೆ ೫ ಗಂಟೆಗೆ ನಡೆಸಲಾಗುವುದು ಎಂದು ಹೇಳಿದರು. ಗೋಷ್ಠಿಯಲ್ಲಿ ನಂಬುಡುಮಾಡ ಪೂವಯ್ಯ, ಚಂದುರ ಶ್ಯಾಮ್, ಚಂದುರ ಗಗನ್ ಉಪಸ್ಥಿತರಿದ್ದರು.