ಮಡಿಕೇರಿ, ನ. ೧೨: ಮಡಿಕೇರಿಯ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ೧೩ನೇ ವರ್ಷದ ಕ್ರೀಡಾಕೂಟ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವೇದಿಕೆಯ ಅಧ್ಯಕ್ಷ ಗಣೇಶ್ ಉದ್ಘಾಟಿಸಿದರು. ಅತಿಥಿ ಗಳಾಗಿ ವಸಂತಿ, ಅಯ್ಯಪ್ಪ, ಸುರೇಶ್, ಮಂಜುಳಾ ಹಾಗೂ ಸುಬ್ಬಯ್ಯ ಅವರು ಪಾಲ್ಗೊಂಡಿದ್ದರು.
ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಹಾಗೂ ಹಿರಿಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕ್ರಿಕೆಟ್, ಥ್ರೋಬಾಲ್, ಮಹಿಳಾ ಕ್ರಿಕೆಟ್, ಶಟಲ್ ಬ್ಯಾಡ್ಮಿಂಟನ್, ಕಾಳು ಹೆಕ್ಕುವುದು, ಬಕೆಟ್ಗೆ ಬಾಲ್ ಹಾಕುವುದು, ಮ್ಯೂಸಿಕಲ್ ಚೇರ್ ಹಾಗೂ ಲೆಮೆನ್ ಆ್ಯಂಡ್ ಸ್ಪೂನ್ ಸ್ಪರ್ಧೆಗಳು ಗಮನ ಸೆಳೆದವು. ವಿವಿಧ ವಯೋಮಾನದವರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.