ಶನಿವಾರಸಂತೆ, ಅ.೨೫ : ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಆಡಳಿತ ಮಂಡಳಿಯ ಜೊತೆಗೆ ಸರ್ವ ಸದಸ್ಯರ, ಶಿಕ್ಷಕ ವೃಂದದವರ, ವಿದ್ಯಾರ್ಥಿಗಳ ಹಾಗೂ ಪೋಷಕರ ಸಹಕಾರವೂ ಅತ್ಯಗತ್ಯ ಎಂದು ಭಾರತಿ ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಂ. ಜಗನ್ಪಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಭಾರತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ವಿದ್ಯಾಸಂಸ್ಥೆಯ ೨೦೨೪-೨೫ ಮತ್ತು ೨೦೨೫-೨೬ ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾಸಂಸ್ಥೆಯ ಹಳೇ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮದ ಮೂಲಕ ಶಾಲಾ-ಕಾಲೇಜಿಗೆ ಅಗತ್ಯ ಕೊಡುಗೆಗಳನ್ನು ನೀಡುತ್ತಿದ್ದು ಇದು ಸಂಸ್ಥೆಯ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶ್ಲಾಘಿಸಿದರು.
ಚರ್ಚೆಯಲ್ಲಿ ಸದಸ್ಯರಾದ ಸಿ.ಎಂ. ಪುಟ್ಟಸ್ವಾಮಿ, ಎಸ್.ಪಿ. ರಾಜ, ದೊಡ್ಡಪ್ಪ, ಕೊಮಾರಪ್ಪ ಇತರರು ಪಾಲ್ಗೊಂಡಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎಂ.ಯು.ಮಹಮ್ಮದ್ ಪಾಷ, ನಿರ್ದೇಶಕರಾದ ಬಿ.ಕೆ. ಚಿಣ್ಣಪ್ಪ, ಎ.ಎಂ.ಆನAದ್, ಟಿ.ಆರ್. ಕೇಶವಮೂರ್ತಿ ಮಾತನಾಡಿದರು.
ಮೃತಪಟ್ಟ ಸದಸ್ಯರುಗಳಿಗೆ ಸಭೆಯಲ್ಲಿ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು. ಸಂಸ್ಥೆಯ ಸಿಬ್ಬಂದಿ ರಾಜಶೇಖರ್ ಹಿಂದಿನ ಮಹಾಸಭೆಯ ನಡಾವಳಿ ಓದಿದರು. ಸಂಸ್ಥೆಯ ನಿರ್ದೇಶಕ ಎ.ಎಂ. ಆನಂದ್ ಆಡಳಿತ ಮಂಡಳಿಯ ವರದಿ ಹಾಗೂ ೨೦೨೬-೨೭ ನೇ ಸಾಲಿನ ಆಯ-ವ್ಯಯ ಪಟ್ಟಿಯನ್ನು ಮಂಡಿಸಿದರು.
ಸAಸ್ಥೆಯ ಉಪಾಧ್ಯಕ್ಷ ಮಹಮ್ಮದ್ ಪಾಷ, ನಿರ್ದೇಶಕರಾದ ಎ.ಎಂ. ಆನಂದ್, ಬಿ.ಕೆ. ಚಿಣ್ಣಪ್ಪ, ಟಿ.ಆರ್.ಕೇಶವ ಮೂರ್ತಿ, ಎಂ.ಎಚ್.ಮಹಮ್ಮದ್ ಗೌಸ್ ಉಪಸ್ಥಿತರಿದ್ದರು. ಸಂಸ್ಥೆ ಸದಸ್ಯರು, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಸ್.ಎನ್. ಮೋಹನ್ಕುಮಾರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಜೆ. ಅಶೋಕ್, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಪಿ. ನರಸಿಂಹ ಮೂರ್ತಿ, ಸಿಬ್ಬಂದಿ ಹಸೀನಾ ಬಾನು, ರಾಜಶೇಖರ್, ಪುನೀತ್, ಉಪನ್ಯಾಸಕರು, ಶಿಕ್ಷಕರು ಹಾಜರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಆನಂದ್ ಸ್ವಾಗತಿಸಿ, ಕೇಶವಮೂರ್ತಿ ವಂದಿಸಿದರು.