ಸಿದ್ದಾಪುರ, ನ. ೯: ಎಸ್ಐಆರ್ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿಯ ಸಮಾನ ಮನಸ್ಕರ ವೇದಿಕೆಯ ವತಿಯಿಂದ ಬೃಹತ್ ಪ್ರತಿಭಟನಾ ಜಾಥಾ ಹಾಗೂ ಸಭೆ ಸೋಮವಾರದಂದು ನಡೆಯಿತು.
ಪ್ರತಿಭಟನಾ ಜಾಥಾವನ್ನು ನೆಲ್ಲಿಹುದಿಕೇರಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ನಾಪಂಡ ಮುತ್ತಪ್ಪ ಉದ್ಘಾಟಿಸಿದರು. ನೆಲ್ಲಿಹುದಿಕೇರಿಯಿಂದ ಪ್ರತಿಭಟನಾ ಜಾಥಾವು ಸಿದ್ದಾಪುರದವರೆಗೆ ಕಾಲ್ನಾಡಿಗೆಯಲ್ಲಿ ಸಾಗಿತು. ನಂತರ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಪ್ರತಿಭಟನಾಕಾರರು ಸೇರಿ ಮಾನವ ಸರಪಳಿ ರಚಿಸಿದರು. ತದನಂತರ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇರಳ ರಾಜ್ಯದ ಡಿವೈಎಫ್ಐ ಸಂಘಟನೆಯ ಉಪಾಧ್ಯಕ್ಷೆ ಅನುಶ್ರೀ ಎಸ್ಐಆರ್ ಅಸ್ತç ಬಳಸಿ ದೇಶದ ಸುಮಾರು ೧೩ ಕೋಟಿ ಮತದಾರರ ಹೆಸರುಗಳನ್ನು ಕೇಂದ್ರದ ಬಿ.ಜೆ.ಪಿ ಸರಕಾರವು ರದ್ದುಗೊಳಿಸಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರವು ಜನವಿರೋಧಿ ಸರ್ಕಾರವಾಗಿದ್ದು, ಯಾವುದೇ ಪ್ರತಿಭಟನೆಗಳು ನಡೆದಲ್ಲಿ ಅವುಗಳನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗುತ್ತಿದೆ ಎಂದು ಆರೋಪಿಸಿದರು. ಚುನಾವಣಾ ಆಯೋಗವನ್ನು ಕೇಂದ್ರ ಸರ್ಕಾರವು ತನಗಿಷ್ಟ ಬಂದAತೆ ಬಳಸಿಕೊಳ್ಳುತಿದೆ ಎಂದು ಆರೋಪಿಸಿದ ಅವರು ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡುವವರೆಗೂ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿದರು.
ಕೆಪಿಸಿಸಿ ವಕ್ತಾರ ಎಂ. ಲಕ್ಷö್ಮಣ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಿಂದಾಗಿ ಸುಮಾರು ಒಂದು ಕೋಟಿ ಮಂದಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಬಿಜೆಪಿ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಬಳಸಿ ತನ್ನ ಮತ ಬ್ಯಾಂಕ್ ಬಲಪಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಧಾರ್ಮಿಕ ಪರಿಷತ್ ಪ್ರಮುಖ ಲಕ್ಷಿö್ಮಶ ಕಬ್ಬಡ್ಕ ಮಾತನಾಡಿ, ಬಿಜೆಪಿಯ ಎಸ್ಐಆರ್ ಎಂಬ ಪಿತೂರಿ ಇಂದು ಜನಸಾಮಾನ್ಯರ ಮತದಾನದ ಹಕ್ಕನ್ನು ಕಸಿದುಕೊಂಡಿದೆ ಎಂದು ಆರೋಪಿಸಿದರು.
ಸಭೆಯನ್ನು ಉದ್ದೇಶಿಸಿ ನಾಪಂಡ ಮುತ್ತಪ್ಪ ಇನ್ನಿತರರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಪಿ.ವಿ. ಜಾನ್ಸನ್ ವಹಿಸಿದ್ದರು ವೇದಿಕೆಯಲ್ಲಿ ಸಮಾನ ಮನಸ್ಕರ ವೇದಿಕೆಯ ಪ್ರಮುಖರಾದ ಪಿ.ಆರ್. ಭರತ್, ಸೈಯದ್ ಬಾವ, ಎ.ಕೆ.ಹಕ್ಕಿಂ, ಕೆ.ಯು. ಮಜೀದ್, ಹೆಚ್.ಬಿ. ರಮೇಶ್, ಎಸ್. ಬಿ. ಪ್ರತೀಶ್, ಅಸ್ಕರ್, ಅಶ್ರಫ್, ಬಷೀರ್, ಟಿ.ಟಿ. ಉದಯ್ ಕುಮಾರ್ ಬೈಜು, ಜೋಸೆಫ್ ಶ್ಶಾಂ, ನೆರವಂಡ ಉಮೇಶ್, ಇನ್ನಿತರರು ಇದ್ದರು. ಪಿ.ಆರ್. ಭರತ್ ಸ್ವಾಗತಿಸಿ, ಬಷೀರ್ ಅಹ್ಮದ್ ವಂದಿಸಿದರು.