ಮಡಿಕೇರಿ, ಅ. ೨೭: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯನ್ನು ಕೊಡಗು ಜಿಲ್ಲೆಯಲ್ಲಿ ಕೈಗೊಂಡು ಮುಕ್ತಾಯಗೊಳಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ೪,೧೧,೬೩೨ ಮತದಾರರಿದ್ದಾರೆ. ೫೬೭ ಮಂದಿ ಮತದಾರರನ್ನು ಅನರ್ಹಗೊಳಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು hಣಣ[s://ಛಿeo.ಞಚಿಡಿಟಿಚಿಣಚಿಞಚಿ.gov.iಟಿ ಮತ್ತು hಣಣಠಿs://ಞoಜಚಿgu.ಟಿiಛಿ.iಟಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೧,೦೨,೭೩೭ ಪುರುಷರು, ೧,೦೯,೫೦೫ ಮಹಿಳೆಯರು, ೨ ಇತರರು ಸೇರಿ ಒಟ್ಟು ೨,೧೨,೨೪೪ ಮಂದಿ ಮತದಾರರಿದ್ದಾರೆ. ವೀರಾಜಪೇಟೆ ಕ್ಷೇತ್ರದಲ್ಲಿ ೯೮,೧೪೮ ಪುರುಷರು, ೧,೦೧,೨೩೮ ಮಹಿಳೆಯರು, ೨ ಇತರರು ಸೇರಿ ಒಟ್ಟು ೧,೯೯,೩೮೮ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೫೬೭ ಮತಗಟ್ಟೆಗಳು ಸೇರಿ ೨,೦೦,೮೮೫ ಪುರುಷರು, ೨,೧೦,೭೪೩ ಮಹಿಳೆಯರು, ೪ ಇತರರು ಸೇರಿ ೪,೧೧,೬೩೨ ಮಂದಿ ಮತದಾರರಿದ್ದಾರೆ. ೨೪-೮-೨೦೨೬ ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಂತೆ ೪,೦೫,೮೦೩ ಮತದಾರರಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ೫,೮೨೯ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ಎಸ್.ಜೆ. ಸೋಮಶೇಖರ್ ತಿಳಿಸಿದರು.

೫೬೭ ಮಂದಿ ಅನರ್ಹ

ಎಸ್‌ಐಆರ್ ಪ್ರಕ್ರಿಯೆ ಸಂಬAಧ ೫೮,೮೮೩ ಮಂದಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲಾಗಿದ್ದು, ಈ ಪೈಕಿ ೫೬೭ ಮಂದಿಯನ್ನು ವಿವಿಧ ಕಾರಣಗಳಿಗಾಗಿ ಅನರ್ಹಗೊಳಿಸಲಾಗಿದೆ. ಮೃತಪಟ್ಟಿರುವ ಕಾರಣಕ್ಕಾಗಿ ೧೨೫ ಮಂದಿ, ಎರೆಡೆರಡು ಕಡೆ ಮತದಾನ ಹೊಂದಿದ್ದ ೨೪೦ ಮಂದಿ, ಹೊರರಾಜ್ಯ, ಹೊರ ಜಿಲ್ಲೆಗೆ ಸ್ಥಳಾಂತರಗೊAಡಿರುವ ೧೮೬ ಮಂದಿ, ವಿದೇಶದಲ್ಲಿರುವ ಕಾರಣ ಇಲ್ಲಿ ಮತದಾನಕ್ಕೆ ಅವಕಾಶ ಬೇಡ ಎಂದು ಕೋರಿರುವ ೮ ಮಂದಿ ಹಾಗ ಯಾರು ಎಂಬ ಗುರುತು ಪತ್ತೆಯಾಗದ ೮ ಮಂದಿ ಸೇರಿ ಒಟ್ಟು ೫೬೭ ಮಂದಿಯನ್ನು ಅನರ್ಹಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಮೂರು ತಾಲೂಕುಗಳು ಸೇರಿ ೧೮,೭೭೯ ಮಂದಿಗೆ ನೋಟಿಸ್ ನೀಡಿದ್ದು, ೧೧೨ ಮಂದಿಯನ್ನು ಅನರ್ಹಗೊಳಿಸಲಾಗಿದೆ. ವೀರಾಜಪೇಟೆ ಕ್ಷೇತ್ರದಲ್ಲಿ ಮಡಿಕೇರಿ, ವೀರಾಜಪೇಟೆ, ಪೊನ್ನಂಪೇಟೆ ತಾಲೂಕುಗಳು ಸೇರಿ ಒಟ್ಟು ೪೦,೧೦೪ ಮಂದಿಗೆ ನೋಟಿಸ್ ನೀಡಲಾಗಿದ್ದು, ೪೫೫ ಮಂದಿಯನ್ನು ಅನರ್ಹಗೊಳಿಸಲಾಗಿದೆ ಎಂದು ಅವರು ನುಡಿದರು.

ಮಡಿಕೇರಿ ಕ್ಷೇತ್ರದ ಮಡಿಕೇರಿ ತಾಲೂಕಿನಲ್ಲಿ ೯೦೧೮, ಕುಶಾಲನಗರ ತಾಲೂಕಿನಲ್ಲಿ ೫೬೮೪, ಸೋಮವಾರಪೇಟೆ ತಾಲೂಕಿನಲ್ಲಿ ೪೦೭೭, ವೀರಾಜಪೇಟೆ ಕ್ಷೇತ್ರದ ಮಡಿಕೇರಿ ತಾಲೂಕಿನಲ್ಲಿ ೧೨೨೬೧, ವೀರಾಜಪೇಟೆ ತಾಲೂಕಿನಲ್ಲಿ ೧೧೨೦೦, ಪೊನ್ನಂಪೇಟೆ ತಾಲೂಕಿನಲ್ಲಿ ೧೬೬೪೩ ಮಂದಿಗೆ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಜಿಲ್ಲಾಧಿಕಾರಿ ನುಡಿದರು.

ಸ್ವೀಕೃತಿ - ವಿಲೇವಾರಿ

ದಿನಾಂಕ ೧೬-೬-೨೦೨೬ ರಿಂದ ೨೩-೦೯-೨೦೨೬ರವರೆಗೆ ಎಸ್‌ಐಆರ್ ಪ್ರಕ್ರಿಯೆ ಸಂಬAಧ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ನಮೂನೆ ೬ ರಡಿ ಮಡಿಕೇರಿ ಕ್ಷೇತ್ರದಿಂದ ೨೬೭೬ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ೨೬೨೧ ಅರ್ಜಿಗಳನ್ನು ಅಂಗೀಕರಿಸಲಾಗಿದೆ. ೫೫ ಅರ್ಜಿಗಳು ತಿರಸ್ಕೃತಗೊಂಡಿವೆ. ವೀರಾಜಪೇಟೆ ಕ್ಷೇತ್ರದಿಂದ ೨,೮೧೦ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ೨,೭೫೧ ಅರ್ಜಿಗಳು ಅಂಗೀಕಾರಗೊAಡು ೫೯ ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ನಮೂನೆ ೬ ಎನಲ್ಲಿ ಮಡಿಕೇರಿ ಕ್ಷೇತ್ರದಿಂದ ೧೮ ಅರ್ಜಿಗಳು ಸ್ವೀಕೃತಗೊಂಡಿದ್ದು, ೧೧ ಅರ್ಜಿಗಳು ಅಂಗೀಕಾರಗೊAಡು ೭ ಅರ್ಜಿಗಳು ತಿರಸ್ಕೃತಗೊಂಡಿವೆ. ವೀರಾಜಪೇಟೆ ಕ್ಷೇತ್ರದಿಂದ ೪ ಅರ್ಜಿಗಳು ಸ್ವೀಕಾರಗೊಂಡು ೧ ಅಂಗೀಕರಿಸಲ್ಪಟ್ಟು ೩ ತಿರಸ್ಕರಿಸಲ್ಪಟ್ಟಿದೆ.

ನಮೂನೆ ೭ರಲ್ಲಿ ಮಡಿಕೇರಿ ಕ್ಷೇತ್ರದಿಂದ ೪೮೨ ಅರ್ಜಿ ಸ್ವೀಕೃತಗೊಂಡು ೪೨೦ ಅರ್ಜಿ ಅಂಗೀಕಾರಗೊAಡಿದೆ. ೬೨ ತಿರಸ್ಕರಿಸಲ್ಪಟ್ಟಿದೆ. ವೀರಾಜಪೇಟೆ ಕ್ಷೇತ್ರದಿಂದ ೨೧೦ ಅರ್ಜಿ ಸ್ವೀಕಾರಗೊಂಡು, ೯೫ ಅಂಗೀಕರಿಸಲ್ಪಟ್ಟು, ೧೧೫ ತಿರಸ್ಕೃತಗೊಂಡಿದೆ. ನಮೂನೆ ೮ ರಲ್ಲಿ ಮಡಿಕೇರಿ ಕ್ಷೇತ್ರದಿಂದ ೮೭೩೬ ಅರ್ಜಿ ಸ್ವೀಕರಿಸಲ್ಪಟ್ಟು ೮೧೭೪ ಅರ್ಜಿ ಅಂಗೀಕಾರಗೊAಡಿದೆ. ೫೬೨ ಅರ್ಜಿ ತಿರಸ್ಕರಿಸಲ್ಪಟ್ಟಿದೆ. ವೀರಾಜಪೇಟೆ ಕ್ಷೇತ್ರದಲ್ಲಿ ೯೦೫೮ ಅರ್ಜಿ ಸ್ವೀಕರಿಸಲಾಗಿದ್ದು, ೮೫೬೬ ಅರ್ಜಿ ಅಂಗೀಕಾರಗೊAಡು ೪೯೨ ಅರ್ಜಿ ತಿರಸ್ಕಾರಗೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹೇಳಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ)

೧೨೧೩ ಮಂದಿ ಸೇವಾ ಮತದಾರರು

ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಒಟ್ಟು ೧೨೧೩ ಮಂದಿ ಸೇವಾ ಮತದಾರರಿದ್ದಾರೆ. ಈ ಪೈಕಿ ೫೩ ಮಹಿಳೆಯರು, ೧೧೬೦ ಪುರುಷರು ಸೇರಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ೫೩೯ ಪುರುಷರು, ೨೪ ಮಹಿಳೆಯರು ಸೇರಿ ೫೬೩ ಮಂದಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ೬೨೧ ಪುರುಷರು, ೨೯ ಮಹಿಳೆಯರು, ಸೇರಿ ೬೫೦ ಸೇವಾ ಮತದಾರರಿದ್ದಾರೆ.

ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಮಾತ್ರವಲ್ಲದೆ ಎಲ್ಲಾ ಮತಗಟ್ಟೆಗಳಲ್ಲಿ, ತಾಲೂಕು ಕಚೇರಿಗಳಲ್ಲಿ, ಮತದಾರರ ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಹೇಳಿದರು.