ಸೋಮವಾರಪೇಟೆ, ನ. ೩: ಬೆಂಗಳೂರಿನ ವೈಟ್‌ಫೀಲ್ಡ್ ವಕೀಲರಾದ ಮಂಜುನಾಥ್ ಹಾಗೂ ಅನ್ನಪೂರ್ಣೇಶ್ವರಿ ನಗರದ ಶ್ರೀರಾಮ್ ಹತ್ಯೆ ಮತ್ತು ಗೌರಿಬಿದನೂರಿನ ವಕೀಲರಾದ ವೆಂಕಟರಮಣ ಸನ್ನಕ್ಕಿ ಅವರ ಮೇಲೆ ನಡೆದ ಕೊಲೆ ಯತ್ನವನ್ನು ಖಂಡಿಸಿ ಇಲ್ಲಿನ ವಕೀಲರ ಸಂಘದ ಪದಾಧಿಕಾರಿಗಳು ಕಲಾಪ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ವಕೀಲರು, ದುಷ್ಕರ್ಮಿಗಳಿಗೆ ಕಟ್ಟುನಿಟ್ಟಿನ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು. ಈ ಸಂಬAಧಿತ ಮನವಿ ಪತ್ರವನ್ನು ತಾಲೂಕು ಕಚೇರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಅಭಿಮನ್ಯು ಕುಮಾರ್, ಸಂಘದ ಉಪಾಧ್ಯಕ್ಷ ಬಿ.ಇ. ಜಯೇಂದ್ರ, ಕಾರ್ಯದರ್ಶಿ ಯತೀಶ್, ಖಜಾಂಚಿ ಕೆ.ಪಿ. ಪ್ರೇಮ, ಹಿರಿಯ ವಕೀಲರಾದ ಚನ್ನಬಸವಯ್ಯ, ಕೆ.ಎಸ್. ಪದ್ಮನಾಭ, ತಿಮ್ಮಯ್ಯ, ಕಾಟ್ನಮನೆ ವಿಠಲ್, ಬಿ.ಜಿ. ದೀಪಕ್, ಮುತ್ತಣ್ಣ, ಗಣಪತಿ, ಮನೋಹರ್, ಚಂದ್ರಶೇಖರ್, ಜಗದೀಶ್ ಬೋಪಣ್ಣ ಸೇರಿದಂತೆ ಪದಾಧಿಕಾರಿಗಳು, ಸದಸ್ಯರುಗಳು ಇದ್ದರು.