ಮಡಿಕೇರಿ, ನ. ೧೨: ಸಮರ್ಥ ಕನ್ನಡಿಗರು ಕೊಡಗು ಜಿಲ್ಲಾ ಘಟಕದಿಂದ ಪ್ರತಿವರ್ಷದಂತೆ ಈ ವರ್ಷವೂ ‘ಕನ್ನಡ ಹಬ್ಬ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ನವೆಂಬರ್ ೨೨ರಂದು ಮಡಿಕೇರಿ ನಗರದ ಓಂಕಾರ್ ಸದನದಲ್ಲಿ ನಡೆಸಲಾಗುತ್ತಿದೆ. ಅಂದು ಮಕ್ಕಳು ಮತ್ತು ಮಹಿಳೆಯರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಗಳು ಆಯೋಜಿತವಾಗಿದೆ.

ಛದ್ಮವೇಶ ಸ್ಪರ್ಧೆ ೧-೩ ವರ್ಷ ಮತ್ತು ೩-೬ ವರ್ಷದ ಮಕ್ಕಳಿಗೆ

ಜಾನಪದ ನೃತ್ಯ - ಕಿರಿಯ ಪ್ರಾಥಮಿಕ (೧-೪) ಹಿರಿಯ ಪ್ರಾಥಮಿಕ (೫-೭) ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಸಮಯ ೩ ನಿಮಿಷ ತಂಡದಲ್ಲಿರಬಹುದಾದ ಸ್ಪರ್ಧಿಗಳ ಸಂಖ್ಯೆ - ಕನಿಷ್ಠ ೬ ಗರಿಷ್ಟ ೧೦.

ಸಮೂಹ ಗಾಯನ ಸ್ಪರ್ಧೆ - ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ, ಸಮಯ ೩ ನಿಮಿಷ, ಕನಿಷ್ಟ ೪ ಗರಿಷ್ಠ ೬ ವಿದ್ಯಾರ್ಥಿಗಳಿರಬೇಕು, ಕನ್ನಡ ನಾಡು ನುಡಿಗೆ ಸಂಬAಧಿಸಿದ ಗೀತೆಯನ್ನು ಹಾಡಬೇಕು. ಕರೋಕೆ ಬಳಸುವಂತಿಲ್ಲ

ಸಮೂಹ ಗಾಯನ ಸ್ಪರ್ಧೆ ಮಹಿಳೆಯರಿಗೆ ಭಕ್ತಿಗೀತೆ ಅಥವಾ ಜಾನಪದ ಗೀತೆ ಹಾಡಬೇಕು ಸಮಯ ೩ ನಿಮಿಷ, ತಂಡದಲ್ಲಿ ಕನಿಷ್ಟ ೬ ಗರಿಷ್ಠ ೮ ಸ್ಪರ್ಧಿಗಳು ಇರಬಹುದು.

ಚಿತ್ರಕಲಾ ಸ್ಪರ್ಧೆ ಪ್ರೌಢಶಾಲಾ ಮಕ್ಕಳಿಗೆ. ( ವೈಯಕ್ತಿಕ ) ೧ ಗಂಟೆ ಕಾಲಾವಕಾಶ ನೀಡಲಾಗುವುದು. ಹಾಳೆಯೊಂದನ್ನು ಬಿಟ್ಟು ಉಳಿದ ಪರಿಕರಗಳನ್ನು ಸ್ಪರ್ಧಾರ್ಥಿಗಳೇ ತರಬೇಕು.

ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳಲು ನವೆಂಬರ್ ೧೫ ಕೊನೆಯ ದಿನಾಂಕವಾಗಿದ್ದು ನೋಂದಣಿಗಾಗಿ ಇಲ್ಲಿ ನೀಡಿರುವ ಸಂಖ್ಯೆಗಳನ್ನು ಸಂಪರ್ಕಿಸಬೇಕೆAದು ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕರರಾದ ಜಯಲಕ್ಷ್ಮಿ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಛದ್ಮವೇಷ : ಅನಿತಾ ಸಿ - ೯೬೩೨೬೫೩೭೩೯, ಪುಷ್ಪಾ ಬಡಿಗೇರ್ -೭೭೯೫೯೧೬೧೫೭ ಚಿತ್ರಕಲೆ : ಶ್ರೀಲತಾ ಬಿ - ೯೪೮೦೫೨೪೬೮೧, ಪವಿತ್ರಾ ಸಂತೋಷ್ -೯೬೮೬೩೨೩೩೨೬, ಕಾಲೇಜು ವಿದ್ಯಾರ್ಥಿಗಳ ಸಮೂಹ ಗಾಯನ : ಸೌಮ್ಯಾ ಸಂತೋಷ್ - ೮೭೬೨೫೭೪೫೮೪, ಅಂಬಿಕಾ : ೮೦೫೦೧೪೪೨೬೬, ಮಹಿಳಾ ಸಮೂಹ ಗಾಯನ : ಶಾಂತಿ ಅಚ್ಚಯ್ಯ - ೯೯೦೨೬೫೧೧೪೬, ಸರಿತಾ ಅಯ್ಯಪ್ಪ - ೯೪೮೧೪೮೩೪೫೭, ಜಾನಪದ ನೃತ್ಯ : ಜಯಲಕ್ಷ್ಮಿ ಕೆ - ೯೬೬೩೧೧೯೬೭೦ ದಿವ್ಯಾ ಸತೀಶ್ -೯೫೩೮೩೪೯೦೫೮ ಅವರುಗಳನ್ನು ನೋಂದಾಣಿಗೆ ಸಂಪರ್ಕಿಸಬಹುದಾಗಿದೆ.