ಸುಂಟಿಕೊಪ್ಪ, ಅ. ೩೦: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಮತ್ತು ಔಷಧಿಗಳ ಕೊರತೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ಕುಮಾರ್ ಭರವಸೆ ನೀಡಿದರು.
ಮಂಗಳವಾರದAದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ವೇವ್ ಸಂಘಟನೆ ಪದಾಧಿಕಾರಿಗಳು ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ಆರೋಗ್ಯ ಕೇಂದ್ರದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೇವಲ ೭ ಮಂದಿ ಖಾಯಂ ನೇಮಕಾತಿ ಹೊಂದಿದ ವೈದ್ಯರಿದ್ದು ಉಳಿದ ಕಡೆಗಳಲ್ಲಿ ಗುತ್ತಿಗೆ ಆಧಾರದಲ್ಲಿದ್ದಾರೆ. ಗುತ್ತಿಗೆ ಆಧಾರದಲ್ಲಿ ಇರುವವರು ಉನ್ನತ ವಿದ್ಯಭ್ಯಾಸ ಇತರ ಕಾರಣಗಳಿಂದ ಸೇವೆಯಿಂದ ನಿರ್ಗಮಿಸುತ್ತಿದ್ದು, ಬದಲಿ ವ್ಯವಸ್ಥೆಗೆ ಸ್ಥಳೀಯರು ಸೇರಿದಂತೆ ರೋಗಿಗಳು ಬರುತ್ತಿಲ್ಲ ಎಂದು ಹೇಳಿದರು. ಹೊರ ನೇಮಕಗೊಂಡು ವೈದ್ಯರುಗಳು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ, ಈ ಕುರಿತು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತುರ್ತು ನೇಮಕಾತಿ ಎಂದು ಪರಿಗಣಿಸಿ ವೈದ್ಯರ ಭರ್ತಿಗೆ ಪ್ರಯತ್ನಿಸಿ ನಿರ್ಣಾಯಕ ಖಾಲಿ ಹುದ್ದೆಯೆಂದು ಪರಿಗಣಿಸಿ ಅತ್ಯಾವಶ್ಯಕ ನೇಮಕಾತಿ ಎಂದು ಭಾವಿಸಿ ಪ್ರಯತ್ನ ಮಾಡಲಾಗುತ್ತಿದೆ, ನಿಯೋಜನೆಗೊಂಡ ವೈದ್ಯರು ಅನಧಿಕೃತವಾಗಿ ಗೈರು ಹಾಜರಾಗುತ್ತಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇಸಿಜಿ ಮತ್ತು ರಕ್ತದೊತ್ತಡ ಪರೀಕ್ಷೆ ಉಚಿತವಾಗಿ ಮಾಡಲಾಗುತ್ತಿದ್ದು ಈ ೨ ವೈದ್ಯಕೀಯ ಉಪಕರಣ ದುರಸ್ಥೀಗಿಡಾಗಿದ್ದು ಅದನ್ನು ಆದ್ಯತೆ ಮೇರೆಗೆ ಸುಸ್ಥಿತಿಗೆ ತರಲಾಗಿದೆ ಎಂದು ರೋಗಿಗಳಿಗೆ ಮಾಹಿತಿ ನೀಡಿದರು.
ಅನಾರೋಗ್ಯ ಪೀಡಿತರ ಪರವಾಗಿ ಮಾತನಾಡಿದ ಕಾನಿಶ್ ಅವರು ಔಷಧಿಗಳ ಕೊರತೆ ವೈದ್ಯರು ನೀಡಲಾಗುತ್ತಿರುವ ಔಷಧಿಗಳು ಲಭ್ಯವಿರುವುದಿಲ್ಲ ಎಂದರು.
ವೇವ್ ಸಂಘಟನೆಯ ಸಂಚಾಲಕರಾದ ಕೆ.ಎ. ಲತೀಫ್ ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲ್ಲೂ ಸ್ವಚ್ಚತೆಯನ್ನು ಕಾಯ್ದುಕೊಳ್ಳು ವುದು ಶೀತಲಗೊಂಡ ಕಟ್ಟಡಗಳಲ್ಲಿ ಹಾವು ಸೇರಿದಂತೆ ಇತರ ವಿಷಜಂತುಗಳು ಸೇರಿಕೊಳ್ಳುತ್ತಿವೆ ಇದರಿಂದ ಇದರ ಹಿಂಬದಿಯಲ್ಲಿ ವಾಸದ ಮನೆ ಪಕ್ಕದ ಶಾಲೆಗೆ ಅಪಾಯ ತಪ್ಪಿದಲ್ಲ ಎಂದು ಮಾಹಿತಿ ನೀಡಿದ ಅವರು ಈ ಬಗ್ಗೆ ಒಂದೂವರೆ ತಿಂಗಳ ಹಿಂದೆ ಸಂಬAಧಿಸಿದ ಅಭಿಯಂತರರು ಭೇಟಿ ನೀಡಿದಾಗ ಅವರ ಗಮನಕ್ಕೆ ತರಲಾಗಿದ್ದು ಸ್ವಚ್ಚತೆಯ ಕಾರ್ಯವನ್ನು ಮಾಡಲಾಗುವುದೆಂದು ಭರವಸೆ ನೀಡಿದರೂ ಕಾರ್ಯರೂಪಕ್ಕೆ ಬಂದಿಲ್ಲಾ ಎಂದು ಲತೀಫ್ ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಐ. ಭವಾನಿ ಇಲ್ಲಿನ ಸಮಸ್ಯೆಗಳ ನೈಜ ವಾಸ್ತಂಶವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು ಅಲ್ಲದೆ ಕುಂದು ಕೊರತೆ ಔಷಧಿಗಳು ದೊರೆಯದಿರುವ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಡಾ. ಸತೀಶ್ ಕುಮಾರ್ ಅವರು ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ಮತ್ತು ಶೀತಿಲ ಕಟ್ಟಡಗಳನ್ನು ತೆರವುಗೊಳಿಸಲು ರೂ. ೧೦ ಲಕ್ಷ ಅನುದಾನ ಬಿಡುಗಡೆಗೊಂಡಿದೆ ಸಂಬAಧಿಸಿದ ಅಭಿಯಂತರರು ಮತ್ತು ಗುತ್ತಿಗೆದಾರರು ಕ್ರಮ ವಹಿಸಬೇಕಾಗಿದೆ ಎಂದು ಮಾಹಿತಿ ನೀಡಿದರು. ಹಾಗೆಯೇ ಆರೋಗ್ಯ ಕೇಂದ್ರದಲ್ಲಿರುವ ಔಷಧಿಗಳನ್ನೆ ರೋಗಿಗಳಿಗೆ ವೈದ್ಯರು ಚೀಟಿಯ ಮೂಲಕ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಸಂದರ್ಭ ಅಭಿಯಂತರರಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಯು. ರಫೀಕ್ಖಾನ್ ರೂ. ೮ ಲಕ್ಷಕ್ಕೆ ಸ್ವಚ್ಚತೆ ಮತ್ತು ದುರಸ್ಥಿತಿ ಕಾರ್ಯಕ್ಕೆ ಟೆಂಡರ್ ಆಗಿದ್ದು ಗುತ್ತಿಗೆದಾರನು ಕೂಡ ನಿಯೋಜನೆಗೊಳಿಸಲಾಗಿದೆ ಈ ಬಗ್ಗೆ ಸ್ಥಳೀಯರು ಕ್ರಮ ವಹಿಸಿ ಕೆಲಸ ನಿರ್ವಹಿಸಿ ಕೊಡಬೇಕಿದೆ ಎಂದು ಮಾಹಿತಿ ನೀಡಿದರು.