ನಾಪೋಕ್ಲು, ಅ. ೨೪: ಜಿಲ್ಲಾ ಪಂಚಾಯಿತಿ ಕೊಡಗು ಜಿಲ್ಲೆ, ತಾಲೂಕು ಪಂಚಾಯಿತಿ ಮಡಿಕೇರಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ನಾಪೋಕ್ಲು ಸುತ್ತಮುತ್ತಲಿನ ಗ್ರಾಮಗಳ ಜಾನುವಾರು ಮಾಲೀಕರಿಗೆ ಉಚಿತವಾಗಿ ಮೇವು ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ನಾಪೋಕ್ಲು, ಕೊಳಕೇರಿ, ಹೊದವಾಡ ಹಾಗೂ ಬೇತು ಗ್ರಾಮಗಳ ರೈತರು ಮತ್ತು ಜಾನುವಾರು ಮಾಲೀಕರಿಗೆ ನಾಪೋಕ್ಲು ಪಶು ಆಸ್ಪತ್ರೆಯಲ್ಲಿ ಮೇವಿನ ಮುಸುಕಿನ ಜೋಳ ಮತ್ತು ಸೋರ್ಗಮ್ ಬೀಜಗಳನ್ನು ತಾ. ೨೭ ರಂದು ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ ರವರೆಗೆ ನಾಪೋಕ್ಲು ಪಶು ಆಸ್ಪತ್ರೆಯಲ್ಲಿ ಉಚಿತವಾಗಿ ವಿತರಿಸಲಾಗುತ್ತದೆ.
ಅಗತ್ಯ ದಾಖಲೆಗಳು: ಈ ಸೌಲಭ್ಯವನ್ನು ಪಡೆಯಲು ಇಚ್ಛಿಸುವವರು ತಮ್ಮ ಆಧಾರ್ ಸಂಖ್ಯೆ, ರೈತರ ಈ ಐಡಿ ಸಂಖ್ಯೆ ಹಾಗೂ ಜಮೀನಿನ ಸರ್ವೇ ಸಂಖ್ಯೆಯೊAದಿಗೆ ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಪಶು ಆಸ್ಪತ್ರೆಗೆ ಆಗಮಿಸಿ ಮೇವು ಬೀಜಗಳನ್ನು ಪಡೆದುಕೊಳ್ಳುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ನಾಪೋಕ್ಲು ಅಧಿಕಾರಿಗಳು ಕೋರಿದ್ದಾರೆ.