ಮಡಿಕೇರಿ, ಅ. ೨೭: ಕೂರ್ಗ್ ಹಾಕ್ಸ್ ಹಾಗೂ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ (ಯುಟಿಎಸ್‌ಸಿ) ವತಿಯಿಂದ ಹಾಕಿ ಕೂರ್ಗ್ ಸಹಕಾರದಲ್ಲಿ ತಾ. ೩೦ ರಿಂದ ಮಡಿಕೇರಿಯ ಸಾಯಿ ಸಿಂಥೇಟಿಕ್ ಟರ್ಫ್ ಮೈದಾನದಲ್ಲಿ ಫ್ಯಾಪ್ ಕಪ್ ಹಾಕಿ ಪಂದ್ಯಾವಳಿ ಜರುಗಲಿದೆ. ಮೂರು ದಿನಗಳ ಕಾಲದ ಪಂದ್ಯಾವಳಿಯಲ್ಲಿ ೪೦+ ಪುರುಷರ ತಂಡ, ೩೫ + ಮಹಿಳಾ ತಂಡ, ೧೬ರ ವಯೋಮಿತಿಯ ಬಾಲಕ-ಬಾಲಕಿಯರ ಹಾಕಿ ತಂಡಗಳು ಭಾಗವಹಿಸಲಿವೆ. ತಾ. ೩೦ ರ ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ, ಮಾಜಿ ಹಾಕಿ ಆಟಗಾರ ಬಲ್ಯಾಟಂಡ ಪಾರ್ಥ ಚಂಗಪ್ಪ, ಯುಟಿಎಸ್‌ಸಿಯ ಹಾಶಿರ್ ಪೊನ್‌ಮನೈಚಿ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗÀAಡ ಲವ, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಗೌರವ ಅತಿಥಿಗಳಾಗಿ ನಿವೃತ್ತ ಸೇನಾಧೀಕಾರಿ, ಹಿರಿಯ ಹಾಕಿ ಆಟಗಾರ ಬಾಬು ಸೋಮಯ್ಯ, ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್, ಮಾಜಿ ಹಾಕಿ ಕೋಚ್ ಮೇಕೇರಿರ ರವಿ ಪೆಮ್ಮಯ್ಯ, ಯುಟಿಎಸ್‌ಸಿಯ ಮಹಮ್ಮದ್ ರಾಫಿ, ಹಿರಿಯ ಹಾಕಿ ಆಟಗಾರ ಕೋಟೆರ ನಾಣಯ್ಯ, ಯುಟಿಎಸ್‌ಸಿ ಅಧ್ಯಕ್ಷ ಜಾನ್ಸನ್ ಮಾಸ್ಟರ್ ಪಾಲ್ಗೊಳ್ಳಲಿರುವುದಾಗಿ ಸಂಯೋಜಕ ಮೇಕೇರಿರ ಬೆಲ್ಲು ಕುಟ್ಟಪ್ಪ ತಿಳಿಸಿದ್ದಾರೆ.