ಮಡಿಕೇರಿ, ಅ. ೨೭: ಕೊಡವಲ್ಯಾಂಡ್ ಎಂಬುದು ಆದಿಮಸಂಜಾತ ಕೊಡವ ಜನಾಂಗೀಯ ಸಮುದಾಯದ ಪಾರಂಪರಿಕ ಮತ್ತು ಅವಿಭಾಜ್ಯ ಮಾತೃಭೂಮಿಯಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು.
ನಾಪೋಕ್ಲುವಿನಲ್ಲಿ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಡವಲ್ಯಾಂಡ್ ಎಂಬುದು ಆದಿಮಸಂಜಾತ ಕೊಡವ ಜನಾಂಗೀಯ ಸಮುದಾಯದ ಮಾತೃಭೂಮಿಯಾಗಿದೆ. ಕೊಡಗನ್ನು ತಮ್ಮ ನಿವಾಸವನ್ನಾಗಿ ಮಾಡಿಕೊಂಡಿರುವ ಇತರರಿಗೆ ಕೊಡವಲ್ಯಾಂಡ್ ಅವರ ದತ್ತು ಮಾತೃಭೂಮಿಯಾಗಿದೆ. ನಾವು ಇಲ್ಲಿ ವಾಸಿಸುವ ಪ್ರತಿಯೊಬ್ಬರನ್ನೂ ಗೌರವಿಸುತ್ತೇವೆ. ಅದೇ ರೀತಿ, ಮೈಸೂರು, ಬೆಂಗಳೂರು, ದೆಹಲಿ, ಚೆನ್ನೆöÊ, ಮುಂಬೈ, ಹೈದರಾಬಾದ್, ಕೊಲ್ಕತ್ತಾ, ಯುಎಇ, ಕೆನಡಾ, ಯುಕೆ, ಆಸ್ಟೆçÃಲಿಯಾ, ಸಿಂಗಾಪುರ ಮುಂತಾದ ಕಡೆಗಳಲ್ಲಿ ನೆಲೆಸಿರುವ ಸಾವಿರಾರು ಅನಿವಾಸಿ ಕೊಡವರಿಗೆ, ಆ ಸ್ಥಳಗಳು ಅವರ ದತ್ತು ಮಾತೃಭೂಮಿಯಾಗಿವೆ ಎಂದರು.
ಸAವಿಧಾನದ ವಿಧಿ ೨೪೪, ೩೭೧ ಅಡಿಯಲ್ಲಿ ತಮ್ಮದೇ ಆದ ಪಾರಂಪರಿಕ ಮಾತೃಭೂಮಿಯಾದ ಕೊಡವಲ್ಯಾಂಡ್ನಲ್ಲಿ ಸ್ವಯಂ-ಆಡಳಿತ ಅಥವಾ ಸ್ವಾಯತ್ತತೆಯನ್ನು ಕೊಡವರು ನ್ಯಾಯಯುತವಾಗಿ ಬಯಸುತ್ತಿದ್ದಾರೆ. ಆದರೆ ಕೆಲವರು ಇದಕ್ಕೆ ವಿರೋಧಿಸುತ್ತಿದ್ದಾರೆ. ಅನಿವಾಸಿ ಕೊಡವರು ತಮ್ಮ ದತ್ತು ಮಾತೃಭೂಮಿಯ ಆದಿಮಸಂಜಾತ ಸಮುದಾಯಗಳ ಆಕಾಂಕ್ಷೆಗಳ ವಿರುದ್ಧ ಎಂದಿಗೂ ದ್ವೇಷವನ್ನು ಬೆಳೆಸಿಕೊಂಡಿಲ್ಲ ಮತ್ತು ಬೆಳೆಸಿಕೊಳ್ಳಬಾರದು. ಅನಿವಾಸಿ ಕೊಡವರು ತಮ್ಮ ದತ್ತು ಮಾತೃಭೂಮಿಯಲ್ಲಿ ಎಂದಿಗೂ ಇಂತಹ ಸಂಕುಚಿತ ಮನೋಭಾವವನ್ನು ತೋರಿಲ್ಲ. ಕೊಡವಲ್ಯಾಂಡ್ ಅನ್ನು ತಮ್ಮ ದತ್ತು ಮಾತೃಭೂಮಿ ಎಂದು ಪರಿಗಣಿಸುವ ಹೊರಗಿನಿಂದ ಬಂದು ನೆಲೆ ಕಂಡುಕೊAಡವರಿAದ ನಮ್ಮ ಪಾರಂಪರಿಕ ಮಾತೃಭೂಮಿಯಲ್ಲಿ ನಾವೂ ಸಹ ಇಂತಹದೇ ಪರಸ್ಪರ ಗೌರವ ಮತ್ತು ನಾಗರಿಕ ನಡವಳಿಕೆಯನ್ನು ನಿರೀಕ್ಷಿಸುತ್ತೇವೆ ಎಂದರು.
ಡಾರ್ಜಿಲಿAಗ್ ಗೂರ್ಖಾಲ್ಯಾಂಡ್, ವಿಶಾಖಪಟ್ಟಣಂ ಹಿಲ್ ಟ್ರ್ಯಾಕ್ಟ್ ಏಜೆನ್ಸಿ, ಗೋದಾವರಿ ಹಿಲ್ ಟ್ರ್ಯಾಕ್ಟ್ ಏಜೆನ್ಸಿಯ ಮಾದರಿಯಲ್ಲಿ, ಸಂವಿಧಾನದ ೫ನೇ ಪರಿಚ್ಛೇದದ ಅಡಿಯಲ್ಲಿ “ಕೊಡವಲ್ಯಾಂಡ್” ಅನ್ನು ಸಾಧಿಸುವುದು ಕೊಡವರು ಅನುಭವಿಸುತ್ತಿರುವ ಭೌಗೋಳಿಕ-ರಾಜಕೀಯ ವಿಪತ್ತನ್ನು ಜಯಿಸಲು ಇರುವ ಏಕೈಕ ಪರಿಹಾರವಾಗಿದೆ ಎಂದರು.
ಕೊಡವರ ಅಧ್ಯಾತ್ಮಿಕ ವಾಸಸ್ಥಾನಗಳಾದ ಮಂದ್, ವಿಶಿಷ್ಟ ಕೊಡವ ವಂಶಾವಳಿ ಮತ್ತು ಸಾಂಪ್ರದಾಯಿಕ ಹೃದಯಭಾಗವನ್ನು ಅನಾವರಣಗೊಳಿಸಬೇಕು ಮತ್ತು ಮುಂಬರುವ ೨೦೨೭ರ ರಾಷ್ಟಿçÃಯ ಜನಗಣತಿಯಲ್ಲಿ ಕೊಡವರನ್ನು ವಿಶಿಷ್ಟ, ಅಪರೂಪದ ಜನಾಂಗೀಯ ಸಮುದಾಯವೆಂದು ದಾಖಲಿಸಬೇಕು ಮತ್ತು ಎಣಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸಿಎನ್ಸಿಯ ಈ ಸಾಮೂಹಿಕ ಮಾನವ ಸರಪಳಿ ಕಾರ್ಯಕ್ರಮವು ಮುಖ್ಯವಾಗಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸಂವಿಧಾನದ ೩೭೧ ನೇ ವಿಧಿ, ೫ ನೇ ಮತ್ತು ೬ ನೇ ಪರಿಚ್ಛೇದಗಳ ಅಡಿಯಲ್ಲಿ ಸ್ವಯಂ ಆಡಳಿತದ ಮೇಲೆ ಗಮನ ಹರಿಸುತ್ತದೆ. ಯುಎನ್ ಚಾರ್ಟರ್ ಮತ್ತು ಸಂವಿಧಾನದ ಅಡಿಯಲ್ಲಿ ದೇಶೀಯ ಸಮುದಾಯವಾಗಿ ಕೊಡವ ಜನಾಂಗಕ್ಕೆ ಸಂವಿಧಾನಾತ್ಮಕ ರಕ್ಷಣೆ ಮತ್ತು ವಿಶೇಷ ಗುರುತಿಸುವಿಕೆ, ಸಂವಿಧಾನದ ೨೫, ೨೬ ಮತ್ತು ೨೮ ನೇ ವಿಧಿಗಳ ಅಡಿಯಲ್ಲಿ ಕೊಡವರ ಜನಾಂಗೀಯ-ಧಾರ್ಮಿಕ ಸಂಸ್ಕಾರವಾದ ‘ಗನ್ -ತೋಕ್’ (ಬಂದೂಕು) ಪರಂಪರೆಯನ್ನು ಮುಂದುವರಿಸುವುದು, ಇದರೊಂದಿಗೆ, ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಲಾದ “ಸಂಘ” ಅದೃಶ್ಯ ಕ್ಷೇತ್ರ ಮಾದರಿಯಲ್ಲಿ ಪಾರ್ಲಿಮೆಂಟ್ ಮತ್ತು ರಾಜ್ಯ ಶಾಸನಸಭೆಯಲ್ಲಿ ದೇಶೀಯ ಪ್ರಕೃತಿ ಆರಾಧಕ ಕೊಡವರಿಗೆ ಪ್ರತ್ಯೇಕ ಶಾಸನಸಭಾ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಲಾಯಿತು.
ಜಾಗೃತಿ ಕಾರ್ಯಕ್ರಮದಲ್ಲಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ನಾಟೋಳಂಡ ಕಸ್ತೂರಿ ಉತ್ತಪ್ಪ, ನಾಟೋಳಂಡ ಬಿಂದು ಸಚಿನ್, ಅಜ್ಜೇಟಿರ ರಾಣಿ ಪಳಂಗಪ್ಪ, ಬೊಳ್ಳಂಡ ಮೀನಾ ಸುರೇಶ್, ಮೇಚಂಡ ರಾಣಿ, ಕಾಂಡAಡ ಜೋಯಪ್ಪ, ಕಾಟುಮಣಿಯಂಡ ಉಮೇಶ್, ಕಲಿಯಂಡ ಪ್ರಕಾಶ್, ಅರೆಯಡ ರತ್ನ ಪೆಮ್ಮಯ್ಯ, ಕುಲ್ಲೇಟಿರ ಅರುಣ್ ಬೇಬ, ಕೇಟೋಳಿರ ಹರೀಶ್ ಪೂವಯ್ಯ, ಅರೆಯಡ ಗಿರೀಶ್, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಅಪ್ಪಾರಂಡ ಪ್ರಸಾದ್ ಕುಶಾಲಪ್ಪ, ಕರವಂಡ ಲವ ನಾಣಯ್ಯ, ಬಾಳೆಯಡ ಶಿವು, ಮಣವಟ್ಟಿರ ಸ್ವರೂಪ್ ಪೂವಯ್ಯ, ಮಾಚೆಟ್ಟಿರ ಕುಶಾಲಪ್ಪ, ಕಂಗAಡ ಜಾಲಿ ಪೂವಪ್ಪ, ಅರೆಯಡ ಅಶೋಕ್, ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ, ಕೇಲೇಟಿರ ದೀಪು, ನಾಯಕಂಡ ಮುತ್ತಪ್ಪ, ಮಾಳೆಯಂಡ ಕುಟ್ಟಪ್ಪ, ಪೊನ್ನಚಂಡ ಕಾಳಪ್ಪ, ಬೊಳ್ಳೇಪಂಡ ರೋಶನ್, ಕೆಟೋಳಿರ ರಮ್ಮಿ, ಕೇಟೋಳಿರ ಶಮ್ಮಿ, ನಾಟೋಳಂಡ ಜಯ, ಅಜ್ಜೇಟಿರ ಬೋಪಣ್ಣ, ಚಂಗೇಟಿರ ಅಪ್ಪಣ್ಣ, ನಾಟೋಳಂಡ ಹರ್ಷ ಉತ್ತಪ್ಪ, ಬೊಳ್ಳೇಪಂಡ ಜಾನ್ ಪೂಣಚ್ಚ, ಚೆಟ್ಟಿಯಾರಂಡ ಸುರೇಶ್, ಕಲ್ಲೆಂಗಡ ಸುಬ್ಬಯ್ಯ, ಕೋಡಿಮಣಿಯಂಡ ತಮ್ಮುಣಿ ಬೋಪಯ್ಯ, ಶಿವಚಳಿಯಂಡ ಸುಭಾಷ್, ಅಜ್ಜೇಟಿರ ಶಂಭು, ಶಿವಚಾಳಿಯಂಡ ತಿಮ್ಮಯ್ಯ, ಬೊಟ್ಟೋಳಂಡ ಅಪ್ಪಣ್ಣ, ಮೂವೇರ ಪೆಮ್ಮಯ್ಯ, ಕರವಂಡ ಸುರೇಶ್, ಕೊಂಡಿರ ನಂದ, ಕಲ್ಲೆಂಗಡ ಕರುಂಬಯ್ಯ, ಕರವಂಡ ಲಿಥಿನ್, ಮಣವಟ್ಟಿರ ಹರೀಶ್, ಬೊಟ್ಟೋಳಂಡ ರಮೇಶ್, ಅಪ್ಪಚಿರ ಮಹೇಶ್, ಮುಂಡAಡ ಶಾಂತ ಅಯ್ಯಣ್ಣ, ಕಲಿಯಂಡ ದೀಪಕ್, ಕೊಂಡಿರ ಸುರೇಶ್, ಮುಂಡAಡ ಪ್ರಧಾನ್ ಮೇದಪ್ಪ, ಮಣವಟ್ಟಿರ ಅಯ್ಯಪ್ಪ, ಕಾಂಡAಡ ಸುಬ್ಬಯ್ಯ, ಕುಂಡ್ಯೋಳAಡ ವಿಷು ಪೂವಯ್ಯ, ಕೇಟೋಳಿರ ಫಿರೋಜ್ ಗಣಪತಿ, ಪಟ್ರಪಂಡ ನಿರನ್ ಕಾರ್ಯಪ್ಪ, ಬಿದ್ದಾಟಂಡ ದೇವಯ್ಯ, ಚೀಯಕಪೂವಂಡ ಪೊನ್ನಣ್ಣ, ಅಪ್ಪುಮಣಿಯಂಡ ರಘು ಸುಬ್ಬಯ್ಯ, ಕುಲ್ಲೇಟಿರ ದೇವಯ್ಯ, ಮಾಳೆಯಂಡ ವಿಜು ಅಪ್ಪಚ್ಚು, ಕುಲ್ಲೇಟಿರ ರಾಜೇಶ್, ಮಣವಟ್ಟಿರ ದೀಪಕ್ ಪೊನ್ನಪ್ಪ, ಅಜ್ಜೇಟಿರ ರಾಜು ಪೂಣಚ್ಚ, ಕೇಲೇಟಿರ ರತ್ನ, ಮಣವಟ್ಟಿರ ದಿನೇಶ್ ಬಿದ್ದಪ್ಪ, ಚೀಯಕಪೂವಂಡ ರಘು, ಚೌರೀರ ಶೈಲೇಂದ್ರ, ಕೋಟೆರ ಬೊಳ್ಳಿಯಪ್ಪ, ಅರೆಯಡ ವಿನೋದ್, ಚೌರೀರ ಸಜನ್, ಕುಂಡ್ಯೋಳAಡ ಸುಬ್ಬಯ್ಯ, ಬಾಳೆಯಡ ಪ್ರಥೀಶ್ ಪೂವಯ್ಯ, ಬಿದ್ದಾಟಂಡ ಸಂಪತ್ ಸೋಮಯ್ಯ, ಮಣವಟ್ಟಿರ ಸೋಮಣ್ಣ, ನಾಯಕಂಡ ಉತ್ತಪ್ಪ, ಮಣವಟ್ಟಿರ ಚೆಂಗಪ್ಪ, ಕೇಲೇಟಿರ ನಾಣಯ್ಯ, ಕಾಟುಮಣಿಯಂಡ ತಿಮ್ಮಯ್ಯ, ಅಜ್ಜೇಟಿರ ರಮೇಶ್, ಕಾಂಡAಡ ಬೋಪಣ್ಣ, ಕಾಂಡAಡ ಗಣಪತಿ, ಕುಲ್ಲೇಟಿರ ಶಾಂತ, ಕೊಂಡಿರ ರಾಜಪ್ಪ, ಶಿವಚಾಳಿಯಂಡ ಉತ್ತಯ್ಯ, ಕಂಗAಡ ಸಮಿತ್ ಕಾಳಯ್ಯ, ಪಾಲೇಕಂಡ ಪ್ರಧಾನ್ ಪೂಣಚ್ಚ, ಐತಿಚಂಡ ಪೂವಣ್ಣ, ಚೇನಂಡ ನಂದ ಜಗದೀಶ್, ಅಪ್ಪಾರಂಡ ಪ್ರಕಾಶ್ ಅಪ್ಪಣ್ಣ ಇದ್ದರು. ಕುಲ್ಲೇಟಿರ ಅರುಣ್ ಬೇಬ ಸ್ವಾಗತಿಸಿದರು. ವಂದನಾರ್ಪಣೆಯನ್ನು ಕಲಿಯಂಡ ಪ್ರಕಾಶ್ ನೆರವೇರಿಸಿದರು. ಮುಂದಿನ ಕಾರ್ಯಕ್ರಮ ನ.೨ ರಂದು ಪೊನ್ನಂಪೇಟೆಯಲ್ಲಿ ನಡೆಯಲಿದೆ.