ಮಡಿಕೇರಿ, ಅ.೨೬; ತೀರ ಹದಗೆಟ್ಟು ಸಂಚಾರಕ್ಕೆ ದುಸ್ತರವಾಗಿದ್ದ ಮಡಿಕೇರಿಯ ರಾಜಾಸೀಟು ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ವರ್ಷಗಳಿಂದ ಹದಗೆಟ್ಟು ಸಂಚಾರಕ್ಕೆ ಕಷ್ಟಕರವಾಗಿದ್ದ ರಾಜಾಸೀಟ್ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಸಲುವಾಗಿ ಕಳೆದ ಮೂರು ತಿಂಗಳ ಹಿಂದೆ ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ; ಕಾಮಗಾರಿ ವೇಳೆÀ ರಸ್ತೆ ಬಂದ್ ಮಾಡಲು ಅನುಮತಿ ದೊರಕದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿತ್ತು. ತಾ.೨೩ರಂದು ನಡೆದ ನಗರಸಭಾ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ. ಮಂತರ್ ಗೌಡ ಅವರು; ಕೂಡಲೇ ಕಾಮಗಾರಿ ಆರಂಭಿಸುವAತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದಿನಿAದ ಗುತ್ತಿಗೆದಾರರು ರಸ್ತೆ ಕಾಮಗಾರಿ ಆರಂಭಿಸಿದ್ದಾರೆ.

ಇದೀಗ ರಸ್ತೆಯಲ್ಲಿರುವ ಡಾಂಬರನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು, ನಾಳೆಯಿಂದ ಜಲ್ಲಿ ಹಾಕಲಾಗುತ್ತದೆ. ಹತ್ತು ದಿನಗಳ ಬಳಿಕ ಕಾಂಕ್ರಿಟ್ ಹಾಕುವ ಕಾರ್ಯ ಆರಂಭವಾಗಲಿದೆ. ನಾಳೆಯಿಂದ ೪೦ ದಿನಗಳ ಕಾಲ ಈ ಪ್ರಮುಖ ರಸ್ತೆ ಬಂದ್ ಆಗಲಿದ್ದು, ಕಾಂಕ್ರಿಟ್ ಹಾಕುವವರೆಗೆ ತುರ್ತು ಸಂದರ್ಭಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವದು, ಆದರೆ ಕಾಂಕ್ರಿಟ್ ಹಾಕಿದ ಬಳಿಕ ಸಂಪೂರ್ಣ ಬಂದ್ ಮಾಡಲಾಗುವದೆಂದು ಗುತ್ತಿಗೆದಾರ ರಜತ್ ಶಕ್ತಿಗೆ ತಿಳಿಸಿದ್ದಾರೆ.

ರಸ್ತೆ ಬಂದ್ ಮಾಡಲು ಹಾಗೂ ರಸ್ತೆ ಬದಿ ಇರುವ ಮರಗಳನ್ನು ತೆರವುಗೊಳಿಸಲು ನಗರಸಭೆ ಮೂಲಕ ಅನುಮತಿ ಪಡೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಶೀಘ್ರದಲ್ಲೇ ಸುಸಜ್ಜಿತ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಲಿದ್ದು, ವರ್ಷಂಪ್ರತಿ ಎದುರಾಗುತ್ತಿದ್ದ ಗುಂಡಿಮಯ ರಸ್ತೆಗೆ ಮುಕ್ತಿ ದೊರಕಿದಂತಾಗುತ್ತದೆ.