ಸೋಮವಾರಪೇಟೆ, ನ. ೧೩: ಕಳೆದ ಮೂರು ತಿಂಗಳಿನಿAದ ಪತಿ ತನ್ನೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ ಎಂದು ಮಾನಸಿಕವಾಗಿ ಕುಗ್ಗಿದ್ದ ತಾಯಿ, ತನ್ನ ೭ ತಿಂಗಳ ಕಂದಮ್ಮನನ್ನು ಮನೆಯಲ್ಲಿಯೇ ಬಿಟ್ಟು, ಜೀವನಕ್ಕೆ ಇತಿಶ್ರೀ ಹೇಳಲೆಂದು ೧೨೦ ಕಿ.ಮೀ. ದೂರಕ್ಕೆ ತೆರಳಿದ್ದಳು. ಒಂದೂವರೆ ದಿನ ಕಳೆದ ಮೇಲೆ ಮನೆಯಲ್ಲಿ ಬಿಟ್ಟಿದ್ದ ಮಗು ಬದುಕಿದೆ ಎಂದು ತಿಳಿದು ಮತ್ತೆ ವಾಪಸ್ ಆಗುವ ಮೂಲಕ ಮಾದಾಪುರ ಜಂಬೂರು ಫೀ.ಮಾ. ಕಾರ್ಯಪ್ಪ ಬಡಾವಣೆಯಲ್ಲಿ ಬೆಳಕಿಗೆ ಬಂದಿದ್ದ ಪ್ರಕರಣಕ್ಕೆ ಇತಿಶ್ರೀ ಹೇಳಿದಳಾದರೂ ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಕೊಂಡಿದ್ದಾಳೆ.

ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಜಂಬೂರು ಪುನರ್ವಸತಿ ಬಡಾವಣೆಯಲ್ಲಿ ನೆಲೆಸಿರುವ ಆದರ್ಶ ಹಾಗೂ ರೋಶಿನಿ ದಂಪತಿಯ ೭ ವರ್ಷದ ಪುತ್ರಿ ಮೊನ್ನೆ ದಿನ ಮನೆಯೊಳಗೆ ಅಳುತ್ತಿದ್ದುದನ್ನು ಗಮನಿಸಿದ ಅಕ್ಕಪಕ್ಕದವರು, ಮನೆಯ ಸಮೀಪಕ್ಕೆ ಬಂದು ಗಮನಿಸಿದಾಗ ಬಾಗಿಲಿಗೆ ಬೀಗ ಜಡಿದಿರುವುದು ಕಂಡುಬAತು.

೭ ತಿಂಗಳ ಮಗುವನ್ನು ಮನೆಯಲ್ಲಿ ಪೆಟ್ಟಿಗೆಯೊಂದರಲ್ಲಿ ಇಟ್ಟು ತಾಯಿ ರೋಶಿನಿ ತೆರಳಿರುವುದು ತಿಳಿಯುತ್ತಿದ್ದಂತೆ, ಪತಿ ಆದರ್ಶ್ಗೆ ಕರೆ ಮಾಡಿ ವಿಚಾರ ತಿಳಿಸಿದರು. ಪೊಲೀಸರಿಗೂ ವಿಷಯ ತಿಳಿಸಲಾಯಿತು. ದೌಡಾಯಿಸಿದ ಪೊಲೀಸರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ಇತ್ತ ಪುಟ್ಟ ಕಂದಮ್ಮನನ್ನು ಬಿಟ್ಟು ತೆರಳಿದ ತಾಯಿಯನ್ನು ಕಲ್ಲು ಹೃದಯದವಳು ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಆದರೆ ಒಂದೂವರೆ ದಿನದ ತರುವಾಯ ತನ್ನ ಕಂದಮ್ಮ ಬದುಕಿದೆ ಎಂಬುದನ್ನು ತಿಳಿದು, ಸಾಯಲು ತೆರಳಿದ್ದ ತಾಯಿ ಮತ್ತೆ ಮನೆಗೆ ವಾಪಸ್ ಆದಳು.

ಪತಿ ಮೇಲಿನ ಅಸಮಾಧಾನ: ಜಂಬೂರು ಬಡಾವಣೆಯ ನಿವಾಸಿ ಆದರ್ಶ್ ಹಾಗೂ ೭ನೇ ಹೊಸಕೋಟೆಯ ರೋಶಿನಿ ಅವರುಗಳು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದು, ದಂಪತಿಗೆ ೭ ತಿಂಗಳ ಹೆಣ್ಣು ಮಗುವಿದೆ. ಈ ನಡುವೆ ಪತಿ ಆದರ್ಶ್ ಪಟಾಕಿ ಫ್ಯಾಕ್ಟರಿಯಲ್ಲಿ ಕೆಲಸವಿದೆಯೆಂದು ಹೇಳಿ ಕಳೆದ ೩ ತಿಂಗಳ ಹಿಂದೆ ಹೊಸೂರಿಗೆ ತೆರಳಿದ್ದು, ಸ್ವಂತ ಮೊಬೈಲ್ ಇಲ್ಲದೇ ಇರುವುದರಿಂದ ಪತ್ನಿಯೊಂದಿಗೆ ಮಾತನಾಡಲು ಆಗುತ್ತಿರಲಿಲ್ಲ. ಆದರ್ಶ್ನ ಸಂಬAಧಿಕರ ಮೊಬೈಲ್‌ನಿಂದ ಕೆಲವೊಮ್ಮೆ ಸಂಭಾಷಣೆ ನಡೆಯುತ್ತಿದ್ದುದು ಬಿಟ್ಟರೆ, ಪತಿ-ಪತ್ನಿಯ ನಡುವೆ ಮಾತುಕತೆ ವಿರಳವಾಗಿತ್ತು. ಈ ಮಧ್ಯೆ ದೀಪಾವಳಿ ಹಬ್ಬವೂ ಬಂದಿದ್ದರಿAದ ಪಟಾಕಿ ಅಂಗಡಿಯಲ್ಲಿ ಕೆಲಸದ ಒತ್ತಡವೂ ಅಧಿಕವಾಗಿದ್ದರಿಂದ ಪತಿ ಕರೆ ಮಾಡುತ್ತಿರಲಿಲ್ಲ.

ಇದರಿಂದ ಮನನೊಂದ ಪತ್ನಿ ರೋಶಿನಿ, ತನ್ನ ಮಗುವನ್ನು ಮನೆಯಲ್ಲಿಯೇ ಬಿಟ್ಟು ಎಲ್ಲಿಯಾದರೂ ದೂರ ತೆರಳಿ ಜೀವನ ಕೊನೆಗೊಳಿಸಬೇಕೆಂದು ನಿರ್ಧರಿಸಿ ಮೊನ್ನೆ ದಿನ ಮನೆಬಿಟ್ಟು ಹೋಗಿದ್ದಳು.

ಇತ್ತ ಬಾಗಿಲಿಗೆ ಬೀಗ ಹಾಕಿದ ಮನೆಯೊಳಗೆ ಮಗು

೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಅಳುತ್ತಿದ್ದುದನ್ನು ಗಮನಿಸಿದ ಅಕ್ಕಪಕ್ಕದವರು, ಬೀಗ ಒಡೆದು ಒಳ ತೆರಳಿ ನೋಡಿದ ಸಂದರ್ಭ ಮಗು ನಿತ್ರಾಣಗೊಂಡಿತ್ತು. ತಕ್ಷಣ ಪತ್ನಿ ರೋಶಿನಿ ಮಗುವನ್ನು ಮನೆಯಲ್ಲಿಯೇ ಬಿಟ್ಟು ತೆರಳಿರುವುದಾಗಿ ಪತಿ ಆದರ್ಶ್ಗೆ ತಿಳಿಸಿದ ಮೇರೆ, ಹೊಸೂರಿನಿಂದ ದೌಡಾಯಿಸಿ ಬಂದಿದ್ದಾನೆ. ನಂತರ ಸೋಮವಾರಪೇಟೆ ಪೊಲೀಸ್ ಠಾಣೆಗೆ ಆಗಮಿಸಿ ಪತ್ನಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾನೆ.

ಇತ್ತ ಮನೆ ಬಿಟ್ಟು ತೆರಳಿದ ರೋಶಿನಿ ಮೈಸೂರಿಗೆ ಹೋಗಿದ್ದು, ತನ್ನ ಮಗು ಬದುಕಿರುವುದಿಲ್ಲ ಎಂದು ನಿರ್ಧರಿಸಿ ಜೀವನ ಕೊನೆಗಾಣಿಸಿಕೊಳ್ಳಲು ನಿಶ್ಚಯ ಮಾಡಿಕೊಂಡಿದ್ದಾಳೆ. ಮನೆಗೆ ಆಗಮಿಸಿದ ಪತಿ ಆದರ್ಶ್, ಪತ್ನಿಯ ಮೊಬೈಲ್‌ಗೆ ಸಂಬAಧಿಕರು, ಸ್ನೇಹಿತರ ಮೊಬೈಲ್‌ನಿಂದ ನೂರಾರು ಬಾರಿ ಕರೆ ಮಾಡಿದ್ದು, ಅಂತಿಮವಾಗಿ ರೋಶಿನಿ ಕರೆಯನ್ನು ಸ್ವೀಕರಿಸಿದ್ದಾಳೆ. ಮನೆಯಲ್ಲಿ ಮಗು ಬದುಕಿರುವ ವಿಷಯ ತಿಳಿಯುತ್ತಿದ್ದಂತೆ ಮಾತೃ ಹೃದಯ ಕರಗಿದ್ದು, ಜೀವ ಕೊನೆಗಾಣಿಸಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದು ವಾಪಸ್ ಜಂಬೂರಿಗೆ ಆಗಮಿಸಿದ್ದಾಳೆ.

ನಿನ್ನೆ ರಾತ್ರಿ ಜಂಬೂರಿಗೆ ಆಗಮಿಸಿದ ರೋಶಿನಿಯನ್ನು ಇಂದು ಸೋಮವಾರಪೇಟೆ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಸಂದರ್ಭ ಮೇಲಿನ ವೃತ್ತಾಂತ ಬಿಚ್ಚಿಟ್ಟಿದ್ದಾಳೆ.

ನಿತ್ರಾಣಗೊಂಡಿದ್ದ ಮಗುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದ್ದು, ಮಗು ಚೇತರಿಸಿಕೊಳ್ಳುತ್ತಿದೆ. ಮಗುವಿನೊಂದಿಗೆ ರೋಶಿನಿಯ ಪೋಷಕರು ಇದ್ದಾರೆ.

ಇತ್ತ ಮಗುವನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಬೇಜವಾಬ್ದಾರಿ ತೋರಿದ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ದೂರು ಸ್ವೀಕರಿಸಿದ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಏಳು ತಿಂಗಳ ಪುಟ್ಟ ಮಗು ಹಾಗೂ ಬಾಣಂತಿಯನ್ನು ಒಂಟಿಯಾಗಿ ಬಿಟ್ಟು ದೂರದ ಹೊಸೂರಿನಲ್ಲಿ ನೆಲೆಸಿರುವ ಪತಿ ಆದರ್ಶ್ಗೆ ಪೊಲೀಸರು ಬುದ್ದಿವಾದ ಹೇಳಿದ್ದಾರೆ. ಪೊಲೀಸರ ಬುದ್ದಿ ಮಾತನ್ನು ಕೇಳಿರುವ ಆದರ್ಶ್, ತನ್ನ ಪತ್ನಿ ಹಾಗೂ ಮಗುವನ್ನು ಹೊಸೂರಿಗೆ ಕರೆದೊಯ್ದು ಅಲ್ಲಿಯೇ ನೋಡಿಕೊಳ್ಳುವುದಾಗಿ ತಿಳಿಸಿದ್ದಾನೆ.

“ಇತ್ತ ಮಗುವೂ ಬದುಕಿದೆ;ಅತ್ತ ತಾಯಿಯೂ ಬದುಕಿದ್ದಾಳೆ, ಗಂಡ ತನ್ನ ಜವಾಬ್ದಾರಿ ಅರಿತಿದ್ದಾನೆ” ಈ ಮೂಲಕ ‘ಮಗುವನ್ನು ಬಿಟ್ಟು ಹೋದ ತಾಯಿ’ ಪ್ರಕರಣ ಸುಖಾಂತ್ಯ ಕಂಡಿದೆ.

- ವಿಜಯ್ ಹಾನಗಲ್