ಚೆಟ್ಟಳ್ಳಿ, ಅ. ೨೪: ಕೆತ್ತನೆಯಾದ ಕಲ್ಲಿನ ಬಸವನ ಮೂರ್ತಿಯನ್ನು ಕುತೂಹಲದಿಂದ ನೋಡುವ ಹಸುಗಳು ಕುಶಾಲನಗರದ ಬಸವನಹಳ್ಳಿಯಲ್ಲಿರುವ ಓಂ ಶಿಲ್ಪಕಲಾ ಕೇಂದ್ರದಲ್ಲಿ ಕಂಡುಬAದಿದ್ದು, ಈ ಅಪರೂಪದ ದೃಶ್ಯ ನೋಡುಗರ ಗಮನ ಸೆಳೆಯುತ್ತಿದೆ.

ವಿವಿಧ ದೇವರ ಮೂರ್ತಿಗಳ ಕಲ್ಲಿನ ಕೆತ್ತನೆ ನಡೆಯುವ ಈ ಕೇಂದ್ರದಲ್ಲಿ ಬಸವನ ಮೂರ್ತಿಗಳನ್ನು ಕೆತ್ತನೆ ಮಾಡಿದಾಗಲೆಲ್ಲ ಹಸುಗಳು, ದನಗಳು ಅಲ್ಲಿಗೆ ಬಂದು ಮೂರ್ತಿಯನ್ನು ದಿಟ್ಟಿಸಿ ನೋಡುವುದಷ್ಟೇ ಅಲ್ಲ, ಸ್ಪರ್ಶಿಸುತ್ತವೆ. ಕೆಲವೊಮ್ಮೆ ಕಲ್ಲಿನ ಬಸವನ ಪಕ್ಕದಲ್ಲೇ ಸ್ವಲ್ಪ ಸಮಯ ಮಲಗಿ ಬಳಿಕ ತೆರಳುತ್ತವೆ. ಇದು ಇಲ್ಲಿ ಆಗಾಗ ಕಂಡುಬರುವ ವಿಶೇಷ ದೃಶ್ಯ ಎಂದು ಕೇಂದ್ರದ ಮಾಲೀಕ ಅನೀಶ್ ಹೇಳುತ್ತಾರೆ.

ನಿರ್ಜೀವ ಕಲ್ಲಿನ ಮೂರ್ತಿಯ ಮುಂದೆ ನಿಂತು ಅದನ್ನು ನೋಡುವ, ಸ್ಪರ್ಶಿಸುವ ದನಗಳ ವರ್ತನೆ ಅಚ್ಚರಿ ಮೂಡಿಸುತ್ತದೆ. ಕಲ್ಲಿನ ಬಸವನನ್ನು ಅವು ಏಕೆ ಹೀಗೆ ಗಮನಿಸುತ್ತವೆ ಎಂಬುದಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಆದರೂ ಈ ದೃಶ್ಯ ಪ್ರಕೃತಿಯ ಮುಗ್ಧ ಕುತೂಹಲವನ್ನು ನೆನಪಿಸುವಂತಿದೆ. ಶಿಲ್ಪಕಲೆಯ ಸೌಂದರ್ಯಕ್ಕೂ ಪ್ರಾಣಿಗಳ ಸಹಜ ವರ್ತನೆಗೂ ಇಲ್ಲಿ ಒಂದು ಅಪರೂಪದ ನಂಟು ಕಂಡುಬರುತ್ತದೆ.

ಬಸವನಹಳ್ಳಿಯ ಹೆಸರಿನ ಹಿಂದೆಯೂ ಸ್ಥಳೀಯವಾಗಿ ಕುತೂಹಲಕಾರಿ ಹಿನ್ನೆಲೆಯೊಂದನ್ನು ಹೇಳಲಾಗುತ್ತದೆ. ಕೇಂದ್ರವಿರುವ ಈ ಪ್ರದೇಶದಲ್ಲಿ ಹಲವು ಪುರಾತನ ಬಸವನ ಕಲ್ಲುಗಳು ಕಂಡುಬರುತ್ತಿದ್ದು, ಅವು ಈ ನೆಲದ ಹಿಂದಿನ ಕಾಲದ ನೆನಪುಗಳಿಗೆ ಸಾಕ್ಷಿಯಾಗಿವೆ. ಬಸವನ ಕಲ್ಲುಗಳಿರುವ ಕಾರಣದಿಂದಲೇ ಈ ಪ್ರದೇಶಕ್ಕೆ ಬಸವನಹಳ್ಳಿ ಎಂಬ ಹೆಸರು ಬಂದಿರಬಹುದೆAಬ ಸ್ಥಳೀಯರು ಹೇಳುತ್ತಾರೆ.

ಹೀಗಾಗಿ, ಪುರಾತನ ಕಲ್ಲುಗಳ ಮೌನ ಇತಿಹಾಸದ ನಡುವೆ ಇಂದಿಗೂ ಕಲ್ಲಿನ ಬಸವನನ್ನು ನೋಡಲು ಬರುವ ದನಗಳ ದೃಶ್ಯ, ಬಸವನಹಳ್ಳಿಯ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯುತ್ತಿದೆ.

-ಕರುಣ್ ಕಾಳಯ್ಯ