ಮಡಿಕೇರಿ, ನ. ೧೨: ಕೊಡಗು ಗೌಡ ಮಾಜಿ ಯೋಧರ ಒಕ್ಕೂಟದ ಸಂತೋಷ ಕೂಟ ಇತ್ತೀಚೆಗೆ ಮಡಿಕೇರಿ ಕೊಡಗು ಗೌಡ ಸಮಾಜದಲ್ಲಿ ಒಕ್ಕೂಟದ ಅಧ್ಯಕ್ಷ ತುಂತ್ಹಾಜ್ಜಿರ ದಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಮಾಜಿ ಯೋಧರನ್ನು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಒಕ್ಕೂಟದ ನಿರ್ದೇಶಕರು, ಮಾಜಿ ಯೋಧರು ಮತ್ತು ಅವರ ಕುಟುಂಬದವರು ಭಾಗವಹಿಸಿದ್ದರು.