ಚೆಟ್ಟಳ್ಳಿ, ನ. ೬: ವೀರಾಜಪೇಟೆಯ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಪೋಷಕರ ಹಾಗೂ ಶಿಕ್ಷಕರ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಎಂ.ಕೆ. ಪದ್ಮ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ವಿಕಸನದಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು ಎಂದರು.
ಕನ್ನಡ ಉಪನ್ಯಾಸಕಿ ಎಂ.ಪಿ ದಮಯಂತಿ ಕಾಲೇಜಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಹಾಗೂ ಪರೀಕ್ಷೆಗೆ ಸಂಬAಧಿಸಿದ ಮಾಹಿತಿಗಳನ್ನು ಪೋಷಕರಿಗೆ ತಿಳಿಸಿದರು. ಪೋಷಕರು ಮುಕ್ತ ಸಂವಾದ ನಡೆಸುವುದರ ಮೂಲಕ ಕಾಲೇಜಿನ ಏಳಿಗೆಗಾಗಿ ತಮ್ಮ ಸಲಹೆ, ಸೂಚನೆಗಳನ್ನು ನೀಡಿದರು.
ಪೋಷಕ ಹಾಗೂ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸುಗಂಧಿ ಮಾತನಾಡಿ, ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದದ್ದು ಪೋಷಕರ ಕರ್ತವ್ಯ ಎಂದರು.
ಸಭೆಯಲ್ಲಿ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಪೋಷಕರು ಹಾಜರಿದ್ದರು. ವೀಣಾ ಮತ್ತು ತಂಡ ಪ್ರಾರ್ಥಿಸಿ, ಶಿಕ್ಷಕ ಮತ್ತು ಪೋಷಕರ ಸಂಘದ ಸಂಚಾಲಕಿ ಡೈನಾ ಸೋಮಯ್ಯ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ನಕಿಯ ಬಾನು ವಂದಿಸಿದರು. ಉಪನ್ಯಾಸಕರುಗಳಾದ ಅನುಪಮ ತಿಮ್ಮಯ್ಯ ಮತ್ತು ಪ್ರೇಮಾಂಜಲಿ ನಿರೂಪಿಸಿದರು. ರಾಷ್ಟçಗೀತೆಯೊಂದಿಗೆ ಸಭೆ ಮುಕ್ತಾಯಗೊಂಡಿತು.