ಶ್ರೀಮAಗಲ, ಅ. ೨೭: ಒಂದು ಜನಾಂಗದ ಹೃದಯ ಬಡಿತವೇ ಆ ಜನಾಂಗದ ಸಂಸ್ಕೃತಿ. ಅದು ನಾಶವಾದರೆ ಆ ಜನಾಂಗವೇ ನಾಶವಾಗಿಹೋಗುತ್ತದೆ ಎಂಬುದನ್ನು ಮನಗಂಡು ಕೊಡವ ಸಂಸ್ಕೃತಿಯನ್ನು ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮದ ಮೂಲಕ ಉಳಿಸುವ ಪ್ರಯತ್ನ ಮಾಡುತ್ತಿರುವ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಈ ಕಾರ್ಯ ಶ್ಲಾಘನೀಯ ಎಂದು ಮೈಸೂರಿನ ವೈದ್ಯೆ ಡಾ. ಅಪ್ಪನೆರವಂಡ ಸೋನಿಯ ಮಂದಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಟಿ. ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಭೂಲೋಕದಲ್ಲೇ ಸೌಂದರ್ಯ ಹಾಗೂ ಧೈರ್ಯ, ಶೌರ್ಯಕ್ಕೆ ಹೆಸರಾಗಿರುವ ಕೊಡವ ಜನಾಂಗದ ಸಂಸ್ಕೃತಿಯೂ ಬಹಳ ವಿಶೇಷವಾದದ್ದು ಹಾಗೂ ವಿಶ್ವ ಖ್ಯಾತಿ ಪಡೆದದ್ದಾಗಿದ್ದು ಅದರ ಮೌಲ್ಯವನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಕಾರ್ಯಕ್ರಮದಲ್ಲಿ ವಯಸ್ಸಿನ ತಾರತಮ್ಯವಿಲ್ಲದೆ ಎಳೆಯರಿಂದ ವಯಸ್ಕರವರೆಗೆ ಎಲ್ಲರಿಗೂ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಎಳೆಯ ವಯಸ್ಸಿನಲ್ಲೇ ಮಕ್ಕಳು ಕೊಡವ ಸಂಸ್ಕೃತಿಯನ್ನು ಕಲಿಯುತ್ತಾರೆ ಹಾಗೂ ಈ ಸಂಸ್ಕೃತಿಯ ಮೌಲ್ಯವನ್ನು ತಿಳಿದುಕೊಳ್ಳುತ್ತಾರೆ. ಎಳವೆಯಲ್ಲಿ ಕಲಿತದ್ದು ಜೀವನ ಪರ್ಯಂತ ನೆನಪಿನಲ್ಲಿ ಉಳಿಯುತ್ತದೆ. ಇಂತಹ ಕಾರ್ಯಕ್ರಮ ಮಾಡಿ ಮಕ್ಕಳಿಗೆ ವೇದಿಕೆ ಸೃಷ್ಟಿ ಮಾಡಿಕೊಡುವುದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕಲಿಕೆಯ ಸಂದರ್ಭ ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಆಗುವುದರ ಜೊತೆಗೆ ಎಲ್ಲರೊಂದಿಗೆ ಭಾವನಾತ್ಮಕ ಸಂಬAಧ ಬೆಳೆಯುತ್ತದೆ. ತನ್ಮೂಲಕ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಇನ್ನಷ್ಟು ಇಂತಹ ಕಾರ್ಯಕ್ರಮ ಈ ಕೊಡವ ಸಮಾಜದಿಂದ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಟಿ. ಶೆಟ್ಟಿಗೇರಿ ಕೊಡವ ಸಮಾಜದ ಸ್ಥಾಪಕ ಸದಸ್ಯರೂ ಹಿಂದಿನ ಆಡಳಿತ ಮಂಡಳಿಯ ಸಲಹೆಗಾರರೂ ಆಗಿದ್ದ ಮಚ್ಚಮಾಡ ಪಾಪು ಸೋಮಯ್ಯ ಮಾತನಾಡಿ, ಪೆರುಮಾಳ್ ಪಟ್ಟಿಯ ನ್ಯಾಯಪೀಠದೊಂದಿಗೆ ಸ್ಥಾಪನೆಗೊಂಡ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜವು ಅಂದು ನ್ಯಾಯ ಪೀಠದಿಂದ ಹೆಸರಾಗಿತ್ತು. ಇಂದು ಕೊಡವ ಸಂಸ್ಕೃತಿ ಉಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರಪಂಚ ಖ್ಯಾತಿ ಪಡೆದಿದೆ. ಯಾವ ಕೊಡವ ಸಮಾಜ, ಸಂಘ-ಸAಸ್ಥೆಯೂ ಮಾಡದ ಈ ಅತ್ಯುತ್ತಮ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮವು ಪ್ರತೀವರ್ಷ ನಡೆಯುತ್ತಿರಲಿ ಎಂದು ಹಾರೈಸಿದರು.
ಸಮಾಜದ ಮಾಜಿ ನಿರ್ದೇಶಕ ಬೊಳ್ಳೇರ ಪೊನ್ನಪ್ಪ ಮಾತನಾಡಿ, ತಾನು ೧೯೭೮ ರಿಂದಲೇ ಕೊಡವಾಮೆಗಾಗಿ ಕೆಲಸ ಮಾಡುತ್ತಿದ್ದರೂ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ನಿರ್ದೇಶಕನಾಗಿದ್ದಾಗ ಸಿಕ್ಕಿದ ಗೌರವ ಯಾವತ್ತೂ ಸಿಕ್ಕಿಲ್ಲ, ಹಿಂದಿನ ಕಾಲದಲ್ಲಿ ಮರೆನಾಡ್ನಿಂದ ಒಡ್ಡೋಲಗವಾಗಿ ತಾಳೇರಿ ಮೂಂದ್ನಾಡ್ ಕೋಲ್ಮಂದ್ನಲ್ಲಿ ಪುತ್ತರಿ ಕೋಲಾಟ್ಗೆ ಬರುತಿದ್ದುದನ್ನು ನೆನೆಸಿಕೊಳ್ಳುತ್ತಾ ಚಂಗ್ರಾAದಿ ಪತ್ತಾಲೋದಿ ಹತ್ತನೇ ವರ್ಷಾಚರಣೆ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಯಪಂಡ ಮೋಹನ್ ಕಾಳಯ್ಯ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ನಿರ್ದೇಶಕಿ ಅಪ್ಪಚಂಗಡ ಲಲಿತ ಮೋಟಯ್ಯ, ಪೆರುಮಾಳೇಶ್ವರ ಆಟೋ ಮಾಲೀಕ ಚಾಲಕರ ಸಂಘದ ಅಧ್ಯಕ್ಷ ಚೊಟ್ಟೆಯಾಂಡಮಾಡ ಪ್ರವೀಣ್ ಮೇದಪ್ಪ, ಬಾಡಗರಕೇರಿ ಮಹಿಳಾ ಸಮಾಜದ ಅಧ್ಯಕ್ಷೆ ಮಲ್ಲೇಂಗಡ ರೀಣ ಶಮ್ಮಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕೊಡವ ಸಮಾಜದ ನಿರ್ದೇಶಕಿ ಚಂಗುಲAಡ ಅಶ್ವಿನಿ ಸತೀಶ್ ಪ್ರಾರ್ಥಿಸಿ, ಸಹ ಕಾರ್ಯದರ್ಶಿ ಬಾದುಮಂಡ ವಿಷ್ಣು ಕಾರ್ಯಪ್ಪ ಸ್ವಾಗತಿಸಿ, ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ನಿರ್ದೇಶಕ ಮಾಣೀರ ದೀಪಕ್ ವಂದಿಸಿದರು. ಕೊಡವ ಸಮಾಜದ ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ, ಖಜಾಂಚಿ ಚಂಗುಲAಡ ಸತೀಶ್, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಡ ರೇಷ್ಮಾ ಕಾರ್ಯಪ್ಪ, ಕಾರ್ಯದರ್ಶಿ ಕಳ್ಳಿಚಂಡ ದೀನ ಉತ್ತಪ್ಪ ಕಾರ್ಯಕ್ರಮ ನಿರ್ವಹಿಸಿದರು.