ಮಡಿಕೇರಿ, ಅ. ೩೦: ಭಾಗಮಂಡಲ ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಮಡಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಂಡರ್ ೧೪ ವಿಭಾಗದಲ್ಲಿ ದಿಗಂತ್ ರಿಲೇ ಪ್ರಥಮ, ಆಶಿತಾ ೮೦ ಮೀಟರ್ ಹರ್ಡಲ್‌ನಲ್ಲಿ ಪ್ರಥಮ, ಅಂಡರ್ ೧೭ ವಿಭಾಗ ದಲ್ಲಿ ಕೀರ್ತನ ೪೦೦ ಮೀಟರ್ ಹರ್ಡಲ್ಸ್ ಪ್ರಥಮ ಲಿವೀನ್ ಹ್ಯಾಮರ್ ಥ್ರೋ ದ್ವಿತೀಯ. ದೀಕ್ಷಿತ್ ೪೦೦ ಮೀಟರ್ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲ ಲೋಕೇಶ್. ನಿಲಯ ಪಾಲಕರಾದ ದೀಪಕ್ ಕೆ.ಕೆ, ದೈಹಿಕ ಶಿಕ್ಷಣ ಶಿಕ್ಷಕ ಪವನ್ ಸಾಗರ್. ಕೆ. ಪಿ. ಮಾರ್ಗದರ್ಶನ ನೀಡಿದ್ದರು.