ಪೊನ್ನಂಪೇಟೆ, ನ. ೯: ಮಂಗಳೂರು ಮತ್ತು ಕೊಡಗು ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೆ ಅನುಗುಣವಾಗಿ ರಚಿಸಿರುವ ಎರಡು ಪುಸ್ತಕಗಳನ್ನು ಕಾವೇರಿ ಕಾಲೇಜಿನಲ್ಲಿ ಬಿಡುಗಡೆಗೊಳಿಸ ಲಾಯಿತು.

ಕಾವೇರಿ ಕಾಲೇಜಿನ ಬಿ.ಕಾಂ ಉಪನ್ಯಾಸಕರಾದ ಪುತ್ತಾಮನೆ ಪೂಜಾ ಶರಣು ಹಾಗೂ ನಿತ್ಯಾ ಪಿ.ಆರ್. ಅವರು ರಚಿಸಿರುವ ತೃತೀಯ ಬಿ.ಕಾಂ ವಿದ್ಯಾರ್ಥಿಗಳಿಗೆ ‘ವ್ಯವಹಾರ ನ್ಯಾಯ' ಹಾಗೂ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಗಳಿಗೆ ‘ಮಾರುಕಟ್ಟೆಯ ಕಾರ್ಯತಂತ್ರ ನಿರ್ವಹಣೆ' ಹೆಸರಿನ ಎರಡು ಪುಸ್ತಕಗಳನ್ನು ಬಿಡುಗಡೆ ಗೊಳಿಸಲಾಯಿತು.

ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ, ಉಪಪ್ರಾಂಶುಪಾಲೆ ಪ್ರೊ. ಎಂ.ಎಸ್. ಭಾರತಿ ಹಾಗೂ ಐಕ್ಯೂಎಸಿ ಸಂಚಾಲಕಿ ಡಾ. ನಯನ ತಮ್ಮಯ್ಯ ಅವರು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಕವಿತಾ, ವಾಣಿಜ್ಯ ವಿಭಾಗ ಉಪನ್ಯಾಸಕರಾದ ಕಾವೇರಮ್ಮ, ಪೊನ್ನಮ್ಮ, ಪ್ರಕಾಶ್ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.