ನಾಪೋಕ್ಲು, ಅ. ೩೦: ಕರ್ನಾಟಕ ಅಮೆಚೂರ್ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಸೋಮವಾರಪೇಟೆಯಲ್ಲಿ ಆಯೋಜಿಸಲಾಗಿದ್ದ ೧ನೇ ರಾಜ್ಯಮಟ್ಟದ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ - ೨೦೨೬ರಲ್ಲಿ ಪಾಲೂರು ಗ್ರಾಮದ ಕೃಷಿಕ್ ರಾಜ್ ಅವರು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಾಕ್ಸಿAಗ್ ಅಸೋಸಿಯೇಷನ್ ಅಧ್ಯಕ್ಷ ಎನ್.ಸಿ. ಸುದರ್ಶನ್ ಹಾಗೂ ಪದಾಧಿಕಾರಿಗಳು ಉಪಸ್ಥಿತಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿ ಗಳಿಸಿರುವ ಕೃಷಿಕ್ ರಾಜ್ಗೆ ಕರಾಟೆ ತರಬೇತುದಾರ ಬಿ.ಎ. ಆನಂದ ಪೂಜಾರಿ ಬೆಟ್ಟಗೇರಿ ಅವರು ಮಾರ್ಗದರ್ಶನ ನೀಡಿದ್ದಾರೆ. ಕೃಷಿಕ್ ರಾಜ್ ಪಾಲೂರು ಗ್ರಾಮ ನಿವಾಸಿ ರಾಜೇಶ್ ಬಂಗೇರ ಹಾಗೂ ಕವಿತಾ ದಂಪತಿಯ ಪುತ್ರ.