ಮಡಿಕೇರಿ, ನ. ೧೨: ಪೊನ್ನಂಪೇಟೆ ತಾಲೂಕಿನ ನೊಕ್ಯ ಗ್ರಾಮದಲ್ಲಿ ಕಾಡಾನೆಗಳು ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡಿವೆ. ಈ ಭಾಗದಲ್ಲಿ ಹಲವು ವರ್ಷಗಳಿಂದ ಕಾಡಾನೆ ಹಾವಳಿ ಇದ್ದು, ಇದುವರೆಗೂ ಶಾಶ್ವತ ಪರಿಹಾರ ದೊರೆತಿಲ್ಲ.

ನ. ೯ರಂದು ನಾಲೈದು ಕಾಡಾನೆಗಳ ಹಿಂಡು ಚೆಪ್ಪುಡೀರ ಕಾರ್ಯಪ್ಪ ಮತ್ತು ಕೊಪ್ಪದ ಮಹೇಶ್ ಅವರ ಗದ್ದೆಗೆ ನುಗ್ಗಿ ಭತ್ತದ ಬೆಳೆಯನ್ನು ತುಳಿದು ನಾಶಮಾಡಿವೆ. ಗ್ರಾಮದಲ್ಲಿ ನಾಲ್ಕೆöÊದು ರೈತರು ಭತ್ತ ಬೆಳೆದಿದ್ದು, ಆನೆಗಳು ನಿತ್ಯ ಬರುತ್ತಿವೆ.

ತಿತಿಮತಿಯಿಂದ ಚಾವುಂಡಿಮೂಲೆ, ಕುಣಿರಾಮನಕಟ್ಟೆ ಮತ್ತು ಜಂಗಲಾಡಿ ಭಾಗದಲ್ಲಿ ಕಾಡಾನೆ ಹಾವಳಿ ಇದೆ. ಇಲ್ಲಿ ೨.೮ ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ, ಅದರ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ, ಜಂಗಲಾಡಿಯಿAದ ಮರಪಾಲದವರೆಗಿನ ಬ್ಯಾರಿಕೇಡ್‌ಗೆ ತಂದಿದ್ದ ಸಾಮಗ್ರಿಗಳು ಕಾಣೆಯಾಗಿವೆ. ಜಂಗಲಾಡಿಯಿAದ ಆಯಿರಸುಳಿ ಮರಪಾಲದವರೆಗಿನ ಪ್ರದೇಶದ ಮೂಲಕ ಆನೆಗಳು ದಕ್ಷಿಣ ಕೊಡಗಿಗೆ ಬರುತ್ತವೆ. ಈ ಭಾಗದಲ್ಲಿ ಗಟ್ಟಿಯಾದ ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕಾದ ಅನಿವಾರ್ಯತೆ ಇದೆ, ಈ ಹಿಂದೆ ಚೆನ್ನಂಗೊಲ್ಲಿಯಲ್ಲಿ ಕಾಡಾನೆ ದಾಳಿಯಿಂದ ಒಬ್ಬ ಮಹಿಳೆ, ರೈತ ಮಲ್ಲಂಗಡ ಸನ್ನಿ ಹಾಗೂ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿರುತ್ತಾರೆ. ಕೋಣನಕಟ್ಟೆಯಲ್ಲಿ ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ, ಈ ಹಿಂದೆ ರೈತರು ಹೆದ್ದಾರಿ ತಡೆದು ಸುಮಾರು ೭ ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದರು. ಹಲವು ಸಂಘ-ಸAಸ್ಥೆಗಳು ಬೆಂಬಲ ನೀಡಿದ್ದವು.

ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ನೇತೃತ್ವದಲ್ಲಿ ಹಿಂದಿನ ಸಿಸಿಎಫ್ ಮತ್ತು ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲಿಸಿ, ಬ್ಯಾರಿಕೇಡ್ ಅಳವಡಿಸಬೇಕಾದ ಜಾಗಗಳ ಬಗ್ಗೆ ವರದಿ ನೀಡಿದ್ದರು. ಇದುವರೆಗೂ ಆ ವರದಿಯಂತೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಜ್ವಲಂತ ಸಮಸ್ಯೆಗೆ ಸರ್ಕಾರ ಮತ್ತು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ. ಗ್ರಾಮದಲ್ಲಿ ಹಾಡಿ ನಿವಾಸಿಗಳು, ರೈತರು, ಕೂಲಿ ಕಾರ್ಮಿಕರು ಮತ್ತು ಶಾಲಾ ಮಕ್ಕಳು ವಾಸಿಸುತ್ತಿದ್ದು, ರೈತರ ಸಮಸ್ಯೆಗೆ ಸರ್ಕಾರ ತುರ್ತಾಗಿ ಗಮನ ಹರಿಸಬೇಕಾಗಿದೆ. ಪ್ರತಿವರ್ಷವೂ ಬೆಳೆ ನಾಶವಾಗುತ್ತಿದ್ದು, ರೈತರ ಅಳಲಿಗೆ ಅರಣ್ಯ ಇಲಾಖೆ ಇನ್ನಾದರೂ ಕಿವಿಗೊಡಬೇಕಿದೆ. ಕೇವಲ ಭರವಸೆಗಳಿಂದ ರೈತರ ಸಂಕಷ್ಟ ಬಗೆಹರಿಯುವುದಿಲ್ಲ. ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಿ, ಜೀವ ಹಾನಿ ಮತ್ತು ಬೆಳೆ ನಷ್ಟವನ್ನು ತಡೆಯಲು ಶಾಶ್ವತ ಪರಿಹಾರ ಒದಗಿಸುವಂತೆ ಗ್ರಾಮಸ್ಥರ ಪರವಾಗಿ ಚೆಪ್ಪುಡೀರ ಕಾರ್ಯಪ್ಪ, ನೊಕ್ಯ. ಮರಪಾಲ, ಕೋಣನಕಟ್ಟೆ, ಮಾಯಮುಡಿ, ದನುಗಾಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.