ಮಡಿಕೇರಿ, ಅ. ೨೮: ತಲಕಾವೇರಿ ಕ್ಷೇತ್ರದಲ್ಲಿ ಕೊಡಗು ಏಕೀಕರಣ ರಂಗದ ಮೂಲಕ ನಡೆಯುತ್ತಿರುವ ಅನ್ನದಾನ ಸೇವೆ ಮುಂದುವರಿಯುತ್ತಿದೆ. ತೀರ್ಥೋದ್ಭವದ ಸಂದರ್ಭದಿAದ ಕಿರುಸಂಕ್ರಮಣದ ತನಕವೂ ಕೊ.ಏ.ರ. ಪ್ರತಿವರ್ಷ ಭಕ್ತಾದಿಗಳಿಗೆ ಕ್ಷೇತ್ರದಲ್ಲಿ ದಾಸೋಹ ಏರ್ಪಡಿಸುತ್ತಿದೆ.

ತೀರ್ಥೋದ್ಭವ ಘಟಿಸಿದ ಬಳಿಕ ೧೦ ದಿನಗಳ ಕಾಲದ ಪತ್ತಾಲೋದಿಯೂ ಇಲ್ಲಿ ಪ್ರಮುಖ ಘಟ್ಟವಾಗಿದೆ. ಈ ತನಕ ಕ್ಷೇತ್ರದಲ್ಲಿ ಸಂಘಟನೆಯಿAದ ಸುಮಾರು ೫೫ ಸಾವಿರ ಭಕ್ತರಿಗೆ ಮಧ್ಯಾಹ್ನ ಹಾಗೂ ರಾತ್ರಿಯ ಭೋಜನ ಕಲ್ಪಿಸಲಾಗಿದೆ. ಜೊತೆಗೆ ಸುಮಾರು ೧೮ ಸಾವಿರ ಮಂದಿಗೆ ಬೆಳಗ್ಗಿನ ಉಪಾಹಾರವನ್ನು ಒದಗಿಸಲಾಗಿದೆ.

ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ, ವಡೆ, ಸಾಂಬಾರ್, ಚಟ್ನಿ, ಉಪ್ಪಿಟ್ಟು, ಕೇಸರಿಬಾತ್, ಕಾರಬಾತ್, ಚಿತ್ರಾನ್ನ. ಅಪರಾಹ್ನದ ಭೋಜನಕ್ಕೆ ಅನ್ನ, ಸಾಂಬಾರ್, ರಸಂ, ಮೊಸರು, ಉಪ್ಪಿನಕಾಯಿ, ಪಾಯಸ ನೀಡಲಾಗುತ್ತಿದೆ.

ಪ್ರತಿದಿನ ಬೆಳಿಗ್ಗೆ ೭ ರಿಂದ ಸಂಜೆ ೫ ರತನಕ ಬಿಸಿ ಕಾಫಿಯನ್ನು ವಿತರಿಸಲಾಗುತ್ತಿದೆ ಎಂದು ರಂಗದ ಪ್ರಮುಖರಾದ ಅಜ್ಜೀನಂಡ ತಮ್ಮು ಪೂವಯ್ಯ ಅವರು ಮಾಹಿತಿ ನೀಡಿದ್ದಾರೆ.