ಮಡಿಕೇರಿ, ಅ. ೨೫: ಸುಳ್ಯ ಸಮೀಪದ ಪುಣಚದಲ್ಲಿ ಧಾರ್ಮಿಕ ಕಾರ್ಯಕ್ರಮsÁಗವಹಿಸಿ ಮೈಸೂರಿಗೆ ಹಿಂದಿರುಗುತ್ತಿದ್ದ ಕುಟುಂಬದ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ೧೩ ವರ್ಷದ ಬಾಲಕ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡ ಘಟನೆ ಭಾನುವಾರ ಮುಂಜಾನೆ ರಾಷ್ಟಿçÃಯ ಹೆದ್ದಾರಿ ೨೭೫ರ ಸಂಪಾಜೆ ಸಮೀಪದ ಗೂನಡ್ಕ ಶಾರದಾ ಶಾಲೆಯ ಬಳಿ ನಡೆದಿದೆ.
ಮೃತನನ್ನು ಪುಣಚ ಬರೆಂಗಾಯಿ ಮೂಲದ, ಮೈಸೂರಿನಲ್ಲಿ ಉದ್ಯೋಗದಲ್ಲಿರುವ ನಾರಾಯಣ ನಾಯ್ಕ ಅವರ ಪುತ್ರ ತನುಷ್ (೧೩) ಎಂದು ಗುರುತಿಸಲಾಗಿದೆ. ನಾರಾಯಣ ನಾಯ್ಕ ಅವರು ಮೈಸೂರು ವಿಮಾನ ನಿಲ್ದಾಣದಲ್ಲಿ ಉದ್ಯೋಗದಲ್ಲಿದ್ದು, ಅವರ ಪತ್ನಿ ವಿನುತಾ ಶ್ರೀ (೪೦) ಸಣ್ಣ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ದಂಪತಿ ಮೈಸೂರಿನಲ್ಲಿ ವಾಸವಾಗಿದ್ದಾರೆ. ಬರೆಂಗಾಯಿಯ ಮೂಲ ಮನೆಯಲ್ಲಿ ನಾರಾಯಣ ನಾಯ್ಕ ಅವರ ಅಕ್ಕ ಹಾಗೂ ಮಕ್ಕಳು ವಾಸವಾಗಿದ್ದಾರೆ. ಊರಿನಲ್ಲಿ ನಡೆದ ಶಾರದೋತ್ಸವ, ಹೊಸ ಅಕ್ಕಿ ಊಟ ಮತ್ತು ಅಗೆಲು ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಟುಂಬ ಸಮೇತ ಪುಣಚಕ್ಕೆ ಬಂದಿದ್ದರು. ಭಾನುವಾರ ಮಧ್ಯಾಹ್ನ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಹಿನ್ನೆಲೆಯಲ್ಲಿ ಮುಂಜಾನೆಯೇ ಮೈಸೂರಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಕಾರಿನಲ್ಲಿ ನಾರಾಯಣ ನಾಯ್ಕ, ಪತ್ನಿ ವಿನುತಾ ಶ್ರೀ, ತಾಯಿ ರತ್ನಾ (೬೦), ಪುತ್ರ ತನುಷ್ (೧೩) ಮತ್ತು ಪುತ್ರಿ ನಿಶಿತಾ (೫) ಇದ್ದರು.
ಗೂನಡ್ಕ ಶಾರದಾ ಶಾಲೆಯ ಸಮೀಪ ಕಾರು ಮತ್ತು ಎದುರಿನಿಂದ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎಂಜಿನ್ ಭಾಗ ಹಾಗೂ ಬಾಗಿಲುಗಳು ಜಖಂಗೊAಡಿವೆ.
ಲಾರಿಯ ಮುಂಭಾಗವೂ ಹಾನಿಗೊಳಗಾಗಿದೆ.ಅಪಘಾತದಲ್ಲಿ ತನುಷ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ನಾರಾಯಣ ನಾಯ್ಕ, ವಿನುತಾ ಶ್ರೀ, ರತ್ನಾ ಮತ್ತು ನಿಶಿತಾ ಅವರನ್ನು ಸ್ಥಳೀಯರು ಹಾಗೂ ಪೊಲೀಸರು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸ್ ಠಾಣೆಯ ಎಸ್ಐ ಉದಯ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.