ಚೆಯ್ಯಂಡಾಣೆ, ಅ. ೨೪: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಮುಖ್ಯ ಪಟ್ಟಣದ ಹೃದಯಭಾಗದಲ್ಲಿ ನಾಪೋಕ್ಲು-ವೀರಾಜಪೇಟೆ ಸಂಪರ್ಕ ರಸ್ತೆಯಲ್ಲಿನ ಗುಂಡಿಯನ್ನು ಸ್ಥಳೀಯ ಆಟೋ ಚಾಲಕ ಸಜನ್ ನಂಜುAಡ ಹಾಗೂ ಅವರ ತಂಡ ಮುಚ್ಚಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ಚೆಯ್ಯಂಡಾಣೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರದ ವೇಳೆ ತೊಂದರೆ ಅನುಭವಿಸುವಂತಾಗಿತ್ತು. ಪ್ರಮುಖ ಸಂಪರ್ಕ ರಸ್ತೆಯಾಗಿರುವುದರಿಂದ ಈ ಗುಂಡಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವುದರ ಜೊತೆಗೆ ಅಪಘಾತದ ಭೀತಿಯನ್ನೂ ಸೃಷ್ಟಿಸಿತ್ತು.

ರಸ್ತೆಯ ಗುಂಡಿಯನ್ನು ಮುಚ್ಚಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಾದ ಸಂಬAಧಪಟ್ಟ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಸ್ಥಳೀಯರೇ ಮುಂದಾಗಿ ಸಮಸ್ಯೆಗೆ ಪರಿಹಾರ ಕಂಡುಕೊAಡಿದ್ದಾರೆ.

ಆಟೋ ಚಾಲಕ ಸಜನ್ ನಂಜುAಡ ಅವರೊಂದಿಗೆ ವೇಣು ಹಾಗೂ ಬಾಲಕೃಷ್ಣ ಕೈಜೋಡಿಸಿ ರಸ್ತೆ ಗುಂಡಿಯನ್ನು ಮುಚ್ಚುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.