ಮಡಿಕೇರಿ, ನ. ೧: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, ಮಡಿಕೇರಿ ಇಲ್ಲಿ ನ.೧೪ ರಿಂದ ಪ್ರಾರಂಭವಾಗುತ್ತಿರುವ ೬ ತಿಂಗಳ ಅವಧಿಯ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್ ತರಬೇತಿಗೆ ದಿನಾಂಕ: ಅರ್ಜಿ ಆಹ್ವಾನಿಸಲಾಗಿದೆ.

ಈ ತರಬೇತಿ ಪಡೆಯಲು ಬಿ.ಕಾಂ, ಬಿ.ಬಿ.ಎಂ, ಅಥವಾ ಯಾವುದೇ ಪದವಿಯಲ್ಲಿ ಮೂರು ವರ್ಷವೂ ಲೆಕ್ಕಶಾಸ್ತçವನ್ನು ಒಂದು ವಿಷಯವನ್ನಾಗಿ ಒಳಗೊಂಡ ಪದವಿದಾರರಾಗಿರಬೇಕು; ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಬಡತನ ರೇಖೆಗಿಂತ ಕೆಳಗಿನ ಅಭ್ಯರ್ಥಿಗಳಿಗೆ (ಬಿ.ಪಿ.ಎಲ್ ಕಾರ್ಡ್ ದಾರರಿಗೆ) ತರಬೇತಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಈ ತರಬೇತಿ ಪಡೆದವರಿಗೆ ಸಹಕಾರ ಸಂಘಗಳ ಲೆಕ್ಕಪರಿಶೋಧನೆ ನಡೆಸಲು ಅವಕಾಶ ಕಲ್ಪಿಸಲಾಗುವುದು;

ಅರ್ಜಿ ದೊರೆಯುವ ಸ್ಥಳ: ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, ಮಡಿಕೇರಿ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ ಮತ್ತು ಹಾಸನ ಜಿಲ್ಲಾ ಸಹಕಾರ ಯೂನಿಯನ್ ನಿ., ಹಾಸನ ಇಲ್ಲಿ ಅರ್ಜಿ ಪಡೆದು ದಿನಾಂಕ: ೧೩.೧೧.೨೦೨೬ರೊಳಗೆ ಸಲ್ಲಿಸಬೇಕು; ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು; ಆನ್‌ಲೈನ್ ವೆಬ್‌ಸೈಟ್ ವಿಳಾಸ :hಣಣಠಿs://ಜಛಿಚಿ.ಞsಛಿಜಿಟ.iಟಿ ತರಬೇತಿಯ ಅವಧಿಯಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಉಚಿತ ವಸತಿ ಗೃಹದ ಸೌಲಭ್ಯವಿರುತ್ತದೆ; (ಊಟದ ವೆಚ್ಚ ಭರಿಸಬೇಕು)

ಹೆಚ್ಚಿನ ಮಾಹಿತಿಗಾಗಿ ದೂರವಾಣಿ: ೯೯೦೨೧೮೯೮೭೨, ೯೬೬೩೧೫೩೯೨೨, ೮೭೬೨೧೧೦೯೫೨, ೮೭೬೨೯೨೫೮೬೨ ಅನ್ನು ಸಂಪರ್ಕಿಸಬಹುದು.