ಸೋಮವಾರಪೇಟೆ, ನ. ೧೨: ಅರಣ್ಯ ಇಲಾಖೆಯ ವತಿಯಿಂದ ಚಿಣ್ಣರ ವನದರ್ಶನ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಸರ್ಕಾರಿ ಪಿಎಂಶ್ರೀ ಪ್ರಾಥಮಿಕ ಶಾಲೆಯ ೫೦ ವಿದ್ಯಾರ್ಥಿಗಳನ್ನು ವಿವಿಧ ಪ್ರದೇಶಗಳಿಗೆ ಪ್ರವಾಸ ಕೈಗೊಂಡು ಅರಣ್ಯ, ವನ್ಯಜೀವಿಗಳ ಬಗ್ಗೆ ಮಾಹಿತಿ ನೀಡಲಾಯಿತು.

ವಿದ್ಯಾರ್ಥಿಗಳು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ನರ್ಸರಿ, ಟಿಂಬರ್ ಡಿಪೋ, ನಿಸರ್ಗಧಾಮ, ಮತ್ತಿಗೋಡು ಸಾಕಾನೆ ಶಿಬಿರ, ನಾಗರಹೊಳೆ ಟೈಗರ್ ರಿಸರ್ವ್ ಫಾರೆಸ್ಟ್, ಇರ್ಪು ಜಲಪಾತಗಳಿಗೆ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳೊAದಿಗೆ ತೆರಳಿದರು.

ವಿದ್ಯಾರ್ಥಿಗಳಿಗೆ ಅರಣ್ಯದ ಮಹತ್ವ, ಪರಿಸರ ಸಂರಕ್ಷಣೆಯ ಅಗತ್ಯತೆ, ಪ್ರಾಣಿಗಳ ಜೀವನ ಕ್ರಮ ಸೇರಿದಂತೆ ಇನ್ನಿತರ ಪರಿಸರ ಸಂರಕ್ಷಣೆ ಪೂರಕ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಡಿಆರ್‌ಎಫ್‌ಓ ಪ್ರಶಾಂತ್ ಧೂಳಖೇಡ, ಬೀಟ್ ಫಾರೆಸ್ಟ್ ರವಿ ಉಪ್ಪಾರ, ಆರ್‌ಆರ್‌ಟಿ ಸಿಬ್ಬಂದಿ ಸಂಜಯ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪ್ರವಾಸದಲ್ಲಿದ್ದರು.