ವೀರಾಜಪೇಟೆ, ನ.೧೨: ಪತ್ನಿಯ ಮೇಲೆ ಹಲ್ಲೆ ನಡೆಸಿ, ಬ್ಲೇಡ್ನಿಂದ ಕತ್ತು ಸೀಳಿ ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ದಂಡ ಸಹಿತ ೫ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ವೀರಾಜಪೇಟೆಯ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಪಟ್ಟಣದ ಸುಂಕದಕಟ್ಟೆ ನಿವಾಸಿ ದಿ. ಕುಮಾರಸ್ವಾಮಿ ಅವರ ಪುತ್ರ ಮೋಹನ್ ಹೆಚ್.ಕೆ. (೩೬) ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಘಟನೆಯ ಹಿನ್ನೆಲೆ
ಮೋಹನ್ ಕೂಲಿ ಕಾರ್ಮಿಕನಾಗಿದ್ದು, ಪತ್ನಿ ಸುಕನ್ಯಾ ಗೃಹಿಣಿಯಾಗಿದ್ದರು. ದಂಪತಿ ಸುಂಕದಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ನಡುವೆ ದಂಪತಿ ನಡುವೆ ಆಗಾಗ್ಗೆ ಸಣ್ಣಪುಟ್ಟ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ. ಪತಿಯ ನಿರಂತರ ಕಿರುಕುಳದಿಂದ ಬೇಸತ್ತ ಸುಕನ್ಯಾ ತನ್ನ ಮಗಳೊಂದಿಗೆ ವೀರಾಜಪೇಟೆಯ ಸುಣ್ಣದ ಬೀದಿಯಲ್ಲಿರುವ ತವರು ಮನೆಗೆ ತೆರಳಿ ವಾಸವಿದ್ದರು. ಇತ್ತ ಮೋಹನ್ ಬಾಡಿಗೆ ಮನೆಯಲ್ಲೇ ಒಬ್ಬಂಟಿಯಾಗಿ ಉಳಿದಿದ್ದ.
ಕೆಲವು ತಿಂಗಳ ಬಳಿಕ ಸಂಬAಧಿಕರೊಬ್ಬರ ಮದುವೆ ಸಮಾರಂಭಕ್ಕೆ ತೆರಳಲು ಸೀರೆ ತರಲೆಂದು ಸುಕನ್ಯಾ ೨೦೨೦ರ ನವೆಂಬರ್ ೨೯ರಂದು ಬೆಳಿಗ್ಗೆ ಸುಮಾರು ೧೦.೩೦ಕ್ಕೆ ಸುಂಕದಕಟ್ಟೆಯಲ್ಲಿದ್ದ ಪತಿಯ ಬಾಡಿಗೆ ಮನೆಗೆ ಬಂದಿದ್ದರು. ಈ ವೇಳೆ ನೆರೆಯ ಮನೆಯಲ್ಲಿದ್ದ ಹೇಮಲತಾ ಅವರನ್ನು ಮಾತನಾಡಿಸಿ, ಮದುವೆ ಸಮಾರಂಭಕ್ಕೆ ತೆರಳಲು ಸೀರೆ ತೆಗೆದುಕೊಂಡು ಹೋಗಲು ಬಂದಿರುವುದಾಗಿ ತಿಳಿಸಿದ್ದರು. ಬಳಿಕ ಮನೆಯ ಬೀಗ ತೆರೆದು ಒಳಗೆ ಹೋಗಿ ಸೀರೆ ಹುಡುಕುತ್ತಿದ್ದಾಗ ಮೋಹನ್ ಅಲ್ಲಿಗೆ ಬಂದಿದ್ದ.
ಮನೆ ಬಿಟ್ಟು ತೆರಳಿದ್ದ ಪತ್ನಿ ಮತ್ತೆ ಮನೆಗೆ ಬಂದಿದ್ದರಿAದ ಆಕ್ರೋಶಗೊಂಡ ಮೋಹನ್, ಸೀರೆ ನೀಡುವುದಿಲ್ಲ ಎಂದು ಹೇಳುತ್ತಾ ಸುಕನ್ಯಾ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯನ್ನು ನೆಲಕ್ಕೆ ಕೆಡವಿ, ಆಕೆಯ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ಬ್ಲೇಡ್ನಿಂದ ಕತ್ತು ಸೀಳಿ ಕೊಲೆ ಮಾಡಲು ಯತ್ನಿಸಿದ್ದಾನೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಇದರಿಂದ ಗಂಭೀರವಾಗಿ ಗಾಯಗೊಂಡ ಸುಕನ್ಯಾ ಕೂಗಿಕೊಂಡಿದ್ದಾರೆ. ಆಕೆಯ ಚೀರಾಟ ಕೇಳಿ ನೆರೆಮನೆಯ ಹೇಮಲತಾ ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಈ ವೇಳೆ ಮೋಹನ್ ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಸುಕನ್ಯಾ ಅವರನ್ನು ಹೇಮಲತಾ ಹಾಗೂ ಸ್ಥಳೀಯರು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು.
ಘಟನೆ ಕುರಿತು ಗಾಯಾಳು ಸುಕನ್ಯಾ ನೀಡಿದ ಹೇಳಿಕೆಯ ಆಧಾರದಲ್ಲಿ ವೀರಾಜಪೇಟೆ ನಗರ ಪೊಲೀಸರು ಮೋಹನ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಅಂದಿನ ಠಾಣಾಧಿಕಾರಿ ಧೂಳ್ ಶೆಟ್ಟಿ ಹಾಗೂ ಸಹಾಯಕ ತನಿಖಾಧಿಕಾರಿ ಗೀತಾ ಕೆ. ಅವರು ಪ್ರಕರಣದ ತನಿಖೆ ನಡೆಸಿ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವೀರಾಜಪೇಟೆಯ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಎಸ್. ನಟರಾಜ್ ಅವರು ಆರೋಪಿ ಮೋಹನ್ ಹೆಚ್.ಕೆ.ಗೆ ಭಾರತೀಯ ದಂಡ ಸಂಹಿತೆಯ ಕಲಂ ೩೦೭ರ ಅಡಿಯಲ್ಲಿ ೫ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ೫ ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ೩ ತಿಂಗಳ ಸಾಧಾರಣ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ. ಗಾಯಾಳು ಸುಕನ್ಯಾ ಅವರಿಗೆ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಪರಿಹಾರ ಒದಗಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಯಾಸೀನ್ ಅಹಮದ್ ವಾದ ಮಂಡಿಸಿದ್ದರು.
- ಕಿಶೋರ್ ಕುಮಾರ್ ಶೆಟ್ಟಿ