(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಅ. ೨೬: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮನೆ ಮನೆಗೆ ೨೦೦ ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಗೃಹ ಜ್ಯೋತಿ ಯೋಜನೆಯ ಮರುಪರಿಶೀಲನಾ ಕಾರ್ಯ ಜುಲೈ ತಿಂಗಳಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಪ್ರಾರಂಭಿಸಿತು.

ಗೃಹಜ್ಯೋತಿ ಮನೆ ಮನೆ ದಾಖಲೆಗಳ ಭೌತಿಕ ಪರಿಶೀಲನೆಗೆ ತಾ.೩೧ಕೊನೆಯ ದಿನವಾಗಿದೆ. ಕಳೆದ ನಾಲ್ಕು ತಿಂಗಳಿAದ ಸೆಸ್ಕ್ ಅಧಿಕಾರಿಗಳು ಗೃಹಜ್ಯೋತಿ ಫಲಾನುಭವಿಗಳ ಮನೆಗೆ ತೆರಳಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್ ) ವ್ಯಾಪ್ತಿಯ ಕೊಡಗು ಜಿಲ್ಲೆಯಲ್ಲಿ ತಾ. ೨೩ ರವರೆಗೆ ಗೃಹ ಜ್ಯೋತಿಯ ಮರುಪರಿಶೀಲನೆ ಶೇ.೮೧.೫೭ ರಷ್ಟು ಪೂರ್ಣಗೊಂಡಿದ್ದು, ೨೯,೧೦೯ ಮನೆಗಳ ಪರಿಶೀಲನೆ ಬಾಕಿ ಇದೆ.ಕೊಡಗು ಜಿಲ್ಲೆಯಲ್ಲಿ ೧,೬೪,೭೮೬ ಗೃಹಜ್ಯೋತಿ ಫಲಾನುಭವಿಗಳ ಮನೆಗಳ ಪೈಕಿ ೧,೩೫,೬೭೭ ಮನೆಗಳ ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದೆ.

ಕುಶಾಲನಗರ ತಾಲೂಕಿನಲ್ಲಿ ೩೫,೦೧೬ ಗೃಹಜ್ಯೋತಿ ಯೋಜನೆಯನ್ನು ಪಡೆಯುತ್ತಿರುವ ಮನೆಗಳ ಪೈಕಿ ೨೫,೯೦೬ (ಶೇ.೬೭.೧೧) ಪೂರ್ಣಗೊಂಡಿದ್ದು, ೯,೧೧೦ ಮನೆಗಳ ಪರಿಶೀಲನೆ ಬಾಕಿ ಇದೆ. ಜುಲೈ ೧೫,೨೧೪, ಆಗಸ್ಟ್ ೮,೧೫೮, ಸೆಪ್ಟೆಂಬರ್ ತಿಂಗಳಲ್ಲಿ ೨,೫೩೪ ಮನೆಗಳ ದಾಖಲೆಗಳನ್ನು ಸೆಸ್ಕ್ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಡಿಕೇರಿ ತಾಲೂಕಿನಲ್ಲಿ ೪೨,೮೨೬ ಫಲಾನುಭವಿಗಳ ಪೈಕಿ ೩೬,೨೩೯ (ಶೇ.೮೩.೧೭)ಮನೆಗಳ ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದ್ದು, ೬,೫೮೭ ಬಾಕಿ ಇದೆ. ಜುಲೈ ೨೧,೯೫೮, ಆಗಸ್ಟ್ ೯,೭೭೨ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ೪,೫೦೯ ಮನೆಗಳ ದಾಖಲೆಗಳ ಪರಿಶೀಲನೆ ನಡೆದಿದೆ.

ಪೊನ್ನಂಪೇಟೆ ತಾಲೂಕಿನಲ್ಲಿ ೨೮,೨೮೪ ಮನೆಗಳ ದಾಖಲೆಗಳನ್ನು ಪರಿಶೀಲನೆ ಮಾಡಬೇಕಿದ್ದು,ಇದರ ಪೈಕಿ ಈಗಾಗಲೇ ೧೯,೬೧೯ (ಶೇ.೬೯.೧೮) ಪೂರ್ಣಗೊಂಡಿದೆ. ೮,೬೬೫ ಬಾಕಿ ಇದೆ. ಜುಲೈ ೧೨,೦೭೩, ಆಗಸ್ಟ್ ೪,೬೬೯ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ೨,೮೭೭ ಮನೆಗಳ ಪರಿಶೀಲನೆ ನಡೆದಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ೩೦,೭೯೭ ಗೃಹಜ್ಯೋತಿ ಫಲಾನುಭವಿಗಳಿದ್ದು,ಈಗಾಗಲೇ ೨೯,೧೬೯(೯೫.೧೨) ಮನೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ. ೧,೬೨೮ ಮಾತ್ರ ಬಾಕಿ ಉಳಿದಿದೆ. ಜುಲೈ ೧೯,೭೭೫, ಆಗಸ್ಟ್ ೫,೩೧೯ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ೪,೦೭೫ ಮನೆಗಳ ದಾಖಲೆಗಳ ಪರಿಶೀಲನೆಯನ್ನು ಸೆಸ್ಕ್ ಪೂರ್ಣಗೊಳಿಸಿದೆ.

ವೀರಾಜಪೇಟೆ ತಾಲೂಕಿನಲ್ಲಿ ೨೭,೮೬೩ ಗೃಹಜ್ಯೋತಿ ಫಲಾನುಭವಿಗಳ ಮನೆಗಳಿದ್ದು ೨೪,೭೪೪ (ಶೇ.೮೮.೦೯) ಮನೆಗಳ ಪರಿಶೀಲನೆ ಪೂರ್ಣಗೊಂಡಿದ್ದು, ೩,೧೧೯ ಬಾಕಿ ಇದೆ.ಸೆಸ್ಕ್ ಸಿಬ್ಬಂದಿಗಳು ಜುಲೈ ೧೫,೭೬೫, ಆಗಸ್ಟ್ ೫,೯೨೫, ಹಾಗೂ ಸೆಪ್ಟೆಂಬರ್ ೩,೦೫೪ ಮನೆಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಇದುವರೆಗೆ ೭೦೭ ಮನೆಗಳ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ೧,೩೬,೩೮೪ ಮನೆಗಳ ಸರ್ವೇ ಪೂರ್ಣಗೊಂಡಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ)

ದಾಖಲೆ ಪರಿಶೀಲನೆ ಕಡ್ಡಾಯ

ಗೃಹ ಜ್ಯೋತಿ ಯೋಜನೆಯಡಿ ನಿರಂತರವಾಗಿ ಶೂನ್ಯ ಬಿಲ್ ಸೌಲಭ್ಯ ಪಡೆಯುತ್ತಿರುವ ಗ್ರಾಹಕರು ಕಡ್ಡಾಯವಾಗಿ ಭೌತಿಕ ಪರಿಶೀಲನೆ ಮಾಡಿಸಿಕೊಳ್ಳಬೇಕು. ತಾ.೩೧ ರೊಳಗೆ ದಾಖಲೆ ಒದಗಿಸದ ಅಥವಾ ಪರಿಶೀಲನೆಗೆ ಒಳಪಡದ ಸಂಪರ್ಕಗಳನ್ನು ಅನರ್ಹ ಅಥವಾ ಅಸ್ತಿತ್ವದಲ್ಲಿಲ್ಲದ ಖಾತೆಗಳು ಎಂದು ಪರಿಗಣಿಸಿ ಯೋಜನೆಯಿಂದ ಹೊರಗಿಡುವ ಸಾಧ್ಯತೆ ಇದೆ.

ಮನೆ ಬಾಗಿಲಿಗೆ ಬಂದ ಸಿಬ್ಬಂದಿಗೆ ಸಿಗದೇ ಇರುವ ಗ್ರಾಹಕರು ತಾ.೩೧ ರೊಳಗೆ ತಮ್ಮ ವ್ಯಾಪ್ತಿಯ ಸೆಸ್ಕ್ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ತೆರಳಬೇಕು. ವಿದ್ಯುತ್ ಬಿಲ್,ಆಧಾರ್ ಕಾರ್ಡ್ ಪ್ರತಿ, ಮಾಲೀಕತ್ವದ ದಾಖಲೆ ಅಥವಾ ಬಾಡಿಗೆ ಕರಾರು ಪತ್ರ, ವೋಟರ್ ಐಡಿ ಅಥವಾ ನಿವಾಸ ದೃಢೀಕರಣ ಪತ್ರದೊಂದಿಗೆ ಮರುಪರಿಶೀಲನೆ ಮಾಡಬೇಕು.

ಕೊಡಗು ಮೊದಲ ಸ್ಥಾನ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಭೌತಿಕ ಪರಿಶೀಲನೆ ಕಾರ್ಯ ಶೇ.೭೬.೨೯ ರಷ್ಟು ಪೂರ್ಣಗೊಂಡಿದೆ. ಸೆಸ್ಕ್ ವ್ಯಾಪ್ತಿಯ ೫ ಜಿಲ್ಲೆಗಳಲ್ಲಿ ಒಟ್ಟು ೨೪,೯೦,೨೭೪ ಗ್ರಾಹಕರು ಗೃಹ ಜ್ಯೋತಿಗೆ ನೋಂದಣಿಯಾಗಿದ್ದು, ನಿಗಮ ೨೪,೨೯,೬೦೭ ಗುರಿ ನಿಗದಿಪಡಿಸಿತ್ತು. ಇದರಲ್ಲಿ ೧೮,೯೯,೮೪೮ ಮನೆಗಳ ಪರಿಶೀಲನೆ ಪೂರ್ಣಗೊಂಡಿದ್ದು, ೫,೨೯,೭೫೯ ಮನೆಗಳು ಬಾಕಿ ಇವೆ. ಐದು ಜಿಲ್ಲೆಗಳಲ್ಲಿ ಕೊಡಗು ಜಿಲ್ಲೆ ಅತಿ ಹೆಚ್ಚು ಪ್ರಗತಿ ಸಾಧಿಸಿದೆ. ಕೊಡಗಿನಲ್ಲಿ ೧,೬೪,೭೮೬ ಗುರಿಗೆ ೧,೩೫,೬೭೭ ಮನೆಗಳ (ಶೇ.೮೧.೫೭) ಪರಿಶೀಲನೆ ಪೂರ್ಣಗೊಂಡಿದೆ. ೨೯,೧೦೯ ಮನೆಗಳು ಬಾಕಿ ಇವೆ.

ಮಂಡ್ಯದಲ್ಲಿ ೫,೦೪,೩೪೨ ಗುರಿಗೆ ೪,೦೩,೪೯೬ (ಶೇ.೭೯.೦೬), ಹಾಸನದಲ್ಲಿ ೫,೩೬,೬೫೪ ಗುರಿಗೆ ೪,೨೫,೬೬೮ (ಶೇ.೭೭.೯೫), ಚಾಮರಾಜನಗರದಲ್ಲಿ ೨,೭೫,೭೨೭ ಗುರಿಗೆ ೨,೧೪,೮೪೬ (ಶೇ.೭೭.೦೨) ಮತ್ತು ಮೈಸೂರು ಜಿಲ್ಲೆಯಲ್ಲಿ ೯,೪೮,೦೯೮ ಗುರಿಗೆ ೭,೨೦,೧೬೧ (ಶೇ.೭೨.೮೫) ಮನೆಗಳ ಪರಿಶೀಲನೆ ಪೂರ್ಣಗೊಂಡಿದೆ.

ಮೈಸೂರು ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಗತಿಯಾಗಿದ್ದು, ಅತಿ ಹೆಚ್ಚು ೨,೨೭,೯೩೭ ಮನೆಗಳು ಬಾಕಿ ಉಳಿದಿವೆ. ಸೆಸ್ಕ್ ವ್ಯಾಪ್ತಿಯಲ್ಲಿ ತಿಂಗಳುವಾರು ನೋಡಿದರೆ ಜುಲೈನಲ್ಲಿ ೧೦,೭೮,೬೮೧, ಆಗಸ್ಟ್ನಲ್ಲಿ ೫,೧೩,೧೯೭, ಸೆಪ್ಟೆಂಬರ್‌ನಲ್ಲಿ ೩,೦೭,೯೭೦ ಮತ್ತು ಅಕ್ಟೋಬರ್ ೨೩ ರವರೆಗೆ ೫೭,೩೬೩ ಮನೆಗಳ ಪರಿಶೀಲನೆ ನಡೆದಿದೆ.