ಮಡಿಕೇರಿ, . ೨೬: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ, ಕೊಡಗು-ಮಡಿಕೇರಿ ವತಿಯಿಂದ ಕೊಡಗು ಜಿಲ್ಲಾ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ೨೦೨೫-೨೬ನೇ ಸಾಲಿನ ಅಂಕಪಟ್ಟಿಗಳ ಪ್ರತಿಯನ್ನು ನ.೧೫ರೊಳಗೆ ನೀಡುವಂತೆ ಪ್ರಕಟಣೆ ತಿಳಿಸಿದೆ(ವಿದ್ಯಾರ್ಥಿಗಳ ಪೋಷಕರ ಆದಾಯ ಮಿತಿ ವಾರ್ಷಿಕ ರೂ.೩ ಲಕ್ಷ ಮೀರಬಾರದು). ಹೆಚ್ಚಿನ ಮಾಹಿತಿಗೆ ಪ್ರಧಾನ ಸಂಚಾಲಕ, ಪಿ.ವಿ ಅಶೋಕ್, ಮೊ: ೯೯೦೦೮೩೦೦೧೧ ಅವರನ್ನು ಸಂಪರ್ಕಿಸಬಹುದಾಗಿದೆ.

ಅರ್ಜಿ ಹಾಗೂ ಅಂಕಪಟ್ಟಿಗಳನ್ನು ಮಡಿಕೇರಿ ತಾಲೂಕು-ಬಿ.ಕೆ ಜಗದೀಶ್: ೯೪೪೮೨೦೬೬೮೮, ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕು-ಕೆ.ಎಸ್ ರಾಜಶೇಖರ್:೯೪೪೮೦೭೪೨೨೬, ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು-ಎಂ.ಎಸ್ ಸುಧೀರ್ ಕುಮಾರ್ -೯೪೮೩೩೩೩೦೦೭ ಅವರುಗಳಿಗೆ ತಲುಪಿಸಲು ಕೋರಿದೆ.