ಶನಿವಾರಸಂತೆ, ಅ. ೨೯: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ೩೬ನೇ ವರ್ಷದ ಗೌರಿ-ಗಣೇಶ ವಿಸರ್ಜನೋತ್ಸವ ತಾ. ೩೧ ರಂದು ನಡೆಯಲಿದೆ.

ವಿಸರ್ಜನೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಅಂದು ಬೆಳಿಗ್ಗೆ ೧೦ ಗಂಟೆಗೆ ಅರ್ಚಕ ಮಂಜುನಾಥ ಶರ್ಮ ಅವರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ, ಶಾಂತಿ ಹೋಮ, ದುರ್ಗಾ ಪೂಜೆ ನಡೆಯಲಿದೆ.

ಮಧ್ಯಾಹ್ನ ೧೨ ಗಂಟೆಗೆ ಶ್ರೀ ವಿಜಯ ವಿನಾಯಕ ಸ್ವಾಮಿಗೆ ಮಹಾಪೂಜೆ, ಮಹಾಮಂಗಳಾರತಿ ನಡೆದು, ತೀರ್ಥ-ಪ್ರಸಾದ ವಿತರಣೆಯಾಗಲಿದೆ. ನಂತರ ೧ ಗಂಟೆಯಿAದ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ.

ಸಂಜೆ ೭ ಗಂಟೆಗೆ ಗೌರಿ-ಗಣೇಶ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ, ಬೆಳ್ಳಾರೆಯ ಯುವಶಕ್ತಿ ಗೊಂಬೆ ಬಳಗದ ವತಿಯಿಂದ ಸಿಂಹವೇಶ’, ಗುರುವಾಯನಕೆರೆ ಹೆಸರಾಂತ ಶ್ರೀವಂಶಿಕ ಆರ್ಟ್ ಅವರಿಂದ ಕೀಲು ಕುದುರೆ ಪ್ರದರ್ಶನ’ ಹಾಗೂ ಸಕಲೇಶಪುರ ಹಿಂದೂ ಫಯರ್ ಬ್ರ‍್ಯಾಂಡ್ ವತಿಯಿಂದ ನಾಸಿಕ್ ಬ್ಯಾಂಡ್ ಮತ್ತು ಮಡಿಕೇರಿಯ ಶಾಂತಿನಿಕೇತನ ಯುವಕ ಸಂಘದವರಿAದ ಶ್ರೀ ಗಣಪತಿಯಿಂದ ನೂಪುರಾಸುರ ವಧೆ ಎಂಬ ಕಥಾನಕವನ್ನು ಅತ್ಯಾಕರ್ಷಕ ಮಂಟಪ ಪ್ರದರ್ಶನದೊಂದಿಗೆ ಪ್ರಸ್ತುತಪಡಿಸಲಿದ್ದಾರೆ. ಸಿಡಿಮದ್ದಿನ ಪ್ರದರ್ಶನದೊಂದಿಗೆ ಶನಿವಾರಸಂತೆಯ ಎಸ್.ವಿ.ಎಲ್. ಪ್ರೋ ಡಿ.ಜೆ. ಸೌಂಡ್ಸ್, ಲೈಟಿಂಗ್ಸ್ ಮತ್ತು ಸ್ಟುಡಿಯೋ ಪ್ರದರ್ಶನದೊಂದಿಗೆ ಗೌರಿ-ಗಣೇಶ ಉತ್ಸವ ಮೂರ್ತಿಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ ಕಾಜೂರು ನದಿಯಲ್ಲಿ ವಿಸರ್ಜಿಸಲಾಗುವುದು ಎಂದು ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.