ಸಿದ್ದಾಪುರ, ಅ. ೩೦: ಅಮ್ಮತ್ತಿ ಪಟ್ಟಣದಲ್ಲಿ ಎಳನೀರು ಮಾರಾಟ ಮಾಡುತ್ತಿದ್ದ ಲಕ್ಷಿö್ಮ ಎಂಬ ಮಹಿಳೆ ಕೆಲಸದ ನಿಮಿತ್ತ ಸಿದ್ದಾಪುರಕ್ಕೆ ಆಗಮಿಸಿದ ಸಂದರ್ಭ ಸಿದ್ದಾಪುರದ ಸಂತ ಮರಿಯಮ್ಮ ಚರ್ಚಿನ ಬಳಿ ಅವರ ಮೊಬೈಲ್ ಕಳೆದು ಹೋಗಿತ್ತು, ಟಿ.ವಿ. ಮೆಕ್ಯಾನಿಕ್ ಸಣ್ಣು ಎಂಬವರಿಗೆ ಅದು ಸಿಕ್ಕಿದ್ದು, ಬಳಿಕ ಅವರು ಅದನ್ನು ಸಿದ್ಧಾಪುರ ಪೊಲೀಸ್ ಠಾಣೆಗೆ ನೀಡಿದರು. ಪೊಲೀಸರು ಮಾಹಿತಿ ಕಲೆ ಹಾಕಿ ನಂತರ ಸಣ್ಣು ಅವರು ಪೊಲೀಸರ ಸಮ್ಮುಖದಲ್ಲಿ ಲಕ್ಷಿö್ಮ ಅವರಿಗೆ ಮೊಬೈಲ್ ಹಸ್ತಾಂತರ ಮಾಡಿದರು.