ನಾಪೋಕ್ಲು, ಅ. ೨೫: ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ರಾಷ್ಟಿçÃಯ ಕೆಡೆಟ್ ಕಾಪ್ಸ್ನ ಥಲ್ ಸೈನಿಕ್ ಶಿಬಿರದ ಶೂಟಿಂಗ್ ವಿಭಾಗದಲ್ಲಿ ಮರಗೋಡು ಹೊಸ್ಕೇರಿ ಗ್ರಾಮದ ಮಂಡೀರ (ಪಾಣತಲೆ) ವಿ. ಹರೀಶ್ ಹಾಗೂ ವಿಮಾ ದಂಪತಿಯ ಪುತ್ರ ಜೇಷ್ಠ ಸುಬ್ಬಯ್ಯ ಚಾಂಪಿಯನ್ಶಿಪ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಜೇಷ್ಠ ಸುಬ್ಬಯ್ಯ ಈ ಸಾಧನೆಯನ್ನು ಗುರುತಿಸಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯ ಹಾಗೂ ಸ್ವತಃ ಶೂಟಿಂಗ್ ಕ್ರೀಡಾಪಟುವಾಗಿರುವ ಸೂದನ ಎಸ್. ಈರಪ್ಪ ಅವರು ಪಾಲೂರಿನಲ್ಲಿ ತಮ್ಮ ಕುಟುಂಬದ ಪರವಾಗಿ ಜೇಷ್ಠ ಸುಬ್ಬಯ್ಯ ಅವರನ್ನು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಕುಟುಂಬದ ಹಿರಿಯರು ಹಾಗೂ ಸದಸ್ಯರು ಉಪಸ್ಥಿತರಿದ್ದರು.