ಮಡಿಕೇರಿ, ನ. ೧೨: ಕೊಡವರ ವಿಶಿಷ್ಟ ಜನಾಂಗೀಯ ಗುರುತು, ಪಾರಂಪರಿಕ ಮಾತೃಭೂಮಿ, ಭಾಷೆ, ಸಂಸ್ಕೃತಿ, ಭೂಮಿ ಹಾಗೂ ರಾಜಕೀಯ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನಾತ್ಮಕ ಪರಿಹಾರ ಒದಗಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಆಗ್ರಹಿಸಿದರು.
ಕಡಂಗದಲ್ಲಿ ನಡೆದ ೯ನೇ ಕೊಡವ ಜನಜಾಗೃತಿ ಸಾರ್ವಜನಿಕ ಸಂಪರ್ಕ ಮಾನವ ಸರಪಳಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೊಡವರು ತಮ್ಮ ಪಾರಂಪರಿಕ ನೆಲದಲ್ಲಿ ಸ್ವಾಭಿಮಾನದಿಂದ ಬದುಕಲು ಸಂವಿಧಾನಾತ್ಮಕ ರಕ್ಷಣೆ ಮತ್ತು ಸ್ವಾಯತ್ತತೆ ಬಯಸುತ್ತಿದ್ದಾರೆ. ಇದು ತಮ್ಮ ಸಹಜ, ಜನ್ಮಸಿದ್ಧ ಹಾಗೂ ಮಾನವ ಹಕ್ಕಾಗಿದೆ ಎಂದು ನಾಚಪ್ಪ ಪ್ರತಿಪಾದಿಸಿದರು.
ಮಾನವ ಸರಪಳಿಯಲ್ಲಿ ಪಾಲ್ಗೊಂಡವರು ಗುರು-ಕಾರೋಣ, ಸೂರ್ಯ-ಚಂದ್ರ, ಭೂಮಿ ತಾಯಿ, ವನದೇವಿ, ಕಾವೇರಿ ಜಲದೇವತೆ ಹಾಗೂ ಭಾರತದ ಸಂವಿಧಾನದ ಹೆಸರಿನಲ್ಲಿ ಅಓಅ ಹೋರಾಟಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟçಗೀತೆ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು ಕಾರ್ಯಕ್ರಮದಲ್ಲಿ ಕುಲ್ಲಚಂಡ ಸರೋಜ, ಚೆರಿಯಂಡ ಪೂಜಾ, ಕೋಡಿರ ವಿನೋದ್ ನಾಣಯ್ಯ, ಬೇಪಡಿಯಂಡ ದಿನು, ಪಟ್ರಪಂಡ ರಮೇಶ್ ಬೋಪಯ್ಯ, ಬೇಪಡಿಯಂಡ ಬಿದ್ದಪ್ಪ, ಬಲ್ಲಚಂಡ ಸುನಿಲ್ ಬಿದ್ದಪ್ಪ, ಬಲ್ಲಟಿಕಾಳಂಡ ರಾಯ್ ಮಂದಣ್ಣ, ಮಾತಂಡ ಕಂಬು ಉತ್ತಯ್ಯ, ನೆರ್ಪಂಡ ಜಿಮ್ಮಿ ಚೆಂಗಪ್ಪ, ಮುಕ್ಕಾಟಿರ ತಮ್ಮಯ್ಯ, ನೆರ್ಪಂಡ ತಿಮ್ಮಯ್ಯ, ಪಾಲೇಕಂಡ ಪ್ರಧಾನ್ ಪೂಣಚ್ಚ, ಮುಕ್ಕಾಟಿರ ಮುದ್ದು ಮುದ್ದಯ್ಯ, ಬಲ್ಲಚಂಡ ಸಂಪತ್ ಕುಟ್ಟಪ್ಪ, ಚಂಬAಡ ಜನತ್, ಕೋಡಿರ ರಾಬಿನ್, ಮುಕ್ಕಾಟಿರ ಪೆಮ್ಮಯ್ಯ, ಅಳ್ಳಂಡ ಚಿಣ್ಣಪ್ಪ, ನಡಿಕೇರಿಯಂಡ ರಘು, ನಡಿಕೇರಿಯಂಡ ಬೋಪಯ್ಯ, ಪಾಲೆಂಗಡ ಸೋಮಣ್ಣ, ಮುಕ್ಕಾಟಿರ ಉತ್ತಪ್ಪ, ಕಂಡ್ರತAಡ ಚೆಂಗಪ್ಪ, ಪಂದಿಯAಡ ವಾಸು ಮಾಚಯ್ಯ, ಬಲ್ಲಟಿಕಾಳಂಡ ವಿಕ್ರಾಂತ್ ಪೊನ್ನಣ್ಣ, ಬೇಪಡಿಯಂಡ ಪೂಮಣಿ ಅಚ್ಚಯ್ಯ, ಬಿದ್ದಂಡ ಆಕಾಶ್, ನಡಿಕೇರಿಯಂಡ ರಂಜನ್, ಪಾಲೆಂಗಡ ಬೋಪಣ್ಣ, ಮಾತಂಡ ಮನು, ಚಾತಂಡ ಗಿರಿ ಸೋಮಯ್ಯ, ಪಾಲಚಂಡ ಚಿಟ್ಟಿಯಪ್ಪ, ಬಲ್ಲಚಂಡ ದಿನೇಶ್, ಪಾಲಚಂಡ ಅಪ್ಪಯ್ಯ, ಐತಿಚಂಡ ಮಧು ಮಾದಯ್ಯ, ಬಲ್ಲಟಿಕಾಳಂಡ ಮಂಜು ಸುಬ್ಬಯ್ಯ, ನೆರ್ಪಂಡ ಗಾಂಧಿ, ಬಾಚೆಟ್ಟಿರ ಕಾರ್ಯಪ್ಪ, ಪಳಂಗAಡ ರಾಕೇಶ್, ಅಮ್ಮಂಡ ಶರಣ್ ಅಯ್ಯಪ್ಪ, ಪಾಲೆಯಂಡ ಪ್ರವೀಣ್, ಮುಕ್ಕಾಟಿರ ಮುತ್ತಪ್ಪ, ಅಪ್ಪಾರಂಡ ದೇವಯ್ಯ, ಮುಕ್ಕಾಟಿರ ಸರು ದೇವಯ್ಯ, ಐತಿಚಂಡ ಪೂವಣ್ಣ, ಅಲ್ತಂಡ ದಿನೇಶ್ ಪೊನ್ನಪ್ಪ, ಚೆರುವಾಳಂಡ ತಮ್ಮಿ ಮುದ್ದಪ್ಪ, ಮುಂಡ್ಯೋಳAಡ ಬೆಲ್ಲು ಕಾರ್ಯಪ್ಪ, ಪಾಂಡAಡ ರಘುಪತಿ, ಬೇಪಡಿಯಂಡ ಧನು ಪೂಣಚ್ಚ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.