ಗೋಣಿಕೊಪ್ಪ ವರದಿ, ನ. ೧೧ ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಅಂತÀರ ಕೊಡವ ಸಮಾಜಗಳ ನಾಲ್ಕನೇ ವರ್ಷದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ನಾಪೋಕ್ಲು ಕೊಡವ ಸಮಾಜ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿದ್ದು, ಬಾಳೆಲೆ ಕೊಡವ ಸಮಾಜ (ಎ) ರನ್ರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಮಂಗಳವಾರ ನಡೆದ ಅಂತಿಮ ಪಂದ್ಯದಲ್ಲಿ ನಾಪೋಕ್ಲು ತಂಡ ೩೮ ರನ್ಗಳಿಂದ ಬಾಳೆಲೆ ತಂಡವನ್ನು ಮಣಿಸಿ ಕಪ್ ಗೆದ್ದುಕೊಂಡಿತು.
ನಾಪೋಕ್ಲು ತಂಡ ೫ ವಿಕೆಟ್ ಕಳೆದುಕೊಂಡು ೧೧೩ ರನ್ಗಳ ಗುರಿ ನೀಡಿತು. ಬಾಳೆಲೆ ೭೫ ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ನಾಪೋಕ್ಲು ತಂಡದ ಮಣವಟ್ಟಿರ ರಿಶವ್ ೫೧ ರನ್, ನೆರವಂಡ ವರುಣ್ ೨೦ ರನ್ ಹೊಡೆದರು. ಬಾಳೆಲೆ ಆಟಗಾರರಾದ ಅಜ್ಜಿನಿಕಂಡ ಕುಟ್ಟಪ್ಪ ೧೪, ಮಂಡAಗಡ ಮಂದಣ್ಣ ೧೧ ರನ್ ಸೇರಿಸಿದರು. ಸಣ್ಣುವಂಡ ಶಯನ್ ಅಯ್ಯಪ್ಪ ಹಾಗೂ ಅಳಮೇಂಗಡ ಸೋಮಯ್ಯ ತಲಾ ೨ ವಿಕೆಟ್ ಪಡೆದರು. ನೆರವಂಡ ಪ್ರವೀಣ್ ೪ ವಿಕೆಟ್, ನೆರವಂಡ ಪ್ರಶಾಂತ್ ಹಾಗೂ ಪೆಬ್ಬಟ್ಟಿರ ಯತಿಶ್ ತಲಾ ಎರಡು ವಿಕೆಟ್ ಕಬಳಿಸಿ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ವಿಜೇತ ತಂಡದಲ್ಲಿ ನೆರವಂಡ ಪ್ರವೀಣ್, ಪರಾಜಿತ ತಂಡದಲ್ಲಿ ಸಣ್ಣುವಂಡ ಶಯಾನ್ ಅಯ್ಯಪ್ಪ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಸೆಮಿಫೈನಲ್ ಪಂದ್ಯದಲ್ಲಿ ನಾಪೋಕ್ಲು ಕೊಡವ ಸಮಾಜ, ಹುದಿಕೇರಿ ಕೊಡವ ಸಮಾಜವನ್ನು ೭ ವಿಕೆಟ್ಗಳಿಂದ ಮಣಿಸಿತು. ಹುದಿಕೇರಿ ೩ ವಿಕೆಟ್ ನಷ್ಟಕ್ಕೆ ೧೦೨ ರನ್ ಗಳಿಸಿದರೆ, ನಾಪೋಕ್ಲು ೩ ವಿಕೆಟ್ ಕಳೆದುಕೊಂಡು ಪಂದ್ಯ ಗೆದ್ದುಕೊಂಡಿತು. ನಾಪೋಕ್ಲು ಆಟಗಾರ ಮಣವಟ್ಟಿರ ರಿಶವ್ ೫೨ ರನ್ ಹೊಡೆದರು. ಬೊಳ್ಳೇರ ದಿಶಾನ್ ಪಂದ್ಯ ಶ್ರೇಷ್ಠರಾದರು. ಮತ್ತೊಂದು ಪಂದ್ಯದಲ್ಲಿ ಬಾಳೆಲೆ (ಎ) ತಂಡ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮೂರ್ನಾಡು ಕೊಡವ ಸಮಾಜ ತಂಡವನ್ನು ೧ ವಿಕೆಟ್ಗಳಿಂದ ಸೋಲಿಸಿತು. ಮೂರ್ನಾಡು ೬ ವಿಕೆಟ್ಗೆ ೧೦೧ ರನ್, ಬಾಳೆಲೆ ೯ ವಿಕೆಟ್ ಕಳೆದುಕೊಂಡು ಗುರಿಮುಟ್ಟಿತು. ಕರ್ತಮಾಡ ಗಣಪತಿ ೪, ಪಾಸುರ ಕಿಶೋರ್, ಹಂಚೆಟ್ಟಿರ ಸೋಮಣ್ಣ, ಸಣ್ಣುವಂಡ ಶಯಾನ್ ತಲಾ ೨ ವಿಕೆಟ್ ಪಡೆದರು. ಸಣ್ಣುವಂಡ ಶಯಾನ್ ೯ ಎಸೆÀತದಲ್ಲಿ ೨೮ ರನ್ ಸಿಡಿಸಿ ತಂಡವನ್ನು ಅಂತಿಮ ಸುತ್ತು ಪ್ರವೇಶಿಸಲು ನೆರವಾದರು. ಇದಕ್ಕೂ ಮುನ್ನ ನಡೆದ ಪಂದ್ಯಗಳಲ್ಲಿ ಬಾಳೆಲೆ ಕೊಡವ ಸಮಾಜ ಟಿ. ಶೆಟ್ಟಿಗೇರಿ ತಂಡವನ್ನು ೩೫ ರನ್ಗಳಿಂದ ಸೋಲಿಸಿತು. ಹುದಿಕೇರಿ ಕೊಡವ ಸಮಾಜ ಕುಶಾಲನಗರ ತಂಡವನ್ನು ೭೮ ರನ್ಗಳಿಂದ ಮಣಿಸಿತು.
ಟೂರ್ನಿ ನಿರ್ದೇಶಕರಾಗಿ ಕೊಕ್ಕೇಂಗಡ ರಂಜನ್, ತೀರ್ಪುಗಾರರಾಗಿ ಆದೇಂಗಡ ಶಾಶ್ವತ್, ಚೆಕ್ಕೇರ ನವೀನ್, ಅಡ್ಡೇಂಗಡ ಶೌರ್ಯ, ಅಳಮೇಂಗಡ ಮೋಹನ್, ಮಾಚಂಗಡ ಸೋಮಣ್ಣ, ಕೊಕ್ಕೇಂಗಡ ರಂಜನ್, ಕೊಟ್ಟಂಗಡ ಸೂರಜ್ ಕಾರ್ಯನಿರ್ವಹಿಸಿದರು. ಕಾಂಡೇರ ದಾನಾ ಕುಶಾಲಪ್ಪ ವೀಕ್ಷಕ ವಿವರಣೆ ನೀಡಿದರು.
ಮೂರು ವರ್ಷಗಳ ಟೂರ್ನಿಯಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಚೊಚ್ಚಲ ಚಾಂಪಿಯನ್, ವಿರಾಜಪೇಟೆ ಕೊಡವ ಸಮಾಜ ರನ್ನರ್, ಎರಡನೇ ವರ್ಷದಲ್ಲಿ ವಿರಾಜಪೇಟೆ ಕೊಡವ ಸಮಾಜ ಚಾಂಪಿಯನ್, ಬಾಳೆಲೆ ಕೊಡವ ಸಮಾಜ ರನ್ನರ್, ಮೂರನೇ ವರ್ಷದಲ್ಲಿ ನಾಪೋಕ್ಲು ಕೊಡವ ಸಮಾಜ ಚಾಂಪಿಯನ್, ವಿರಾಜಪೇಟೆ ರನ್ನರ್ ಸ್ಥಾನ ಅಲಂಕರಿಸಿತ್ತು. ವಿಜೇತರೊಂದಿಗೆ ವಿರಾಜಪೇಟೆ ಕೊಡವ ಸಮಾಜ, ಮಡಿಕೇರಿ ಕೊಡವ ಸಮಾಜ, ಬಾಳೆಲೆ (ಬಿ) ಕೊಡವ ಸಮಾಜ, ಪೊನ್ನಂಪೇಟೆ ಕೊಡವ ಸಮಾಜ, ಟಿ. ಶೆಟ್ಟಿಗೇರಿ ಕೊಡವ ಸಮಾಜ, ಹುದಿಕೇರಿ ಕೊಡವ ಸಮಾಜ, ಕುಶಾಲನಗರ ಕೊಡವ ಸಮಾಜ, ಅಮ್ಮತ್ತಿ ಕೊಡವ ಸಮಾಜ ಭಾಗವಹಿಸಿದ್ದವು.
ಪ್ರೋತ್ಸಾಹದ ಭರವಸೆ
ಕೊಡವ ಕ್ರಿಕೆಟ್ ಅಕಾಡೆಮಿ ಉಪಾಧ್ಯಕ್ಷ ಚೇರಂಡ ಕಿಶನ್ ಮಾತನಾಡಿ, ಲೆದರ್ಬಾಲ್ ಕ್ರಿಕೆಟ್ ಭವಿಷ್ಯದ ಆಟಗಾರನಾಗಿ ಬೆಳೆಯಲು ಸೂಕ್ತ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ವೃತ್ತಿಪರ ಆಟಗಾರನಾಗಿ ಅಕಾಡೆಮಿ ಮೂಲಕ ಪ್ರೋತ್ಸಾಹಿಸಲು ಸಿದ್ದತೆ ನಡೆದಿದೆ. ಐಪಿಎಲ್ ಸೇರಿದಂತೆ ದೇಶೀಯ ಆಟಗಾರನಾಗಿ ಬೆಳೆಸಲು ಪ್ರೋತ್ಸಾಹ ನೀಡಲಾಗುವುದು. ಟೂರ್ನಿಯಲ್ಲಿ ಸಾಕಷ್ಟು ಪ್ರತಿಭೆಗಳು ಉತ್ತಮ ಪ್ರದರ್ಶನದ ಮೂಲಕ ಕ್ರಿಕೆಟ್ ಕೌಶಲ್ಯ ತೋರಿರುವುದು ಹೆಮ್ಮೆಯ ವಿಚಾರ ಎಂದರು.
ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಲೆದರ್ ಬಾಲ್ ಕ್ರಿಕೆಟ್ ಟೂರ್ನಿ ವರ್ಷದಿಂದ ವರ್ಷಕ್ಕೆ ಯಶಸ್ಸು ಗಳಿಸುತ್ತಿರುವುದು ಮೆಚ್ಚುವ ವಿಚಾರ, ಪ್ರೋತ್ಸಾಹ ಅಗತ್ಯ ಎಂದರು.
ವಿಜಯಲಕ್ಷಿö್ಮ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಮೈದಾನವನ್ನು ಇನ್ನಷ್ಟು ಅಭಿವೃದ್ದಿ ಪಡಿಸುವ ಮೂಲಕ ಮುಂದಿನ ಕೊಡವ ಕ್ರಿಕೆಟ್ ನಮ್ಮೆಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕಿದೆ. ರಾಜ್ಯ ಕ್ರೀಡಾ ಪ್ರಾಧಿಕಾರ ಈ ಬಗ್ಗೆ ಮುತುವರ್ಜಿ ವಹಿಸಬೇಕಿದೆ ಎಂದರು. ಸಾಕಷ್ಟು ಮೈದಾನಗಳಿದ್ದರೂ ಇಲ್ಲಿನ ಮೈದಾನ ಹೆಚ್ಚು ವಿಸ್ತಾರವಾಗಿ ಕ್ರಿಕೆಟ್ ಆಟಕ್ಕೆ ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದರು.
ಸನ್ಮಾನ
೧೫ ವಯೋಮಿತಿಯ ಕರ್ನಾಟಕ ರಾಜ್ಯ ಆಟಗಾರ್ತಿ ಓಡಿಯಂಡ ರೋಹಿಣಿ ದೇಚಮ್ಮ ಅವರನ್ನು ಸನ್ಮಾನಿಸಲಾಯಿತು. ಎನ್ಸಿಎ ಆಟಗಾರ್ತಿಯಾಗಿ ಮಿಂಚುತ್ತಿರುವ ಬಗ್ಗೆ ಪ್ರಶಂಶಿಸಲಾಯಿತು.
ಕೊಡವ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಕಾರ್ಯದರ್ಶಿ ಕೊಟ್ಟಂಗಡ ಸೂರಜ್ ಮಾದಪ್ಪ, ನಿರ್ದೇಶಕರುಗಳಾದ ಕೀತಿಯಂಡ ವಿವೇಕ್, ಮಾಚಂಗಡ ದರ್ಶನ್ ಸೋಮಣ್ಣ, ಬಾಳೆಯಡ ಪ್ರತೀಶ್ ಪೂವಯ್ಯ, ಚೆಕ್ಕೇರ ಚಂದ್ರಪ್ರಕಾಶ್, ಚೌರೀರ ಶರತ್, ಅವರೆಮಾದಂಡ ಶರಣ್ ಪೂಣಚ್ಚ ಭಾಗವಹಿಸಿದ್ದರು.