ಮಡಿಕೇರಿ, ಅ. ೩೧: ಎಂಡಿಎAಎ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಮಡಿಕೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಡಿಕೇರಿಯ ಗೌಳಿಬೀದಿಯ ನಿವಾಸಿ, ಆಟೋ ಚಾಲಕ ರುಹೇಜ್ ಶೇಖ್ (೨೯), ಮಡಿಕೇರಿ ಮಾರ್ಕೇಟ್ ಬಳಿ ನಿವಾಸಿ, ಬಿಬಿಎ ವಿದ್ಯಾರ್ಥಿ ಮಹಮ್ಮದ್ ಶಾಕೀಬ್ (೧೯) ಬಂಧಿತ ಆರೋಪಿಗಳು.

ತಾ. ೩೦ ರಂದು ಮಡಿಕೇರಿಯ ಗೌಳಿಬೀದಿಯ ಮೈದಾನದಲ್ಲಿ ಬಂಧಿತ ಇಬ್ಬರು ಆರೋಪಿ ಸೇರಿದಂತೆ ಅಪರಿಚಿತ ವ್ಯಕ್ತಿ ಆಟೋ ರಿಕ್ಷಾ ನಿಲ್ಲಿಸಿಕೊಂಡು ಎಂಡಿಎA ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಂಡಿದ್ದಾರೆ.

ಆರೋಪಿಗಳಿಂದ ೪.೦೪ ಲಕ್ಷ ಮೌಲ್ಯದ ೧೧ ಗ್ರಾಂ ಎಂಡಿಎAಎ ಮಾದಕ ಪದಾರ್ಥ, ೫ ಮೊಬೈಲ್, ೧ ಆಟೋ ರಿಕ್ಷಾ, ೧ ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.

ಮಡಿಕೇರಿ ಡಿವೈಎಸ್ಪಿ ಸೂರಜ್ ಮಾರ್ಗದರ್ಶನ, ಮಡಿಕೇರಿ ನಗರ ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಪೊಲೀಸ್ ಉಪನಿರೀಕ್ಷಕ ಶ್ರೀಧರ್, ಮುಖ್ಯಪೇದೆಗಳಾದ ಕೃಷ್ಣಮೂರ್ತಿ, ರಾಜೇಶ್, ಪುಂಡಾರೀಕಾಕ್ಷ, ಪೇದೆಗಳಾದ ಕೆ.ಬಿ. ರೋಹಿತ್, ಪ್ರದೀಪ್ ಕುಮಾರ್, ಪ್ರಸಾದ್ ಕುಮಾರ್, ಪ್ರಸನ್ನ, ಸಿದ್ದಲಿಂಗಪ್ಪ ರಾಗಿ ಇದ್ದರು.