ಚೆಟ್ಟಳ್ಳಿ, ನ. ೬: ಫುಟ್‌ಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಕೊಡಗಿನ ಪ್ರತಿಭಾವಂತ ಬಾಲಕ-ಬಾಲಕಿಯರಿಗೆ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶ ಒದಗಿಬಂದಿದೆ. ಇಂಡಿಯಾ ಖೇಲೋ ಫುಟ್‌ಬಾಲ್ (Iಟಿಜiಚಿ ಏheಟo ಈooಣbಚಿಟಟ) ವತಿಯಿಂದ ಆಯೋಜಿಸಲಾಗುತ್ತಿರುವ ಕೈಗಾ ಐಕೆಎಫ್-ಕೆಎಸ್‌ಎಫ್‌ಎ ನಮ್ಮ ಕರ್ನಾಟಕ ಟ್ಯಾಲೆಂಟ್ ಆರನೇ ಆವೃತ್ತಿಯ ಅಂಗವಾಗಿ ಕೊಡಗು ಜಿಲ್ಲಾ ಮಟ್ಟದ ಫುಟ್‌ಬಾಲ್ ಪ್ರತಿಭಾನ್ವೇಷಣೆ ಆಯ್ಕೆ ಶಿಬಿರವನ್ನು ತಾ.೮ರಂದು (ನಾಳೆ) ಗುಡ್ಡೆಹೊಸೂರು-ಸಿದ್ದಾಪುರ ರಸ್ತೆಯಲ್ಲಿರುವ ಐಎನ್‌ಎಸ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ.

ಬೆಳಿಗ್ಗೆ ೮ ಗಂಟೆಗೆ ಶಿಬಿರ ಆರಂಭವಾಗಲಿದ್ದು, ೨೦೦೯ರಿಂದ ೨೦೧೬ರ ನಡುವೆ ಜನಿಸಿದ ಬಾಲಕರು ಹಾಗೂ ಬಾಲಕಿಯರು ಭಾಗವಹಿಸಬಹುದು. ಶಿಬಿರಕ್ಕೆ ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ. ಈ ಆಯ್ಕೆ ಶಿಬಿರವು ಕೊಡಗು ಎಫ್‌ಸಿ ಸಹಯೋಗದಲ್ಲಿ ನಡೆಯಲಿದೆ.

ಕರ್ನಾಟಕದ ವಿವಿಧ ನಗರಗಳಲ್ಲಿ ನಡೆಯುವ ಆಯ್ಕೆ ಶಿಬಿರಗಳ ಮೂಲಕ ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ನಗರಮಟ್ಟದ ಆಯ್ಕೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ನಮ್ಮ ಕರ್ನಾಟಕ ತಂಡದಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದ್ದು, ಬಳಿಕ ದಕ್ಷಿಣ ವಲಯದ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ಅಲ್ಲಿಂದ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರನ್ನು ರಾಷ್ಟçಮಟ್ಟದ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯ ಮೂಲಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ವೃತ್ತಿಪರ ಫುಟ್‌ಬಾಲ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ವೇದಿಕೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ಬೆAಗಳೂರಿನ ಎಫ್‌ಸಿ, ಸ್ಕೋರಿಂಗ್ ಕಿಡ್ಸ್ ಬೆಂಗಳೂರು, ಕೆಇಎಂಪಿ ಎಫ್‌ಸಿ, ರೆಬೆಲ್ಸ್ ಎಫ್‌ಸಿ, ದಿ ಫುಟ್‌ಬಾಲ್ ಸ್ಕೂಲ್ ಹಾಗೂ ರಶ್ ಅಕಾಡೆಮಿ ಸೇರಿದಂತೆ ಹಲವು ಫುಟ್‌ಬಾಲ್ ಸಂಸ್ಥೆಗಳು ಈ ಕಾರ್ಯಕ್ರಮದ ಪಾಲುದಾರ ತಂಡಗಳಾಗಿವೆ.

ಆಸಕ್ತ ಆಟಗಾರರು ಒಥಿಈiಡಿsಣಏiಛಿಞ ಆ್ಯಪ್‌ನಲ್ಲಿ ಕ್ಯೂಆರ್ ಕೋಡ್ ಸ್ಕಾö್ಯನ್ ಮಾಡುವ ಮೂಲಕ ನೋಂದಣಿ ಪ್ರಕ್ರಿಯೆ ಆರಂಭಿಸಿ, ತಮ್ಮ ನಗರವನ್ನು ಆಯ್ಕೆ ಮಾಡಿ ‘ಈಡಿee ಔಜಿ ಅosಣ ಖಿಡಿiಚಿಟs’ ವಿಭಾಗದಲ್ಲಿ ನೋಂದಣಿ ಪೂರ್ಣಗೊಳಿಸಿ ಟ್ರಯಲ್ಸ್ ಪಾಸ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆನ್‌ಲೈನ್ ನೋಂದಣಿಯಲ್ಲಿ ತಾಂತ್ರಿಕ ತೊಂದರೆ ಎದುರಾದಲ್ಲಿ ಅಥವಾ ಇಂಟರ್‌ನೆಟ್ ಸೌಲಭ್ಯವಿಲ್ಲದಿದ್ದರೂ ಆತಂಕಪಡುವ ಅಗತ್ಯವಿಲ್ಲ. ಶಿಬಿರ ನಡೆಯುವ ದಿನ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ೮೯೨೮೬೬೯೫೬೫ ಅನ್ನು ಸಂಪರ್ಕಿಸಬಹುದು. ಆನ್‌ಲೈನ್ ನೋಂದಣಿಗೆ hಣಣಠಿs://iಟಿಜiಚಿಞheಟoಜಿooಣbಚಿಟಟ.ಛಿom/seಚಿsoಟಿ೬ ಜಾಲತಾಣವನ್ನು ಸಂಪರ್ಕಿಸಬಹುದು.

ಶಿಬಿರದ ಸ್ಥಳ: ಐಎನ್‌ಎಸ್ ಸ್ಪೋರ್ಟ್ಸ್ ಸೆಂಟರ್, ಗುಡ್ಡೆಹೊಸೂರು-ಸಿದ್ದಾಪುರ ರಸ್ತೆ, ಕೊಡಗು. ದಿನಾಂಕ: ನವೆಂಬರ್ ೮, ೨೦೨೬. ಸಮಯ: ಬೆಳಿಗ್ಗೆ ೮ ಗಂಟೆ. ನೋಂದಣಿ ಶುಲ್ಕ ಉಚಿತ.