ಕುಶಾಲನಗರ, ನ. ೧೨: ವಾರಣಾಸಿಯಲ್ಲಿ ನಡೆದ ರಾಷ್ಟಿçÃಯಮಟ್ಟದ ಸೆಸ್ಟೋ ಬಾಲ್ ೭ನೇ ಜೂನಿಯರ್ ಮತ್ತು ಸೀನಿಯರ್ ವಿಭಾಗದ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ಬಾಲಕಿಯರ ತಂಡ ಬೆಳ್ಳಿ ಪದಕ ಗಳಿಸಿದ್ದು ಬಾಲಕರ ವಿಭಾಗದಲ್ಲಿ ಕಂಚಿನ ಪದಕ ಲಭಿಸಿದೆ.
ವಾರಣಾಸಿಯಲ್ಲಿ ತಾ. ೧ ರಿಂದ ೩ರ ತನಕ ನಡೆದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಕೊಡಗು ಜಿಲ್ಲೆಯ ಆಟಗಾರರ ತಂಡದ ಸದಸ್ಯರು ಜಿಲ್ಲೆಗೆ ಆಗಮಿಸಿದ ಸಂದರ್ಭ ಕುಶಾಲನಗರ ಗಡಿಭಾಗ ದಲ್ಲಿ ಕೊಡಗು ಸೆಸ್ಟೋ ಬಾಲ್ ಅಸೋಸಿಯೇಷನ್ ಪ್ರಮುಖರು ಮತ್ತು ವಿವಿಧ ಸಂಘ-ಸAಸ್ಥೆ ಗಳ ಪ್ರಮುಖರು ಬರಮಾಡಿ ಕೊಂಡರು.
ಸಾಮಾಜಿಕ ಹೋರಾಟಗಾರ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವಿ ಪಿ ಶಶಿಧರ್ ವಿಜೇತ ತಂಡದ ಸದಸ್ಯರಿಗೆ ಕನ್ನಡ ಶಲ್ಯಗಳನ್ನು ನೀಡುವ ಮೂಲಕ ಬರಮಾಡಿಕೊಂಡು ಶುಭಾಶಯ ಕೋರಿದರು.
ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ದೀಪಕ್, ಪ್ರಮುಖರಾದ ಲೊಕೇಶ್ ಸಾಗರ್, ಆನಂದ್, ರುಬಿನ, ಆದಂ, ಬಾಷಾ , ತರಬೇತು ದಾರರಾದ ಜಾನ್ಸನ್, ಮಂಜು ಮತ್ತಿತರರು ಇದ್ದರು.