ಕೋವರ್ಕೊಲ್ಲಿ ಇಂದ್ರೇಶ್
ಬೆAಗಳೂರು, ನ. ೧೩: ಭಾರತೀಯ ಸೇನೆಯ ನೇಮಕಾತಿ ಮೆರಿಟ್ ಪಟ್ಟಿಯಲ್ಲಿ ೫೧ನೇ ಸ್ಥಾನ ಪಡೆದಿದ್ದರೂ, ಎಡ ಮೂತ್ರ ಪಿಂಡದ ಗಾತ್ರ ನಿಗದಿತ ವೈದ್ಯಕೀಯ ಮಾನದಂಡಕ್ಕಿAತ ಕಡಿಮೆ ಇದೆ ಎಂಬ ಕಾರಣಕ್ಕೆ ಅನರ್ಹಗೊಂಡಿದ್ದ ೨೫ ವರ್ಷದ ಸೇನಾ ಉದ್ಯೋಗ ಆಕಾಂಕ್ಷಿಗೆ ಪರಿಹಾರ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಮರುಪರಿಶೀಲನಾ ವೈದ್ಯಕೀಯ ಮಂಡಳಿ ರಚಿಸಿ ಮತ್ತೊಮ್ಮೆ ಪರೀಕ್ಷೆ ನಡೆಸಲು ನಿರ್ದೇಶಿಸುವಂತೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೈಸೂರಿನ ಮೋನಿಶ್ ಎನ್.ಆರಾಧ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಏಕಸದಸ್ಯಪೀಠದ ಆದೇಶವನ್ನು ಎತ್ತಿ ಹಿಡಿದಿದೆ.
ಸಶಸ್ತç ಪಡೆಗಳ ಪ್ರವೇಶ ವೈದ್ಯಕೀಯ ಮಾನದಂಡಗಳಲ್ಲಿ ಒಂದು ಅಥವಾ ಎರಡೂ ಮೂತ್ರಪಿಂಡಗಳು ಅಪೂರ್ಣ ಬೆಳವಣಿಗೆಯಿಂದ ಅಥವಾ ಕುಗ್ಗುವಿಕೆಯಿಂದ ೮ ಸೆಂ.ಮೀ.ಗಿAತ ಚಿಕ್ಕದಿದ್ದರೆ ಅನರ್ಹತೆಗೆ ಕಾರಣವಾಗುತ್ತದೆ. ೨೦೦೮ರ ಜೂನ್ ೩ರ ಮಾರ್ಗಸೂಚಿಗಳೂ ಅದನ್ನೇ ಹೇಳುತ್ತವೆ. ಬೇರೆ ವೈದ್ಯಕೀಯ ವರದಿ ಸಲ್ಲಿಸಿದ ಪ್ರತಿಯೊಂದು ಪ್ರಕರಣವನ್ನೂ ಮರುಪರಿಶೀಲನಾ ಮಂಡಳಿಗೆ ಕಳುಹಿಸಬೇಕೆಂಬ ನಿಯಮವಿಲ್ಲ. ಮರುಪರಿಶೀಲನಾ ವೈದ್ಯಕೀಯ ಮಂಡಳಿಯ ಪರೀಕ್ಷೆ ಅಭ್ಯರ್ಥಿಯ ಹಕ್ಕಲ್ಲ, ಪ್ರಕರಣದ ಅರ್ಹತೆಯನ್ನು ಆಧರಿಸಿದ ವಿವೇಚನಾತ್ಮಕ ನಿರ್ಧಾರವಾಗಿದೆ ಎಂದು ಪೀಠ ತಿಳಿಸಿದೆ. ಆದರೆ, ಮೇಲ್ಮನವಿ ವೈದ್ಯಕೀಯ ಮಂಡಳಿ ನಡೆಸಿದ್ದ ಟ್ರಿಪಲ್ ಫೇಸ್ ಸಿಇಸಿಟಿ ಸ್ಕಾö್ಯನ್ನಲ್ಲಿ ಎಡ ಮೂತ್ರಪಿಂಡದ ಗಾತ್ರ ೭ ಸೆಂ.ಮೀ. ಎಂದು ಕಂಡುಬAದಿತ್ತು. ಅಲ್ಟಾçಸೌಂಡ್ಗಿAತ ಈ ಪರೀಕ್ಷೆ ಹೆಚ್ಚು ನಿಖರವೆಂದು ತಿಳಿಸಲಾಗಿರುವುದನ್ನು ನ್ಯಾಯಾಲಯ ದಾಖಲಿಸಿದೆ.
ಪ್ರಕರಣದ ಹಿನ್ನೆಲೆ
ಸೇನಾ ನೇಮಕಾತಿಯ ಮೆರಿಟ್ ಪಟ್ಟಿಯಲ್ಲಿ ಅರ್ಜಿಯಲ್ಲಿ ಆರಾಧ್ಯ ೫೧ನೇ ಸ್ಥಾನ ಪಡೆದಿದ್ದರು. ಆದರೆ ವಿಶೇಷ ವೈದ್ಯಕೀಯ ಮಂಡಳಿಯು ಎಡ ಮೂತ್ರಪಿಂಡದ ಸಣ್ಣ ಗಾತ್ರ, ಪ್ಲೇಟ್ಲೆಟ್ಗಳ ಕೊರತೆ ಹಾಗೂ ಎಡಭಾಗದ ಕುತ್ತಿಗೆಯಲ್ಲಿ ಹೆಚ್ಚುವರಿ ಪಕ್ಕೆಲುಬು ಇರುವಿಕೆ ಎಂಬ ಮೂರು ಕಾರಣಗಳಿಂದ ಅವರನ್ನು ಅನರ್ಹರೆಂದು ಘೋಷಿಸಿತ್ತು. ಮೇಲ್ಮನವಿ ವೈದ್ಯಕೀಯ ಮಂಡಳಿಯ ಮರುಪರೀಕ್ಷೆಯಲ್ಲಿ ಪ್ಲೇಟ್ಲೆಟ್ಗಳ ಕೊರತೆ ಮತ್ತು ಹೆಚ್ಚುವರಿ ಪಕ್ಕೆಲುಬಿನ ಸಮಸ್ಯೆಗಳು ಕಂಡುಬರಲಿಲ್ಲ. ಆದರೆ, ಎಡ ಮೂತ್ರಪಿಂಡದ ಗಾತ್ರ ಚಿಕ್ಕದಿರುವುದನ್ನು ಮಂಡಳಿ ದೃಢಪಡಿಸಿತ್ತು.
ಇದರಿಂದ ಅಸಮಾಧಾನಗೊಂಡ ಆರಾಧ್ಯ, ಮರುಪರಿಶೀಲನಾ ಮಂಡಳಿಗೆ ತಮ್ಮ ಪ್ರಕರಣ ಒಪ್ಪಿಸುವಂತೆ ಕೋರಿದ್ದರು. ಆ ಮನವಿಯನ್ನು ಸಕ್ಷಮ ಪ್ರಾಧಿಕಾರ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಏಕಸದಸ್ಯಪೀಠದ ಮೊರೆ ಹೋಗಿದ್ದರು. ಸೆಪ್ಟೆಂಬರ್ ೧೭ರಂದು ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠ, ಮರುಪರಿಶೀಲನಾ ವೈದ್ಯಕೀಯ ಮಂಡಳಿಯಿAದ ಪರೀಕ್ಷೆ ನಡೆಸುವಂತೆ ಕೋರುವುದು ಅಭ್ಯರ್ಥಿಯ ಹಕ್ಕಲ್ಲ ಎಂದು ತಿಳಿಸಿತ್ತು. ಸೇನಾ ಸಿಬ್ಬಂದಿಯ ಕರ್ತವ್ಯಗಳ ಸ್ವರೂಪ ಹಾಗೂ ಕಟ್ಟುನಿಟ್ಟಿನ ಷರತ್ತುಗಳನ್ನು ಪರಿಗಣಿಸಿ, ನ್ಯಾಯಾಲಯದ ಅಸಾಧಾರಣ ವಿವೇಚನಾಧಿಕಾರ ಬಳಸಿ ಪರಿಹಾರ ನೀಡಲು ನಿರಾಕರಿಸಿತ್ತು. ಹಾಗಾಗಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.