ಸಿದ್ದಾಪುರ, ಅ. ೨೫: ಕಳೆದ ೧೫ ವರ್ಷಗಳಿಂದ ಕಾರ್ಮಿಕರ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮನವಿ ಇಟ್ಟರು ಒಮ್ಮೆಯೂ ಸಂಘಟನೆಯ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಎಐಟಿಯುಸಿ ಪ್ಲಾಂಟೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ಆರೋಪಿಸಿದ್ದಾರೆ.
ಗುಹ್ಯ ಅಗಸ್ತ್ಯೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಮೊದಲ ಕೊಡಗು ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ೩೦ ಅಕ್ಟೋಬರ್ ೧೯೨೦ ರಂದು ಅಸ್ಥಿತ್ವಕ್ಕೆ ಬಂದ ದೇಶದ ಮೊದಲ ಕಾರ್ಮಿಕ ಸಂಘಟನೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸಂಘಟನೆ
ಸ್ವಾತಂತ್ರ್ಯ ಚಳುವಳಿಯಲ್ಲಿ ಕಾರ್ಮಿಕ ಪಾಲ್ಗೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ೧೦೬ ವರ್ಷಗಳ ಸುಧೀರ್ಘ ಅವಧಿಯಲ್ಲಿ ಕಾರ್ಮಿಕರ ಹಕ್ಕು ಹಾಗೂ ಸವಲತ್ತುಗಳನ್ನು ಹೋರಾಟ ನಡೆಸುತ್ತಾ ರಕ್ಷಣೆ ಮಾಡುತ್ತಿದೆ ಎಂದರು.
ಕಟ್ಟಡ ಕಾರ್ಮಿಕರ ರಾಜ್ಯ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಸಂತೋಷ್ ಲಾಡ್ ಅವರು ಸಚಿವರಾದ ಮೇಲೆ ಪ್ರತಿವರ್ಷ ನವೀಕರಣದ ಆದೇಶ ಮಾಡಿ ನೂರಾರು ಕಾರ್ಮಿಕರು ನೋಂದಣಿ ಕಾರ್ಡ್ ಕಳೆದುಕೊಂಡಿದ್ದು ಮದುವೆ ಸಹಾಯ ಧನ , ಪಿಂಚಣಿ ಹಾಗೂ ಮರಣೋತ್ತರ ಸಹಾಯ ಧನ ವಂಚಿತರಾಗಿದ್ದಾರೆ ಈ ಮೂಲಕ ನವೀಕರಣ ಮೊಟಕುಗೊಂಡ ಕಾರ್ಡ್ಗಳಿಗೆ ಒಂದು ಬಾರಿ ನವೀಕರಣಕ್ಕೆ ಅವಕಾಶ ಕಲ್ಪಿಸ ಬೇಕು ಎಂದರು.
ಇದೇ ಸಂದರ್ಭ ಕಾರ್ಮಿಕರಿಗೆ ನಿವೇಶನ, ಆನೆ ಮಾನವ ಸಂಘರ್ಷಕ್ಕೆ ಪರಿಹಾರ ಮೊತ್ತ ಹೆಚ್ಚಳ, ಹಾಗೂ ಮೃತ ಕುಟುಂಬದ ಸದಸ್ಯರಿಗೆ ಉದ್ಯೋಗ, ಕಟ್ಟಡ ಕಾರ್ಮಿಕರ ಆರೋಗ್ಯ ಸೇವೆಯನ್ನು ತಾಲೂಕು ಖಾಸಗಿ ಆಸ್ಪತ್ರೆ ನೋಂದಣಿ ಸೇರಿದಂತೆ ಹಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಈ ಸಂಬAಧ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಫೀಕ್, ಕಟ್ಟಡ ಕಾರ್ಮಿಕ ಸಂಘಟನೆ ಮೈಸೂರು ಜಿಲ್ಲಾ ಕಾರ್ಯದರ್ಶಿ ಸೋಮರಾಜ್ ಅರಸು, ಕಾಫಿನಾಡು ಕಟ್ಟಡ ಕಾರ್ಮಿಕ ಸಂಘಟನೆ, ಕೆಎಸ್ ಆರ್ ಟಿಸಿ, ಪ್ಲಾಂಟೇಷನ್, ಎಸ್ಎಲ್ಎನ್ ಕಾಫಿ ಕೈಗಾರಿಕಾ ಪ್ರತಿನಿಧಿಗಳು ಹಾಜರಿದ್ದರು.
ಆಯ್ಕೆ
ಎಐಟಿಯುಸಿ ಜಿಲ್ಲಾ ಅಧ್ಯಕ್ಷ ರಾಗಿ ಕೆ.ವಿ. ಸುನಿಲ್, ಉಪಾಧ್ಯಕ್ಷ ರಮೇಶ್ ಕಾರ್ಯದರ್ಶಿ ರವಿತೇಜಾ ಸಹಕಾರ್ಯದರ್ಶಿ ಸೀತಾರಾಂ, ಖಜಾಂಚಿ ಮಣಿ, ಸದಸ್ಯರಾಗಿ ಕೃಷ್ಣ, ಶಿನು ಜೋನ್ ಫ್ರೆಡ್, ನವೀನ್, ಗೌರವ ಅಧ್ಯಕ್ಷ ಸೋಮಪ್ಪ ಆಯ್ಕೆಯಾದರು.