ಸಿದ್ದಾಪುರ, ನ. ೧೩: ಎಸ್‌ಐಆರ್ ವಿರೋಧಿಸಿ ನೆಲ್ಲಿಹುದಿಕೇರಿ ಗ್ರಾಮದ ಪಟ್ಟಣದಲ್ಲಿ ಸಿದ್ದಾಪುರ ವಲಯ ಎಸ್. .ಕೆ.ಎಸ್.ಎಸ್.ಎಫ್. ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಎಸ್‌ಐಆರ್ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಅಧಿಕಾರಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು. ಎಸ್‌ಐಆರ್‌ನಿಂದಾಗಿ ಹಲವಾರು ಮಂದಿ ಮತದಾರರು ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದೇ ಸಂದರ್ಭ ಎಸ್‌ಐಆರ್ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಂಘಟನೆ ವತಿಯಿಂದ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಎಸ್‌ಕೆಎಸ್‌ಎಸ್‌ಎಫ್ ನೆಲ್ಲಿ ಹುದಿಕೇರಿ ಅಧ್ಯಕ್ಷ ಜಂಶೀರ್, ಸಂಘಟನೆಯ ಪ್ರಮುಖರಾದ ತಮ್ಲೀಕ್ ದಾರಿಮಿ. ಎ.ಕೆ.ಹಕಿಂ, ಉಮ್ಮರ್ ಫೈಝಿ , ಅಶ್ರಫ್ ಹಾಜಿ, ಕರೀಂ ಮುಸ್ಲಿಯಾರ್, ಮಸೀದಿ ಅಧ್ಯಕ್ಷ ರವೂಫ್ ಹುದವಿ, ಜಿಲ್ಲಾ ಕಾಂಗ್ರೆಸ್ ಸದಸ್ಯ ಕೆ.ಎಂ.ಬಶೀರ್, ಕಾರ್ಮಿಕ ಮುಖಂಡ ಪಿ.ಆರ್. ಭರತ್, ಇನ್ನಿತರರು ಪಾಲ್ಗೊಂಡಿದ್ದರು.