ಪೊನ್ನಂಪೇಟೆ, ಅ. ೨೭: ಪೊನ್ನಂಪೇಟೆಯ ಜೂನಿಯರ್ ಕಾಲೇಜು ಸಮೀಪ ಗೋಣಿಕೊಪ್ಪಲಿಗೆ ತೆರಳುತ್ತಿದ್ದ ಎಕ್ಸೆಲ್ ಮೊಪೆಡ್ ದ್ವಿಚಕ್ರ ವಾಹನಕ್ಕೆ ಹಿಂದಿನಿAದ ಬಂದ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ.
ಮೊಪೆಡ್ನ ಹಿಂಬದಿ ಸವಾರ ವೀರಾಜಪೇಟೆ ತಾಲೂಕು ಪಂಚಾಯಿತಿ ನಿವೃತ್ತ ಉದ್ಯೋಗಿ ರಾಧಾಕೃಷ್ಣ ಬಾರಿತ್ತಾಯ ಅವರ ಮೇಲೆ ಕಾರು ಹರಿದ ಪರಿಣಾಮ, ಅವರ ಬಲಗಾಲಿನ ಮೂಳೆ ಮುರಿದಿದ್ದು, ತಲೆಗೂ ಗಂಭೀರ ಸ್ವರೂಪದ ಗಾಯಗಳಾಗಿವೆ.
ಗಾಯಾಳುವನ್ನು ಸ್ಥಳೀಯರು ಕೂಡಲೇ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.
ದ್ವಿಚಕ್ರ ವಾಹನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಸಂಬAಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಡಿಕ್ಕಿ ಹೊಡೆದು ಪರಾರಿಯಾದ ಕಾರು ಮತ್ತು ಚಾಲಕನ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.